ನವದೆಹಲಿ: ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ನೇಮಕಾತಿಗಾಗಿ 'ಸಿಯು-ಚಾಯನ್' ಹೆಸರಿನ ಏಕೀಕೃತ ನೇಮಕಾತಿ ಪೋರ್ಟಲ್ ಅನ್ನು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಆರಂಭಿಸಿದೆ. 'ಈ ಪೋರ್ಟಲ್ ಸಂಪೂರ್ಣ ಬಳಕೆದಾರ ಸ್ನೇಹಿಯಾಗಿದೆ.
0
samarasasudhi
ಮೇ 03, 2023
ನವದೆಹಲಿ: ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ನೇಮಕಾತಿಗಾಗಿ 'ಸಿಯು-ಚಾಯನ್' ಹೆಸರಿನ ಏಕೀಕೃತ ನೇಮಕಾತಿ ಪೋರ್ಟಲ್ ಅನ್ನು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಆರಂಭಿಸಿದೆ. 'ಈ ಪೋರ್ಟಲ್ ಸಂಪೂರ್ಣ ಬಳಕೆದಾರ ಸ್ನೇಹಿಯಾಗಿದೆ.
ಈ ಪೋರ್ಟಲ್ ಒಂದರಿಂದಲೇ ಯಾವುದೇ ಕೇಂದ್ರೀಯ ವಿಶ್ವವಿದ್ಯಾಲಯದ ಬೋಧಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಾಧ್ಯ. ಸಿಯು- ಚಾಯನ್ ಪೋರ್ಟಲ್ ಅನ್ನು ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಸಮಾಲೋಚಿಸಿ, ಅವರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದು ರೂಪಿಸಲಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಯುಜಿಸಿಯಿಂದ ಅಗತ್ಯ ತರಬೇತಿಗಳನ್ನು ನೀಡಲು ಈ ಪೋರ್ಟಲ್ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.