HEALTH TIPS

ಅಣ್ಣನ ಚಿಕಿತ್ಸೆಗೆ ಹಣ sಸಂಪಾದನೆಯ ಲಕ್ಷ್ಯದಲ್ಲಿ ಗೆರಟೆ ಕಲಾಕೃತಿಗಳ ಅಪ್ಪಿದ ಅಪ್ಪು


         ಕಾಸರಗೋಡು: ಬಹುತೇಕರು ಹವ್ಯಾಸ-ಅಭಿರುಚಿಗಳನ್ನು ಬೆಳೆಸಿ ಸಂತೃಪ್ತರಾಗುತ್ತಾರೆ. ಆಂತರಿಕ ತೃಪ್ತಿಯ ಜೊತೆಗೆ ಒಂದಷ್ಟು ಸಾಧನೆಯ ಮೂಲಕ ಗುರುತಿಸಿಕೊಳ್ಳಲು ಇದು ನೆರವಾಗುತ್ತದೆ. ಆದರೆ ಕಾಸರಗೋಡು ಬಂಗಲೆಯ ನಿವಾಸಿ ಮೂಕ ಮತ್ತು ಕಿವುಡ ಅಪ್ಪುಗೆ ಇದು ಜೀವನ ಕ್ರಮವಾಗಿದೆ. ಈ ಮೂಲಕ ಕಿಡ್ನಿ ರೋಗಿಯಾಗಿರುವ ತನ್ನ ಅಣ್ಣ ರಂಜಿತ್ ಚಿಕಿತ್ಸೆಗೆ ಹಣ ಸಂಗ್ರಹದ ಲಕ್ಷ್ಯ ಅಪ್ಪುವಿನ ಮೇಲಿದೆ. ಕಾಸರಗೋಡು ಮಾರ್ಥೋಮಾ ಕಿವುಡರ ಶಾಲೆಯಲ್ಲಿ 2ನೇ ತರಗತಿಯವರೆಗೆ ಓದಿದ್ದರೂ ಕುಟುಂಬದ ಬಡತನ ಹಾಗೂ ಸಹೋದರನ ಅನಾರೋಗ್ಯದ ಕಾರಣದಿಂದ ಓದು ಮುಂದುವರಿಸಲಾಗಲಿಲ್ಲ.
            ಮನೆಯಲ್ಲಿ ಸುಮ್ಮನೆ ಕೂತಿದ್ದಾಗ ಕುತೂಹಲದಿಂದ ಕುಸುರಿ ಕೆಲಸ ಆರಂಭಿಸಿದ ಎನ್ನುತ್ತಾರೆ ಅಪ್ಪುವಿನ ತಂದೆ ದಾಮೋದರನ್. ಅಪ್ಪುವಿನ ಮನೋಹರ ಹವ್ಯಾವೆಂದರೆ ಗೆರಟೆಗಳ ಮೂಲಕ ಚಿತ್ತಾಕರ್ಷಕ ಮಾದರಿಗಳನ್ನು, ಶಿಲ್ಪಗಳನ್ನು ಸೃಷ್ಟಿಸುವುದು. ಗೊಂಚಲುಗಳು, ಗಂಟೆಗಳು ಮತ್ತು ವಿವಿಧ ರೀತಿಯ ಪಾತ್ರೆಗಳು ಯಾರನ್ನೂ ಬೆರಗುಗೊಳಿಸದಿರದು. ಗೆರಟೆಯಿಂದ ಗಂಟೆ ಮತ್ತು ಚಮಚವನ್ನು ಅವಶ್ಯಕತೆಗೆ ಅನುಗುಣವಾಗಿ ತಯಾರಿಸಲಾಗುತ್ತದೆ. ಕೋವಿಡ್ ಅವಧಿಯಲ್ಲಿ ಅಪ್ಪು ಅತಿ ಹೆಚ್ಚು ಗೆರಟೆ ಕಲಾಕೃತಿಗಳನ್ನು ನಿರ್ಮಿಸಿ ಅಕ್ಷರಶಃ ಕುಟುಬಕ್ಕೆ ಆಧಾರವಾವರು.
            ಕೂಲಿ ಕಾರ್ಮಿಕರಾದ ತಂದೆ ತಾಯಿಗೆ ಉದ್ಯೋಗ ಸಿಗದೇ ಕೋವಿಡ್ ಅವಧಿಯಲ್ಲಿ ಅಣ್ಣನ ಚಿಕಿತ್ಸೆ ನಿಂತು ಹೋಯಿತು. ಈ ಜಟಿಲ ಸನ್ನಿವೇಶಲ್ಲಿ ಕರಕುಶಲ ಉತ್ಪಾದನೆ ಅಪ್ಪುಗೆ ಆದಾಯದ ಮೂಲವಾಗಿ ತೆರೆದುಕೊಂಡಿತು. ವಿವಿಧ ಕ್ಲಬ್‍ಗಳು ಮತ್ತು ಸಂಸ್ಥೆಗಳು ನಡೆಸುವ ಕರಕುಶಲ ಮೇಳಗಳಲ್ಲಿ ಇವರ ಗರಟೆ ಶಿಲ್ಪಗಳ ಮಾರುಕಟ್ಟೆ ಮುನ್ನಡೆಸಿದೆ. ಶಿಲ್ಪಕಲೆ ಉತ್ಪಾದನೆಯನ್ನು ವಿಸ್ತರಿಸಬೇಕಾದರೆ, ಸರ್ಕಾರದಿಂದ ಕೆಲವು ರೀತಿಯ ಸಹಾಯ ಬೇಕಾಗುತ್ತದೆ. ಪ್ರಸ್ತುತ 30 ರ ಹರೆಯ ಅಪ್ಪು ಅದಕ್ಕೆ ದಾರಿ ಹುಡುಕುತ್ತಿದ್ದಾನೆ.



      ಅಭಿಮತ:
   ಕರಕುಶಲ ಕಲೆಯಲ್ಲಿ ಹೆಚ್ಚೇನೂ ಅರಿವಿರದಿದ್ದರೂ, ಸ್ವತಃ ಚಿಂತಿಸಿ ಪ್ರಸ್ತುತ ಕೆಲವು ಕಲಾಕೃತಿಗಳನ್ನು ಗೆರಟೆಯ ಮೂಲಕ ಮಾಡುತ್ತಿರುವೆ. ಸರ್ಕಾರ ಅಥವಾ ಸಂಘಸಂಸ್ಥೆಗಳ ನೆರವು ಲಭಿಸಿರೆ ಹೆಚ್ಚಿನ ಪ್ರಮಾಣಲ್ಲಿ ವಿಸ್ತರಿಸಿ ಆದಾಯ ಗಳಿಸುವ ಮೂಲಕ ಕುಟುಂಬಕ್ಕೆ ಆದಾಯ ನೀಡುವ ಲಕ್ಷ್ಯವೊಂದೇ ನನ್ನದು.
                         -ಅಪ್ಪು
                        ಗೆರಟೆ ಕಲಾಕೃತಿ ಕಲಾವಿದ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries