ಕಾಸರಗೋಡು: ಭಾರತ್ ಬೀಡಿ ಕಾರ್ಮಿಕರನ್ನು ಬೀಡಿ ಸಿಗಾರ್ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಸದಸ್ಯರನ್ನಾಗಿ ಮಾಡುವುದು, ಎಲ್ಲಾ ಬೀಡಿ ಕಾರ್ಮಿಕರನ್ನು ಇಎಸ್‍ಐ ಯೋಜನೆಯಲ್ಲಿ ಒಳಪಡಿಸುವುದು, ಗುತ್ತಿಗೆ ಮತ್ತು ಉಪ ಗುತ್ತಿಗೆ ಪದ್ಧತಿಯನ್ನು ಕೊನೆಗೊಳಿಸುವುದು, ಕಾರ್ಮಿಕರಿಗೆ ಗುರುತಿನ ಚೀಟಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಮುಂದಿರಿಸಿ ಕಾಸರಗೋಡು ತಾಲೂಕು ಬೀಡಿ ಕಾರ್ಮಿಕರ ಒಕ್ಕೂಟ(ಸಿಐಟಿಯು) ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕಾಸರಗೋಡಿನ ಭಾರತ್ ಬೀಡಿ ಕೇಂದ್ರ ಕಚೇರಿ ಎದುರು ಮೆರವಣಿಗೆ ಹಾಗೂ ಧರಣಿ ನಡೆಸಿತು.
ಅಖಿಲ ಭಾರತ ಕೇಂದ್ರ ಸಮಿತಿ ಸದಸ್ಯೆ ಹಾಗೂ ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ ಧರಣಿ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಎಸ್. ಸುಶೀಲಾ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಕೆ.ಭಾಸ್ಕರನ್, ಮುಖಂಡರಾದ ಕೆ. ಕುಞÂರಾಮನ್, ಕೆ.ಕುಞÂಕಣ್ಣನ್, ಮತ್ತು ಕೆ.ಸರೋಜಿನಿ, ರಮಣಿ, ಸಂಜೀವ ರೈ, ಪದ್ಮಾವತಿ, ಜಯಂತಿ, ಎಂ. ಲಲಿತಾ ಮತ್ತು ಕೆ.ವಿ.ಗೋಪಿ ನೇತೃತ್ವ ನೀಡಿದರು. ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ತಾಲೂಕು ಕಾರ್ಯದರ್ಶಿ ಎ. ನಾರಾಯಣ್ ಸ್ವಾಗತಿಸಿದರು.




