ಅಹಮದಾಬಾದ್: ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಸಿಲುಕಿದ್ದ 231 ಭಾರತೀಯರನ್ನು ಮಂಗಳವಾರ ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಕರೆತರಲಾಯಿತು. ಈ ನಿವಾಸಿಗಳಿದ್ದ ವಿಮಾನವು ಅಹಮದಾಬಾದ್ ವಿಮಾನನಿಲ್ದಾಣಕ್ಕೆ ಬಂದಿಳಿಯಿತು.
0
samarasasudhi
ಮೇ 03, 2023
ಅಹಮದಾಬಾದ್: ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಸಿಲುಕಿದ್ದ 231 ಭಾರತೀಯರನ್ನು ಮಂಗಳವಾರ ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಕರೆತರಲಾಯಿತು. ಈ ನಿವಾಸಿಗಳಿದ್ದ ವಿಮಾನವು ಅಹಮದಾಬಾದ್ ವಿಮಾನನಿಲ್ದಾಣಕ್ಕೆ ಬಂದಿಳಿಯಿತು.
ಅನಿವಾಸಿ ಗುಜರಾತಿ (ಎನ್‌ಆರ್‌ಜಿ) ವಿಭಾಗದ ನಿರ್ವಹಣೆಯನ್ನು ಮಾಡುವ ಗುಜರಾತ್‌ನ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘ್ವಿ ಅವರು, ಜಿದ್ದಾದಿಂದ ವಿಶೇಷ ವಿಮಾನದಲ್ಲಿ ಬಂದ ರಾಜ್ಯದ ನಿವಾಸಿಗಳನ್ನು ಬರಮಾಡಿಕೊಂಡರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಾಂಘ್ವಿ, ಗುಜರಾತ್‌ನ 208 ಜನ, ಪಂಜಾಬ್‌ನ 13 ಮತ್ತು ರಾಜಸ್ಥಾನದ 10 ಮಂದಿ ವಿಮಾನದಲ್ಲಿ ಬಂದಿಳಿದರು. ಇವರನ್ನು ಅವರ ಮನೆಗಳಿಗೆ ಕಳುಹಿಸಲು ಸರ್ಕಾರವು ಸಾರಿಗೆ ಸೌಲಭ್ಯ ಕಲ್ಪಿಸಿದೆ ಎಂದು ತಿಳಿಸಿದರು. ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಇದುವರೆವಿಗೆ ಗುಜರಾತ್‌ನ ಒಟ್ಟು 360 ಜನ ವಾಪಸು ಬಂದಿದ್ದಾರೆ ಎಂದು ವಿವರಿಸಿದರು.