ಕುಂಬಳೆ: ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಸೀತಾಂಗೋಳಿ ಇದರ ವತಿಯಿಂದ ಇಪ್ತಾರ್ ಕೂಟ ಏರ್ಪಡಿಸಲಾಯಿತು. ಸೀತಾಂಗೋಳಿ ಪರಿಸರದ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಬಾಂಧವರು ಇಪ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದರು. ಕ್ಲಬ್ ಅಧ್ಯಕ್ಷ ವಕೀಲ ಥೋಮಸ್ ಡಿ ಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯಂತ ಪಾಟಾಳಿ ಮುಖ್ಯ ಅತಿಥಿಗಳಾಗಿದ್ದರು. ಕ್ಲಬ್ ಕಾರ್ಯದರ್ಶಿ ಪ್ರಸಾದ್ ಸ್ವಾಗತಿಸಿ, ಖಜಾಂಜಿ ರಂಜಿತ್ ರೈ ವಂದಿಸಿದರು.
ಸೀತಾಂಗೋಳಿಯಲ್ಲಿ ಇಫ್ತಾರ್ ಕೂಟ
0
ಏಪ್ರಿಲ್ 11, 2023
Tags




.jpg)
