HEALTH TIPS

Water Testing Device: ನಾವು ಕುಡಿಯುವ ನೀರು ಎಷ್ಟು ಶುದ್ಧ ಎಂಬುದನ್ನು ಮೊಬೈಲ್ ಮೂಲಕ ತಿಳಿಯಬಹುದು! ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ

 ಕುಡಿಯುವ ನೀರು ಶುದ್ಧವಾಗಿಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವ ಸಂಭವವಿದೆ.. ಆದರೆ ಕುಡಿಯುವ ನೀರು ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಮೊಬೈಲ್ ಫೋನ್ ಸಾಕು ಎಂಬುದು ನಿಮಗೆ ತಿಳಿದಿದೆಯೇ? 

17 ವರ್ಷದ ಅಭಿಜೀತ್ ಒಂದು ಹೊಸ ಸಂಶೋಧನೆ ಮಾಡಿದ್ದಾರೆ. ಈಗ ನಮ್ಮ ಮನೆಗಳಿಗೆ ಬರುವ ನೀರು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಯಾವುದೇ ಲ್ಯಾಬ್‌ನಲ್ಲಿ ನೀರನ್ನು ಪರೀಕ್ಷಿಸುವ ಅಗತ್ಯವಿಲ್ಲ. ನೀರಿನ ಎಲ್ಲಾ ಮಾಹಿತಿಯು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ.

17 ವರ್ಷದ ಅಭಿಜೀತ್ ವಿಶೇಷ ಸಾಧನದ ಮೂಲಕ ಇದನ್ನು ಸಾಧ್ಯವಾಗಿಸಿದ್ದಾರೆ. ಈ ಸಾಧನವನ್ನು ಮನೆಗಳಲ್ಲಿ ಬಳಕೆ ಮಾಡಬಹುದು, ಫೋನ್ ನೀರಿನ ಶುದ್ಧತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವುದಲ್ಲದೆ, ಆ ವರದಿಯನ್ನು ಆಧರಿಸಿ ಏನು ಮಾಡಬೇಕೆಂದು ಹೇಳುತ್ತದೆ.

ನೀರಿನ ಟಿಡಿಎಸ್ ಮತ್ತು ಪಿಹೆಚ್ ಮೌಲ್ಯದಿಂದ ಆರ್ಸೆನಿಕ್ ಮತ್ತು ಕಬ್ಬಿಣದ  ಮಾಹಿತಿ ಲಭ್ಯವಿದೆ. ಪ್ರಸ್ತುತ ಈ ಸಾಧನವು 5,000 ರೂ.ಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತೆ ಎಂದು ಅಭಿಜೀತ್ ಹೇಳಿದ್ದಾರೆ.

ಈ ಸಾಧನವು ನಿಮ್ಮ ಮೊಬೈಲ್​ಗೆ ನೇರವಾಗಿ ಮಾಹಿತಿ ರವಾನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧಕರಾದ  17 ವರ್ಷದ ಅಭಿಜೀತ್  ತಿಳಿಸಿದ್ದಾರೆ. ನೀವು ಇದನ್ನು ಬಳಸಿ ನೋಡಬಹುದು. 

ಇದಲ್ಲದೆ, ನೀರಿಗೆ ಸಂಬಂಧಿಸಿದ ನೈಜ-ಸಮಯದ ವರದಿಯನ್ನು ಆಧರಿಸಿ ಸಲಹೆಯನ್ನು ಸಹ ನೀಡುತ್ತದೆ. ಇದು ರಾಸಾಯನಿಕವಾಗಿ ಬದಲಾಗಿ ನಂತರ ಎಲೆಕ್ಟ್ರಾನಿಕ್​ ಆಗಿ ನಂತರ ಡಿಜಿಟಲ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನೀರು ವ್ಯರ್ಥವಾಗುವುದಿಲ್ಲ ಎನ್ನುತ್ತಾರೆ.

ನೀರಿನಲ್ಲಿ ಆರ್ಸೆನಿಕ್ ಮತ್ತು ಬ್ಯಾಕ್ಟೀರಿಯಾದಂತಹ ಅಪಾಯಕಾರಿ ಅಂಶಗಳನ್ನು  ಪತ್ತೆ ಹಚ್ಚಲು ಇದು ಸಹಾಯ ಮಾಡುತ್ತದೆ. ನೀರಿನಲ್ಲಿ ಟಿಡಿಎಸ್ ಹೆಚ್ಚಾದರೆ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತೇವೆ ಎಂದು ಅಭಿಜಿತ್ ಕುಮಾರ್ ಹೇಳಿದ್ದಾರೆ. Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries