ಕಾಸರಗೋಡು: ಕಾಞಂಗಾಡು ರೈಲ್ವೆ ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಶನ್ ಯೋಜನೆಯಲ್ಲಿ ಒಳಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಐಲ್ವೆ ಅಮಿನಿಟಿ ಬೋರ್ಡ್ ಅಧ್ಯಕ್ಷ ಪಿ.ಕೆ ಕೃಷ್ಣದಾಸ್ ತಿಳಿಸಿದ್ದಾರೆ. ಕಾಞಂಗಾಡಿನ ರೈಲ್ವೆ ನಿಲ್ದಾಣ ಸಂದರ್ಶನ ನಡೆಸಿದ ಅವರು ಜನಪ್ರತಿನಿಧಿಗಳು, ರಾಜಕೀಯ ಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಅಮೃತ್ ಸ್ಟೇಶನ್ ಯೋಜನೆಯಲ್ಲಿ ಸೇರ್ಪಡೆಗೊಂಡಲ್ಲಿ, ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 10ಕೋಟಿ ರೂ. ಮೊತ್ತ ಲಭ್ಯವಾಗಲಿದ್ದು, ರೈಲ್ವೆ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ. ಕ್ರಷ್ಣದಾಸ್ ಅವರ ಜತೆ ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ ಸುಜಾತಾ, ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್, ಉಪಾಧ್ಯಕ್ಷ ಎಂ. ಬಲರಾಜ್, ನಗರಸಭಾ ಸದಸ್ಯರು, ವ್ಯಾಪಾರಿ ಸಮಿತಿ ಮುಖಂಡರು ಪಾಲ್ಗೊಂಡಿದ್ದರು.
ಕಾಞಂಗಾಡು ರೈಲ್ವೆ ನಿಲ್ದಾಣ ಶೀಘ್ರ 'ಅಮೃತ್ ಸ್ಟೇಶನ್'ಯೋಜನೆ ವ್ಯಾಪ್ತಿಗೆ
0
ಏಪ್ರಿಲ್ 08, 2023
Tags


