ನವದೆಹಲಿ: ಏಪ್ರಿಲ್ 25 ರಂದು ಪ್ರಧಾನಿ ನರೇಂದ್ರ ಮೋದಿಯವರ ಕೇರಳ ಭೇಟಿ ನೀಡಲಿರುವರು. ಅವರ ಭೇಟಿಯ ಭಾಗವಾಗಿ ಅವರು ವೈಬ್ರೆಂಟ್ ಯೂತ್ ಫಾರ್ ಮಾಡಿಫೈಯಿಂಗ್ ಕೇರಳ (ಯುವಂ) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ಸ್ ನಿಂ ನಿನ್ನೆಯಷ್ಟೇ ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಚಿವ ಎ.ಕೆ.ಆಂಟನಿಯವರ ಪುತ್ರ ಅನಿಲ್ ಆಂಟನಿ ಕಾರ್ಯಕ್ರಮದ ಭಾಗವಾಗಲಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಯಶ್ ಹಾಗೂ ಕ್ರಿಕೆಟಿಗ ರವೀಂದ್ರ ಜಡೇಜಾ ಆಗಮಿಸುವ ನಿರೀಕ್ಷೆ ಇದ್ದು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಭಾರತೀಯ ಯುವ ಮೋರ್ಚಾ ಕೊಚ್ಚಿಯಲ್ಲಿ ಈ ಸಮಾರಂಭ ಸಂಘಟಿಸುತ್ತಿದೆ.
25 ರಂದು ಕೇರಳಕ್ಕೆ ಪ್ರಧಾನಿ ನರೇಂದ್ರ ಮೋದಿ: 'ಯುವಂ' ಸಮ್ಮೇಳನ ಉದ್ಘಾಟನೆ
0
ಏಪ್ರಿಲ್ 07, 2023





