HEALTH TIPS

ಕಥೊಲಿಕ್ ಸಭಾ ಕಾಸರಗೋಡು ವಲಯ ಅಧ್ಯಕ್ಷರಾಗಿ ಸಾಹಿತಿ ರಾಜು ಜೋನ್ ಆಯ್ಕೆ

                ಪೆರ್ಲ: ಪ್ರಮುಖ ಕ್ರೈಸ್ತ ಸಂಘಟನೆಯಾದ ಕಥೊಲಿಕ್ ಸಭಾ (ರಿ) ಇದರ ಕಾಸರಗೋಡು ವಲಯದ ನೂತನ ಅಧ್ಯಕ್ಷರಾಗಿ ಸಾಹಿತಿ,ಸಂಘಟಕ ರಾಜು ಜೋನ್ ಡಿ ಸೋಜಾ  ಮಣಿಯಂಪಾರೆ  ಆಯ್ಕೆಯಾಗಿದ್ದಾರೆ. 

            ಕೊಂಕಣಿ ಸಹಿತ ತುಳು ಕನ್ನಡ ಸಾಹಿತಿಯಾಗಿ ಗುರುತಿಸಿಕೊಂಡಿರುವ ಇವರು ರಂಗ ನಟರಾಗಿ  ಹಾಗೂ ಕಾರ್ಯಕ್ರ ನಿರೂಪಕರಾಗಿ ಚಿರಪರಿಚಿರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಥೊಲಿಕ್ ಸಭಾ ಸಂಘಟನೆಯ ಮಣಿಯಂಪಾರೆ ಘಟಕದ ಅಧ್ಯಕ್ಷರಾಗಿ ಹಾಗೂ ವಲಯ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೊಂಕಣಿ ಮಾಸ ಪತ್ರಿಕೆಯಾದ ಮಹಿಮಾ ಇದರ ಸಹ ಸಂಪಾದಕರಾಗಿ ಕಳೆದ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 
                ಸಂಘಟನೆಯ ವಲಯ ಮಟ್ಟದ ಚುನಾವಣಾ ಪ್ರಕ್ರಿಯೆಯು ರವಿವಾರ ಕುಂಬಳೆಯಲ್ಲಿ ನಡೆದಿತ್ತು.ಸಂಘಟನೆಯ ಕೇಂದ್ರ ಪದಾಧಿಕಾರಿಗಳಾದ ಲ್ಯಾನ್ಸಿ ಡಿಕುನ್ಹಾ ಹಾಗೂ ಸಂತೋಷ್  ಸಲ್ಡಾನ್ಹಾ ಇವರು ಚುನಾವಣೆ ನಡೆಸಿಕೊಟ್ಟರು
ಅಧ್ಯಕ್ಷರಾಗಿ ರಾಜು ಜೋನ್ ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಯೇಸುಪ್ರಸಾದ್ ವರ್ಕಾಡಿ, ಜೊಸ್ಸಿ ಬೇಳಾ (ಕಾರ್ಯದರ್ಶಿ)
ನವೀನ್ ಮಂಜೇಶ್ವರ (ಸಹ ಕಾರ್ಯದರ್ಶಿ),ಫ್ರಾನ್ಸಿಸ್  ತಲಪಾಡಿ (ಕೋಶಾಧಿಕಾರಿ), ಜೋರ್ಜ್ ಅನಿಲ್ ನಾರಂಪಾಡಿ (ಸಹ ಕೋಶಾಧಿಕಾರಿ), ಲವೀನಾ ವರ್ಕಾಡಿ (ಸ್ತ್ರೀ ಹಿತಾ ಸಂಚಾಲಕಿ), ರಾಜು ಸ್ಟೀಫನ್ ಕುಂಬ್ಳಾ (ಅಮ್ಚೊ ಸಂದೇಶ್ ಪ್ರತಿನಿಧಿ), ಸುನಿಲ್ ತಲಪಾಡಿ (ರಾಜಕೀಯ ಸಂಚಾಲಕ), ಪ್ರವೀಣ್ ಪ್ರಕಾಶ್ ಕಯ್ಯಾರ್
(ಯುವಹಿತಾ ಸಂಚಾಲಕರು), ವಿಕ್ಟರ್ ಬೊವಿಕಾನ (ಸಮುದಾಯ ಅಭಿವೃದ್ಧಿ ಸಂಚಾಲಕರು), ವಿಲ್ಫ್ರೆಡ್ ಮನೋಹರ್ ಬೇಳಾ ನಿಕಟಪೂರ್ವ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries