ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಎಐಐಎಂಎಸ್(ಏಮ್ಸ್) ಕಾಸರಗೋಡು ಜನಪರ ಒಕ್ಕೂ ವತಿಯಿಂದ ಕಾಸರಗೋಡು ಜನರಲ್ ಆಸ್ಪತ್ರೆ ಎದುರು ಪ್ರತಿಭಟನಾ ಧರಣಿ ನಡೆಸಿತು. ಅಸಮರ್ಪಕ ಲಿಫ್ಟ್ ವ್ಯವಸ್ಥೆ, ರ್ಯಾಂಪ್ ಅಲಭ್ಯತೆಯಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಎತ್ತಿ ಹಿಡಿದು ಮೆರವಣಿಗೆ ನಡೆಸಿತು.
ಅಧ್ಯಕ್ಷ ಗಣೇಶನ್ ಅರಮಂಗಾನ ನೇತೃತ್ವ ವಹಿಸಿದ್ದರು. ಖ್ಯಾತ ಕವಿ ಪ್ರೇಮಚಂದ್ರನ್ ಚೆಂಬೋಲ ಧರಣಿ ಉದ್ಘಾಟಿಸಿದರು. ಏಮ್ಸ್ ಜನಪರ ಒಕ್ಕೂ ಈ ಬಗ್ಗೆ ಸಚಿವರಿಗೆ ದೂರು ನೀಡಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ವಿಜಿಲೆನ್ಸ್ ತನಿಖೆಗೆ ಮುಂದಾಗಿದೆ ಎಂದು ತಿಳಿಸಿದರು.
ಕುಞÂಕೃಷ್ಣನ್ ಜೋಯಿಸರ್, ಹಸೈನಾರ್ ತೊಟ್ಟುಂಭಾಗ್, ಉದಯಮಲ್ಲೀ ಮಧೂರು, ಉಸ್ಮಾನ್ ಕಡವತ್, ಅಹ್ಮದ್ ಚೌಕಿ, ನಾಸರ್ ಪಿ.ಕೆ ಚಾಳಿಂಗಲ್, ಖಾಲಿದ್ ಕೊಳವಯಲ್, ಸಂಜೀವನ್ ಪುಲಿಕೂರ್, ಆನಂದನ್ ಪೆರುಂಬಳ,ಅಹ್ಮದ್ ಕಿರ್ಮಾನಿ ಮುಂತಾದ ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.
ಸಿಸ್ಟರ್ ಜಯಾ ಆಂಟೋ ಮಂಗಲ್‍ದಾಸ್ ಸ್ವಾಗತಿಸಿದರು. ಸಲೀಂ ಚೌಕಿ ವಂದಿಸಿದರು.




