ಪಾಡಿ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದ ನೂತನ ಪ್ರವೇಶದ್ವಾರ ಉದ್ಘಾಟನೆ
0
ಏಪ್ರಿಲ್ 08, 2023
ಬದಿಯಡ್ಕ: ಪಾಡಿ ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ನೂತನವಾಗಿ ನಿರ್ಮಿಸಿರುವ ಪ್ರವೇಶ ದ್ವಾರವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಉದ್ಘಾಟಿಸಿದರು. ದೇಗುಲದ ಅಧ್ಯಕ್ಷ ಹರಿಪ್ರಸಾದ್ ಎಂ.ಜೆ., ಕಾರ್ಯದರ್ಶಿ ವೇಣುಗೋಪಾಲನ್ ಸಿ.ಕೆ., ಕುಂಞÂಕೃಷ್ಣನ್ ನಾಯರ್ ಕಾಟ್ಟುಕೊಚ್ಚಿ, ಶ್ರೀಧರ ಕುಣಿಕುಳ್ಳಾಯ, ಜಗನ್ನಾಥ ಶೆಟ್ಟಿ, ಉಮೇಶ್ ನಾರಿಕಡಪ್ಪ್, ಪ್ರೊ. ಎ.ಶ್ರೀನಾಥ್ ಕೊಲ್ಲಂಗಾನ, ವಿ.ಎನ್. ರವೀಂದ್ರನ್, ಶಂಕರ ಆಳ್ವ, ಆಡಳಿತ ಸಮಿತಿ ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಊರಪರವೂರ ಭಕ್ತಾದಿಗಳು ಜೊತೆಗಿದ್ದರು.
Tags

.jpg)
