HEALTH TIPS

ಪಕ್ಕದ ಸೀಟಲ್ಲಿ ಕುಳಿತಿದ್ದ ಯುವತಿಗೆ ಗುಪ್ತಾಂಗ ಪ್ರದರ್ಶಿಸಿದ ಪ್ರಯಾಣಿಕ ಅರೆಸ್ಟ್​: KSRTC ಬಸ್​ನಲ್ಲಿ ಘಟನೆ

 

            ತಿರುವನಂತಪುರಂ: ಕೆಎಸ್​ಆರ್​ಟಿಸಿ ಬಸ್​ನಲ್ಲಿ ಯುವತಿಗೆ ಗುಪ್ತಾಂಗ ಪ್ರದರ್ಶಿಸಿದ ಆರೋಪದ ಮೇಲೆ 52 ವರ್ಷದ ವ್ಯಕ್ತಿಯನ್ನು ಕೇರಳದ ಕರಮಾನಾ ಪೊಲೀಸರು ಬಂಧಿಸಿದ್ದಾರೆ.

                  ಬಂಧಿತ ವ್ಯಕ್ತಿಯನ್ನು ಜಯನ್​ ಎಂದು ಗುರುತಿಸಲಾಗಿದೆ. ಈತ ಕರಮಾನದ ಚುಲ್ಲಮುಕ್ಕುವಿನ ಮುಂಡಪ್ಲವಿಲ ವೀಟಿಲ ಮೂಲದ ನಿವಾಸಿ.

                     ನೆಮ್ಮಮ್​ ಬಸ್​ ನಿಲ್ದಾಣನಿಂದ ಬಸ್ಸನ್ನೇರಿದ ಹುಡುಗಿಗೆ ಜಯನ್​ ತನ್ನ ಗುಪ್ತಾಂಗ ಪ್ರದರ್ಶಿಸಿದ್ದ. ತನ್ನ ಪಕ್ಕದ ಸೀಟಿನಲ್ಲಿ ಕುಳಿತಿರುವಾಗಲೇ ಆರೋಪಿ ಈ ಕೃತ್ಯ ಎಸಗಿದ್ದಾನೆ. ಆರಂಭದಲ್ಲಿ ಯುವತಿ ನಿರ್ಲಕ್ಷಿಸಿದಳು. ಆದರೆ, ಅನೇಕ ದೂರದವರೆಗೆ ಆರೋಪಿ ತನ್ನ ಕೃತ್ಯವನ್ನು ಮುಂದುವರಿಸಿದ್ದರಿಂದ ಆಕ್ರೋಶಗೊಂಡ ಯುವತಿ ಬಸ್​ನ ಸಿಬ್ಬಂದಿಗೆ ಮಾಹಿತಿ ನೀಡಿದಳು.

               ಬಳಿಕ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕರಮಾನಾ ವೃತ್ತ ನಿರೀಕ್ಷಕ ಸುಜಿತ್​, ಸಬ್​ ಇನ್ಸ್​ಪೆಕ್ಟರ್​ ಸಂತು ಮತ್ತು ಸಿಪಿಒ ಸಾಜನ್​ ಮತ್ತು ಅಭಿಲಾಶ್​ ಯುವತಿಯ ಹೇಳಿಕೆಯನ್ನು ಪಡೆದು, ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries