HEALTH TIPS

'ಬೆಳೆಸಿರಿ' ಲಲಿತಕಲಾ ಶಿಬಿರ ಸಂಪನ್ನ

                  ಉಪ್ಪಳ:  ಪೈವಳಿಕೆ ಸಮೀಪದ ಬಾಯಿಕಟ್ಟೆ ಅಯ್ಯಪ್ಪ ಭಜನಾ ಮಂದಿರದಲ್ಲಿ ಭಾನುವಾರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಲಲಿತಕಲಾ ಏಕದಿನ ಮಕ್ಕಳ ಶಿಬಿರವು ನಡೆಯಿತು. ಶಿಬಿರದಲ್ಲಿ ಕಾರ್ಟೂನ್ ಪ್ರಾತ್ಯಕ್ಷಿಕೆ, ರಸಪ್ರಶ್ನೆ, ಜಾದೂ ಪ್ರದರ್ಶನ, ಕುಣಿತ ಭಜನೆ, ಪುಸ್ತಕ ಬಿಡುಗಡೆ, ಕೊಳಲು ವಾದನ, ಚಿತ್ರಕಲಾ ಪ್ರದರ್ಶನ, ಕಾವ್ಯವಾಚನ, ಗಾಯನ, ವಿದ್ವಾಂಸರ ಜೊತೆಗೆ ಸಂವಾದ ನಡೆಯಿತು. ಪ್ರೊ..ಪಿ. ಎನ್ ಮೂಡಿತ್ತಾಯ ಸ್ವಾಗತಿಸಿ, ವಂದಿಸಿದರು. ನೀರಜಾ ಚೇವಾರು ನಿರೂಪಿಸಿದರು. 

              ಕಾರ್ಯಕ್ರಮದಲ್ಲಿ ಜಿಲ್ಲೆಯ ಚಿತ್ರಕಲಾವಿದರಾದ ಬಾಲ ಮಧುರಕಾನನ, ರಾಧಾಕೃಷ್ಣ ಬಲ್ಲಾಳ್, ವಿರಾಜ್ ಅಡೂರು, ಜಯಪ್ರಕಾಶ್ ಶೆಟ್ಟಿ, ಆದ್ಯಂತ್ ಅಡೂರು ಮೊದಲಾದವರು ರಚಿಸಿದ ವರ್ಣಚಿತ್ರ ಹಾಗೂ ವ್ಯಂಗ್ಯ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆದ ನೃತ್ಯ ಹಾಗೂ ಗಾಯನ ಕಾರ್ಯಕ್ರಮದಲ್ಲಿ ಆದಿಶ್ರೀ, ಆದ್ಯ, ಶ್ರಾವ್ಯ, ಸಿದ್ಧಾರ್ಥ, ಮೃಣಾಲ್ ರಾಜ್ ಮೊದಲಾದವರು ಭಾಗವಹಿಸಿದ್ದರು.  ಕಾರ್ಯಕ್ರಮದಲ್ಲಿ ಡಾ. ರಮಾನಂದ ಬನಾರಿ, ಡಾ. ಪಿ ಶ್ರೀಕೃಷ್ಣ ಭಟ್, ಡಾ. ಗೋಪ ಕುಮಾರ್, ಅರುಣಾ ನಾಗರಾಜ್, ಡಾ. ಪ್ರಮೀಳಾ ಮಾಧವ್ ಭಾಗವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಪ್ರೋ. ಪಿ ಎನ್ ಮೂಡಿತ್ತಾಯರು ಶಬಿರವನ್ನು ಸಂಯೋಜಿಸಿದರು. ಅನೇಕ ಮಂದಿ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries