HEALTH TIPS

ಮದ್ಯದ ಅಮಲಿನಲ್ಲಿ ದೇವಸ್ಥಾನದ ಮುಂದೆಯೇ ಡಾನ್ಸ್​ ಮಾಡಿದ ASIಗೆ ಕಾದಿತ್ತು ಆಘಾತ!

 

                ಇಡುಕ್ಕಿ: ಮದ್ಯದ ಅಮಲಿನಲ್ಲಿ ಸಮವಸ್ತ್ರದಲ್ಲೇ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ ಸಹಾಯಕ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ (ಎಎಸ್​ಐ) ಅನ್ನು ಅಮಾನತು ಮಾಡಲಾಗಿದೆ.

                   ಈ ಘಟನೆ ಕೇರಳದಲ್ಲಿ ನಡೆದಿದೆ. ಸ್ಪೆಷಲ್​ ಬ್ರಾಂಚ್​ ವರದಿಯ ಪ್ರಕಾರ ಇಡುಕ್ಕಿ ಜಿಲ್ಲೆಯ ಸಾಂಥನಪರದ ಎಎಸ್​ಐ ಕೆ.ಪಿ.ಶಾಜಿ ಎಂಬುವರನ್ನು ಅಮಾನತು ಮಾಡಲಾಗಿದೆ. ಪೂಪ್ಪಾರ ಬಳಿ ದೇವಸ್ಥಾನದ ಉತ್ಸವದಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಡಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಳಿಕ ಸ್ಪೆಷಲ್​ ಬ್ರಾಂಚ್​ ತನಿಖೆ ನಡೆಸಿ ವರದಿ ಸಲ್ಲಿಸಿತ್ತು.

               ಅಮಾನತಿಗೆ ಮುಖ್ಯ ಕಾರಣವೆಂದರೆ, ಎಎಸ್​ಐ ಕರ್ತವ್ಯದ ಸಮಯದಲ್ಲಿ ಸಮವಸ್ತ್ರದಲ್ಲೇ ಸಾರ್ವಜನಿಕರ ಮುಂದೆ ಡಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ಕರ್ತವ್ಯ ಲೋಪ ಎಸಗಿರುವುದು ವರದಿಯಲ್ಲಿ ಸ್ಪಷ್ಟವಾಗಿದೆ. ಮುನ್ನಾರ್ ಡಿವೈಎಸ್ಪಿ ನೀಡಿದ ವರದಿಯನ್ನು ಆಧರಿಸಿ ಎರ್ನಾಕುಲಂ ಡಿಐಜಿ, ಶಾಜಿಯನ್ನು ಅಮಾನತುಗೊಳಿಸಿದ್ದಾರೆ. Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries