HEALTH TIPS

ಚೀನಾ ಹಡಗು ಶೋಧ: ಭಾರತೀಯ ನೌಕಾಪಡೆಯಿಂದ 'ಪಿ-8ಐ' ನಿಯೋಜನೆ

                  ವದೆಹಲಿ: ಹಿಂದೂ ಮಹಾಸಾಗರದಲ್ಲಿ ಮಂಗಳವಾರ ಮುಳುಗಿದ್ದ ಚೀನಾದ ಮೀನುಗಾರಿಕಾ ಹಡಗಿನ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ನೌಕಾಪಡೆಯು ಪಿ-8ಐ ಕಡಲ ಪ್ರದೇಶ ಗಸ್ತು ಯುದ್ಧ ವಿಮಾನವನ್ನು ನಿಯೋಜಿಸಿದೆ. ಈ ಕುರಿತು ನೌಕಾಪಡೆಯು ಮಾಹಿತಿ ನೀಡಿದೆ.

             ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಮುಳುಗಿರುವ ಚೀನಾದ ಮೀನುಗಾರಿಕಾ ಹಡಗಿನ ಶೋಧ ಕಾರ್ಯಾಚರಣೆಗಾಗಿ ಭಾರತೀಯ ನೌಕಾಪಡೆಯು ಮಾನವೀಯ ನೆಲೆಗಟ್ಟಿನಲ್ಲಿ ಪಿ-8ಐ ಯುದ್ಧ ವಿಮಾನವನ್ನು ನಿಯೋಜಿಸಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಬುಧವಾರ ಯುದ್ಧ ವಿಮಾನವು ತೀವ್ರ ಸ್ವರೂಪದ ಶೋಧ ಕಾರ್ಯಾಚರಣೆ ನಡೆಸಿದೆ. ಮುಳುಗಿರುವ ಹಡಗಿನದ್ದು ಎಂದು ಭಾವಿಸಲಾಗಿರುವ ಹಲವಾರು ವಸ್ತುಗಳನ್ನು ಪತ್ತೆ ಮಾಡಿದೆ ಎಂದು ತಿಳಿಸಿದೆ.

                 ಶೋಧ ಕಾರ್ಯಾಚರಣೆಯಲ್ಲಿ ಚೀನಾ, ಇಂಡೊನೇಷ್ಯಾ, ಫಿಲಿಪೀನ್ಸ್‌ ಪ್ರಜೆಗಳೂ ಇದ್ದಾರೆ ಎಂದು ನೌಕಾಪಡೆ ತಿಳಿಸಿದೆ. ಮುಳುಗಿರುವ ಹಡಗಿನಲ್ಲಿ 39 ಮಂದಿ ಸಿಬ್ಬಂದಿ ಇದ್ದರು ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries