HEALTH TIPS

ವಿದ್ಯುತ್‍ಗೆ ಸಂಬಂಧಿಸಿದ ದೂರುಗಳ ಪರಿಹಾರಕ್ಕೆ ಹೆಚ್ಚಿನ ವೇಗದಲ್ಲಿ ಕ್ಲೌಡ್ ಟೆಲಿಪೋನಿ ಪರಿಚಯಿಸಲಿರುವ ಕೆ.ಎಸ್.ಇ.ಬಿ


             ತೊಡುಪುಳ: ರಾಜ್ಯದ ವಿದ್ಯುತ್ ಗ್ರಾಹಕರಿಗೆ ಹೆಚ್ಚಿನ ವೇಗದಲ್ಲಿ ವಿದ್ಯುತ್ ಸಂಬಂಧಿತ ದೂರುಗಳನ್ನು ಸ್ವಯಂಚಾಲಿತವಾಗಿ ದಾಖಲಿಸಲು ಕ್ಲೌಡ್ ಟೆಲಿಪೋನಿ ಸೌಲಭ್ಯ ವ್ಯವಸ್ಥೆಗೊಳಿಸಲಾಗಿದೆ.
          ಸಾವಿರಾರು ಗ್ರಾಹಕರಿಗೆ ಏಕಕಾಲದಲ್ಲಿ ದೂರು ದಾಖಲಿಸಿ ಮಾಹಿತಿ ನೀಡುವ ವ್ಯವಸ್ಥೆ ಸಿದ್ಧಗೊಳ್ಳುತ್ತಿದೆ.
           ಈ ವ್ಯವಸ್ಥೆಯ ಮೂಲಕ ವಿದ್ಯುತ್ ವ್ಯತ್ಯಯ, ವೋಲ್ಟೇಜ್ ಕೊರತೆ, ಆನ್‍ಲೈನ್ ಪಾವತಿ, ವಿದ್ಯುತ್ ಬಿಲ್ ಇತ್ಯಾದಿ ಎಲ್ಲಾ ದೂರುಗಳನ್ನು ಹೊಸ ಸಂಪರ್ಕವನ್ನು ಹೊರತುಪಡಿಸಿ ನಾವಿದ್ದಲ್ಲಿಂದ ನೋಂದಾಯಿಸಬಹುದು. ಮೊಬೈಲ್ ಸಂಖ್ಯೆ 9496001912 ಗೆ ಕರೆ ಮಾಡುವ ಮೂಲಕ ಈ ಸೇವೆ ಲಭ್ಯವಿದೆ. ವಾಟ್ಸಾಪ್ ಮತ್ತು ಎಸ್‍ಎಂಎಸ್ ವಿಧಾನಗಳ ಮೂಲಕ ಕ್ಲೌಡ್ ಟೆಲಿಪೋನಿ ಸೇವೆಗಳನ್ನು ಒದಗಿಸುವ ವ್ಯವಸ್ಥೆಯನ್ನು ಎರಡನೇ ಹಂತದಲ್ಲಿ ಪರಿಚಯಿಸಲಾಗುವುದು.
           ಪ್ರಸ್ತುತ, ಗ್ರಾಹಕರು ಸೌಲಭ್ಯಗಳನ್ನು ಪಡೆಯಲು ವಿಭಾಗ ಕಚೇರಿಯ ಸ್ಥಿರ ದೂರವಾಣಿ ಅಥವಾ ಟೋಲ್-ಫ್ರೀ ಗ್ರಾಹಕ ಸೇವಾ ಸಂಖ್ಯೆ 1912 ಅನ್ನು ಸಂಪರ್ಕಿಸುತ್ತಾರೆ. ಸುಮಾರು ಹದಿನೈದು ಸಾವಿರ ಗ್ರಾಹಕರಿರುವ ಸೆಕ್ಷನ್ ಕಛೇರಿಯಲ್ಲಿ ಒಮ್ಮೆಗೆ ಒಬ್ಬರನ್ನು ಮಾತ್ರ ಪೋನ್ ನಲ್ಲಿ ಸಂಪರ್ಕಿಸಬಹುದು. ಇದು ಆಗಾಗ್ಗೆ ದೊಡ್ಡ ಪ್ರತಿಭಟನೆಗಳಿಗೆ ಕಾರಣವಾಗುತ್ತದೆ. ಮಳೆ ಮತ್ತು ಗಾಳಿಯ ವಾತಾವರಣದಲ್ಲಿ  ದೀರ್ಘಕಾಲ ಪ್ರಯತ್ನಿಸಿದರೆ ಮಾತ್ರ ಪೋನ್  ಸಂಪರ್ಕ ಲಭ್ಯವಾಗುತ್ತದೆ.
         1912 ಕಾಲ್ ಸೆಂಟರ್ ಏಕಕಾಲದಲ್ಲಿ 48 ಜನರನ್ನು ಸಂಪರ್ಕಿಸಬಹುದು. ಮಳೆಗಾಲ ಮತ್ತು ಪ್ರಕೃತಿ ವಿಕೋಪ ಸಂಭವಿಸಿದಾಗ ಅನೇಕರು ದೂರು ನೀಡಲು ಕರೆ ಮಾಡಿದಾಗ ಹೆಚ್ಚು ಹೊತ್ತು ಪೋನಿನಲ್ಲಿ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.  ಆದ್ದರಿಂದ, ಗ್ರಾಹಕರು ಆಗಾಗ್ಗೆ ದೂರುಗಳನ್ನು ಸಮಯಕ್ಕೆ ವರದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಕ್ಲೌಡ್ ಟೆಲಿಪೋನಿ ವ್ಯವಸ್ಥೆಯು ಸಾಕಾರಗೊಳ್ಳುವುದರೊಂದಿಗೆ ಈ ತೊಂದರೆ ಸಂಪೂರ್ಣವಾಗಿ ಪರಿಹಾರಕೊಳ್ಳಲಿದೆ ಎಂದು ಭಾವಿಸಲಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries