HEALTH TIPS

ಇಂದಿನಿಂದ ಸಿದ್ಧಿಕುಡಾಲು ಅಮ್ನೂರು ಪರಿವಾರ ದೈವಗಳ ಪ್ರತಿಷ್ಠೆ, ಗೃಹಪ್ರವೇಶ ಹಾಗೂ ನೇಮೋತ್ಸವ


           ಕುಂಬಳೆ: ಸಿದ್ಧಿಕುಡಾಲು ಅಮ್ನೂರು ಸಹಪರಿವಾರ ದೈವಗಳ ಧರ್ಮಚಾವಡಿಯ ಗೃಹ ಪ್ರವೇಶ,ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ ಇಂದಿನಿಂದ(ಏ.9ರಿಂದ) 11ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದು ಧರ್ಮಚಾವಡಿ ಟ್ರಸ್ಟ್ ಸಮಿತಿ ಅಧ್ಯಕ್ಷ ಸಿದ್ಧಿಕುಡಾಲು ಸೀತಾರಾಮ ಶೆಟ್ಟಿ ತಲಮುಗೇರು ತಿಳಿಸಿದರು. ಅವರು ಕಾರ್ಯಕ್ರಮದ ಪೂರ್ವಭಾವಿಯಾಗಿ ಧರ್ಮಚಾವಡಿಯಲ್ಲಿ ನಡೆದ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಪೂರ್ವ ಕಾಲದಿಂದಲೇ ಬಂಟ ಮನೆತನದ ಸುಪರ್ದಿಗೆ ಸೇರಿದ ಕುಡಾಲು ಮೇರ್ಕಳ ಗ್ರಾಮದ ಈ ಪ್ರತಿಷ್ಠಿತ ಮನೆತನದ ಪೂರ್ವಜರು ಅಮ್ನೂರು ದೈವದ ಸಿದ್ಧಿಯಿಂದ ತಾಡೆಓಲೆ ಗ್ರಂಥಗಳ ಮೂಲಗಳಿಂದ ನಾಟಿವೈದ್ಯ ಪದ್ಧತಿಯನ್ನು ಪರಂಪರಾಗತವಾಗಿ ಕರಗತ ಮಾಡಿಕೊಂಡಿದ್ದು ಈಗಿನ ತಲೆಮಾರಿನವರು ಈ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದು ಪ್ರಸ್ತುತ ತರವಾಡು ಜೀರ್ಣೋದ್ಧಾರ ಕಾರ್ಯ ನಡೆದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಗೃಹಪ್ರವೇಶ ಹಾಗೂ ದೈವಗಳ ಪ್ರತಿμÉ್ಠ ನಡೆಯಲಿದೆ ಎಂದರು.
          ಏ.9ಕ್ಕೆ ಸಂಜೆ 6 ಗಂಟೆಗೆ ತಂತ್ರಿಗಳ ಆಗಮನ,ವಿವಿಧ ವೈದಿಕ ತಾಂತ್ರಿಕ ಕಾರ್ಯಕ್ರಮ. ಏ.10ಕ್ಕೆ ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, ಬೆಳಗ್ಗೆ ಗಂಟೆ 8.23ರಿಂದ 10.28ರ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಗೃಹ ಪ್ರವೇಶ, ದೈವ ದೇವರ ಪ್ರತಿμÉ್ಠ  ನಡೆಯಲಿದೆ. ಬಳಿಕ ಮುಡಿಪು ಶುದ್ಧಿ,ಮಹಾಪೂಜೆ ಜರಗಲಿದೆ. ಈ ಸಂದರ್ಭದಲ್ಲಿ ಕೊಂಡೆವೂರು ಶ್ರೀಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳಿಂದ ಅಶೀರ್ವಚನ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಚಂಗು ಕೊರತ್ತಿ ಗುಳಿಗ ದೈವದ ಕೋಲ ನಡೆಯಲಿದೆ. ರಾತ್ರಿ 9 ಗಂಟೆಯಿಂದ ವರ್ಣರ ಪಂಜುರ್ಲಿ ಹಾಗೂ ಕಲ್ಲುರ್ಟಿ ದೈವಗಳ ನರ್ತನ ಸೇವೆ ಜರಗಲಿದೆ. ಏ.11ಕ್ಕೆ ಬೆಳಗ್ಗೆ 10 ಗಂಟೆಗೆ ಧರ್ಮದೈವ ಧೂಮಾವತಿ ದೈವದ ನೇಮೋತ್ಸವ ರಾತ್ರಿ ಗುರು ಹಿರಿಯರ ಆರಾಧನೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ.ಟ್ರಸ್ಟ್ ನ ಕಾರ್ಯದರ್ಶಿ ಸಿದ್ಧಿಕುಡಾಲು ಶರತ್ಚಂದ್ರ ಶೆಟ್ಟಿ ಶೇಣಿ, ಸಿದ್ಧಿಕುಡಾಲು ನಾಗರಾಜ ಶೆಟ್ಟಿ ಮೇರ್ಕಳ, ಸಿದ್ಧಿಕುಡಾಲು ನಾರಾಯಣ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries