ಕಾಸರಗೋಡು: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್(ಐ.ಎಂ.ಎ)ಕಾಸರಗೋಡು ಶಾಖೆ ವತಿಯಿಂದ ಸಾಮೂಹಿಕ ನಡಿಗೆ ಕಾರ್ಯಕ್ರಮ ಆಯೋಜಿಸಲಾಯಿತು. ಎಲ್ಲರಿಗೂ ಆರೋಗ್ಯ ಎಂಬ ಸಂದೇಶದೊಂದಿಗೆ ಸಾಮೂಹಿಕ ನಡಿಗೆ ಆಯೋಜಿಸಲಾಗಿತ್ತು.
ಕಾಸರಗೋಡು ಜನರಲ್ ಆಸ್ಪತ್ರೆ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಧ್ವಜ ಕಾಣಿಸುವ ಮೂಲಕ ಸಾಮೂಹಿಕ ನಡಿಗೆಗೆ ಚಾಲನೆ ನೀಡಿದರು. ಆಸ್ಪತ್ರೆ ಉಪ ಅಧೀಕ್ಷಕ ಡಾ.ಜಮಾಲ್ ಅಹಮದ್ ಎ, ಐಎಂಎ ಜಿಲ್ಲಾ ಕನ್ವೀನರ್ ಡಾ.ಬಿ.ನಾರಾಯಣ ನಾಯ್ಕ, ಐಎಂಎ ಅಧ್ಯಕ್ಷ ಡಾ.ಗಣೇಶ್ ಮಯ್ಯ, ಐಎಪಿ ಅಧ್ಯಕ್ಷ ಡಾ.ಗೋಪಾಲಕೃಷ್ಣ ಭಟ್, ಡಾ.ಜನಾರ್ದನ ನಾಯ್ಕ, ಐಎಂಎ ಕಾರ್ಯದರ್ಶಿ ಡಾ.ಟಿ.ಕಾಸಿಂ ಉಪಸ್ಥಿತರಿದ್ದರು. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರನ್ನು ಶಾಸಕರು ಗೌರವಿಸಿದರು. ಈ ಸಂರ್ದಭ ಕೋವಿಡ್ ಕಾಲಘಟ್ಟದಲ್ಲಿ ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರು ನಡೆಸಿರುವ ಸೇವೆಯನ್ನು ಶಾಸಕ ಎನ್.ಎ ನೆಲ್ಲಿಕುನ್ನು ಸ್ಮರಿಸಿದರು.
ವಿಶ್ವ ಆರೋಗ್ಯ ದಿನಾಚರಣೆ: ಕಾಸರಗೋಡು ಐಎಂಎ ವತಿಯಿಂದ ಸಾಮೂಹಿಕ ನಡಿಗೆ;
0
ಏಪ್ರಿಲ್ 08, 2023
Tags


