ಕಾಸರಗೋಡು: ನಗರದ ತಳಂಗರೆಯ ಕಾಸರಗೋಡು ನ್ಯಾಷನಲ್ ಸ್ಪೋಟ್ರ್ಸ್ ಕ್ಲಬ್ ತನ್ನ 50ನೇ ವಾರ್ಷಿಕೋತ್ಸವ ಆಚರಣೆ ಸಿದ್ಧತೆಯಲ್ಲಿದ್ದು, ವರ್ಷಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 1972ರಲ್ಲಿ ರೂಪುಗೊಂಡ ಕಾಸರಗೋಡು ನ್ಯಾಷನಲ್ ಸ್ಪೋಟ್ರ್ಸ್ ಕ್ಲಬ್ ಕೇರಳದ ಅತ್ಯುತ್ತಮ ಫುಟ್ಬಾಲ್ ಕ್ಲಬ್‍ಗಳಲ್ಲಿ ಒಂದಾಗಿದೆ ಎಂದು ಕ್ಲಬ್ ಅಧ್ಯಕ್ಷ ಕೆ.ಎಂ ಹನೀಫಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
50 ನೇ ವಾರ್ಷಿಕೋತ್ಸವದ ಅಂಗವಾಗಿ, ಒಂದು ವರ್ಷದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ 50ನೇ ವಾರ್ಷಿಕೋತ್ಸವದ ಲಾಂಛನ ಜಿಲ್ಲಾ ಪೆÇಲೀಸ್ ವರಿಷ್ಠ ಡಾ. ವೈಭವ್ ಸಕ್ಸೇನಾ ಬಿಡುಗಡೆಗೊಳಿಸಿದ್ದಾರೆ. 50ನೇ ವಾರ್ಷಿಕೋತ್ಸವ ಅಂಗವಾಗಿ 2023 ರ ಮೇ 5 ರಿಂದ 21 ರವರೆಗೆ ಜಿಲ್ಲಾ ಮಟ್ಟದ ಸೆವೆನ್ಸ್ ಫುಟ್ಬಾಲ್ ಪಂದ್ಯಾವಳಿ ತಳಂಗರ ಸರ್ಕಾರಿ ಮುಸ್ಲಿಂ ಪ್ರೌಢಶಾಲೆಯ ಮೈದಾನದಲ್ಲಿ ಜರುಗಲಿದೆ.
ವಿಜೇತರಿಗೆ ಪ್ರಥಮ 1 ಲಕ್ಷ ರೂಪಾಯಿ ನಗದು, ಶಾಶ್ವತ ಫಲಕ, ದ್ವಿತೀಯ 50ಸಾವಿರ ರೂ. ನಗದು ಮತ್ತು ಶಾಶ್ವತ ಫಲಕ ನೀಡಲಾಗುವುದು. ಆಹ್ವಾನಿತ ತಂಡಗಳಿಗೆ ಪಂದ್ಯಾಟದಲ್ಲಿ ಪಾಲ್ಗೊಳ್ಳಬಹುದಾಗಿದೆ. ಪಂದ್ಯಾವಳಿಯ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನೂ ರಚಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಉಪಾಧ್ಯಕ್ಷ ಟಿ.ಎ ಶಾಫಿ, ಪ್ರಧಾನ ಕಾರ್ಯದರ್ಶಿ ಎನ್.ಕೆ. ಅನ್ವರ್, ಕೋಶಾಧಿಕಾರಿ ಟಿ.ಎ. ಮುಹಮ್ಮದ್ ಕುಞÂ ಉಪಸ್ಥಿತರಿದ್ದರು.




