ತಿರುವನಂತಪುರಂ: ಈ ವರ್ಷದ ಎಸ್‍ಎಸ್‍ಎಲ್‍ಸಿ ‘ಸೇ’ ಪರೀಕ್ಷೆಗಳು ಜೂನ್ 7 ರಿಂದ 14 ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ಮೇ 20 ರಿಂದ ಮೇ 24 ರವರೆಗೆ ಆನ್‍ಲೈನ್‍ನಲ್ಲಿ ಮರುಮೌಲ್ಯಮಾಪನ, ಪರಿಶೀಲನೆ ಮತ್ತು ಉತ್ತರ ಪತ್ರಿಕೆಯ ಪೋಟೋಕಾಪಿಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.
‘ಸೇ’ ಪರೀಕ್ಷೆಯ ಫಲಿತಾಂಶವನ್ನು ಜೂನ್ ಕೊನೆಯ ವಾರದಲ್ಲಿ ಪ್ರಕಟಿಸಲಾಗುವುದು. ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆಯದ ವಿದ್ಯಾರ್ಥಿಗಳು ಗರಿಷ್ಠ ಮೂರು ವಿಷಯಗಳಿಗೆ ‘ಸೇ’ ಪರೀಕ್ಷೆಯನ್ನು ಬರೆಯಬಹುದು. ಉನ್ನತ ವ್ಯಾಸಂಗಕ್ಕೆ ಅರ್ಹರಾದವರ ಪ್ರಮಾಣಪತ್ರಗಳು ಜೂನ್ ಮೊದಲ ವಾರದಿಂದ ಡಿಜಿಲಾಕರ್‍ನಲ್ಲಿ ಲಭ್ಯವಿರುತ್ತವೆ.
ಈ ಬಾರಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾದಾಗ ಶೇ.99.70ರಷ್ಟು ಫಲಿತಾಂಶ ದಾಖಲಾಗಿದೆ. 68,604 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ. 1,38,086 ಮಂದಿ ಗ್ರೇಸ್ ಮಾರ್ಕ್ ಪಡೆದಿದ್ದಾರೆ. ಈ ಪೈಕಿ 24,422 ಮಂದಿ ಗ್ರೇಸ್ ಮಾಕ್ರ್ಸ್ ಮೂಲಕ ಎಲ್ಲಾ ವಿಷಯಗಳಲ್ಲಿ ಎಪ್ಲಸ್ ಪಡೆದಿದ್ದಾರೆ.





