HEALTH TIPS

ವಿಜಿಲೆನ್ಸ್ ಸೇರಲು ಪರೀಕ್ಷಾ ಪ್ರಹಸನ: ‘ಕೆಲವರಿಗೆ' ಮರು ಪರೀಕ್ಷೆ: ಹಲವರಿಗೆ ಪರೀಕ್ಷೆ ಇಲ್ಲದೆ ನೇಮಕಾತಿ


                    ತಿರುವನಂತಪುರ: ಪೆÇಲೀಸ್ ಇಲಾಖೆಯ ವಿಜಿಲೆನ್ಸ್ ಅಧಿಕಾರಿಗಳ ನೇಮಕಕ್ಕೆ ಪರೀಕ್ಷೆ ನಡೆಸಿ ಅರ್ಹರ ಪಟ್ಟಿ ತಯಾರಿಸಲಾಗುವುದೆಂದು ಪ್ರಕಟಣೆ ನೀಡಲಾಗಿತ್ತು.
           ವಿಜಿಲೆನ್ಸ್‍ಗೆ ನೇಮಕವಾಗುವ ಮುನ್ನ ಪರೀಕ್ಷೆ ನಡೆಸಿ ಅರ್ಹರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಮಾರ್ಚ್ 2 ರಂದು ಘೋಷಿಸಿದ್ದರು. ಅರ್ಹತೆ ಹೊಂದಿದವರಿಗೆ ತರಬೇತಿ ನೀಡಲು ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅಂತಹ ವ್ಯಕ್ತಿಗಳ ಡೇಟಾ ಬೇಸ್ ಸಿದ್ಧಪಡಿಸಿ ಅವರನ್ನು ವಿಜಿಲೆನ್ಸ್‍ನಲ್ಲಿ ನೇಮಿಸಲಾಗುವುದು ಮತ್ತು ಕನಿಷ್ಠ ಮೂರು ವರ್ಷಗಳವರೆಗೆ ಮುಂದುವರಿಯಲು ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿಗಳ ಪ್ರಕಟಣೆ ನೀಡಿದರು.  ವಿಜಿಲೆನ್ಸ್ ನಿರ್ದೇಶಕ ಮನೋಜ್ ಅಬ್ರಹಾಂ ಮಂಡಿಸಿದ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಂಡಿತ್ತು. ಅದರಂತೆ ಜಾಗೃತದಳ ಮುಂದಕ್ಕೆ ಸಾಗಿತು.
            ಆದರೆ ಮಾರ್ಚ್ 17ರಂದು ಹೊರಡಿಸಿದ ವರ್ಗಾವಣೆ ಆದೇಶದಲ್ಲಿ ಪೆÇಲೀಸರಿಂದ 17 ಮಂದಿಯನ್ನು ವಿಜಿಲೆನ್ಸ್ ನ ವಿವಿಧ ಘಟಕಗಳಿಗೆ ನೇಮಿಸಲಾಗಿದೆ. ಪರೀಕ್ಷೆ ಘೋಷಣೆಯಾದ ನಂತರವೂ ತಮ್ಮ ನೆಚ್ಚಿನವರನ್ನು ಕರೆತರಲು ಸ್ಥಳಾಂತರ ಮಾಡಲಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಏಪ್ರಿಲ್ 1 ರಂದು ಪರೀಕ್ಷೆ ಇತ್ತು. ಆದರೆ ಈ ಪರೀಕ್ಷೆಯನ್ನು ಹೊರತುಪಡಿಸಿ ಏಪ್ರಿಲ್ 20 ರಂದು ಮತ್ತೊಮ್ಮೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. 12ರವರೆಗೆ ಅರ್ಜಿ ಸಲ್ಲಿಸಬಹುದು.
          ಎಪ್ರಿಲ್ 1ರಂದು ನಡೆಸಿದ್ದ ಪರೀಕ್ಷೆ ಎಲ್ಲರಿಗೂ ಗೊತ್ತಾಗಿರಲಿಲ್ಲ ಎಂದು ಹೇಳಿ ಮರು ಪರೀಕ್ಷೆ ನಡೆಸಲಾಗುತ್ತಿದೆ. ಎರಡೂ ಪರೀಕ್ಷೆಗಳನ್ನು ಒಟ್ಟುಗೂಡಿಸಿ ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿದೆ. ಇದರ ವಿರುದ್ಧ ಪ್ರತಿಭಟನೆಗಳೂ ನಡೆದಿವೆ. ಎರಡು ಪರೀಕ್ಷೆಗಳನ್ನು ವಿಲೀನಗೊಳಿಸುವುದು ತಾಂತ್ರಿಕವಾಗಿ ಸರಿಯಾಗಿಲ್ಲ ಎಂದು ನೌಕರರು ಹೇಳುತ್ತಾರೆ. ಎರಡು ರೀತಿಯ ಪ್ರಶ್ನೆಗಳನ್ನು ಆಧರಿಸಿದ ಪರೀಕ್ಷೆಗಳನ್ನು ಒಂದು ಮೌಲ್ಯಮಾಪನದಲ್ಲಿ ಹೇಗೆ ಸೇರಿಸಬಹುದು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries