HEALTH TIPS

ಎಲತ್ತೂರು ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ; ಶಾರುಖ್ ಸೈಫೀ ವಿರುದ್ಧ ಯುಎಪಿಐ ವಿಧಿಸುವ ಸಾಧ್ಯತೆ


             ಕೋಝಿಕ್ಕೋಡ್: ಎಲತ್ತೂರ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಶಾರುಖ್ ಸೈಫಿ ವಿರುದ್ಧ ಯುಎಪಿಐ ಆರೋಪಗಳನ್ನು ದಾಖಲಿಸುವ ಸಾಧ್ಯತೆ ಇದೆ.
       ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ನಿರ್ಧರಿಸಲಾಗುವುದು. ಸೆಕ್ಷನ್ 15 ಮತ್ತು 16 ವಿಧಿಸಲಾಗಿದೆ. ಯುಎಪಿಐ ಸೆಕ್ಷನ್ 16 ಮರಣದಂಡನೆ ಶಿಕ್ಷೆಗೆ ಅರ್ಹವಾದ ಅಪರಾಧವಾಗಿದ್ದು, ನಿನ್ನೆ ಬೆಳಗ್ಗೆ ಆರೋಪಿಯನ್ನು ಕೋಝಿಕ್ಕೋಡ್‍ಗೆ ಕರೆತರಲಾಯಿತು. ಈ ವೇಳೆ ಆರೋಪಿಯನ್ನು ಕರೆತಂದ ವಾಹನದ ಟೈರ್ ಪಂಕ್ಚರ್ ಆಯಿತು. ಕಣ್ಣೂರು ಮೇಲೂರು ಸಮೀಪದ ಕಾಟಾಚಿರ ಎಂಬಲ್ಲಿ ಟೈರ್ ಪಂಕ್ಚರ್ ಆಯಿತು. ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ಬಾಕಿಯಾಗಿ ವಾಹನ ಬಳಿಕ ಮತ್ತೊಂದು ವಾಹನಲ್ಲಿ ಆರೋಪಿಯನ್ನು ಕೋಝಿಕ್ಕೋಡ್ ಗೆ ಕರೆದೊಯ್ಯಲಾಯಿತು.
              ಪ್ರಕರಣಕ್ಕೆ ಸಂಬಂಧಿಸಿದಂತೆ ಆತ ನೀಡಿರುವ ಹೇಳಿಕೆಗಳಲ್ಲಿ ವ್ಯತಿರಿಕ್ತತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ಶಾರುಖ್ ನನ್ನು ವೈಜ್ಞಾನಿಕವಾಗಿ ವಿಚಾರಣೆ ನಡೆಸಲಾಗುವುಉ.  ತನಿಖಾ ತಂಡದ ಪ್ರಶ್ನೆಗಳಿಗೆ ಶಾರುಖ್ ಸಹಕಾರ ನೀಡುತ್ತಿದ್ದರೂ ತನಿಖಾ ತಂಡವನ್ನು ದಿಕ್ಕು ತಪ್ಪಿಸುವ ನಡೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹೇಳಿಕೆಗಳು ಅಪ್ರಬು ಮತ್ತು ಮರೆಮಾಚುವ ಯತ್ನಗಳಿವೆ ಎಂದು ಪೊಲೀಸರು ತೀರ್ಮಾನಿಸಿದ್ದಾರೆ.
            ತಾನೊಬ್ಬನೇ ಕೃತ್ಯ ಎಸಗಿದ್ದೇನೆ ಎಂಬುದು ಶಾರುಖ್ ನ  ಮೊದಲ ಹೇಳಿಕೆ. ಆದರೆ ಶಾರುಖ್ ತನಗೆ ಬಂದ ಸೂಚನೆಯಂತೆ ಈ ಕೃತ್ಯ ಎಸಗಿರುವುದಾಗಿ ಮಹಾರಾಷ್ಟ್ರ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. ಹಿಂಸಾಚಾರದ ಹಿಂದೆ ಬೇರೆ ಯಾರೂ ಇಲ್ಲ ಮತ್ತು ತಾನೊಬ್ಬನೇ ಕಾರಣ ಎಂದು ಶಾರುಖ್ ಕೇರಳ ಪೊಲೀಸರಿಗೆ ತಿಳಿಸಿದ್ದಾನೆ. ತನ್ನ ದುರುದ್ದೇಶದಿಂದ ಹೀಗೆ ಮಾಡಿದೆ ಎಂದು ಹೇಳುತ್ತಾನೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries