ಕಾಸರಗೋಡು: ಸಂಗೀತಾ ವಿದ್ಯಾನಿಧಿ ಡಾ.ವಿದ್ಯಾಭೂಷಣ್ ನೇತೃತ್ವದಲ್ಲು ನಡೆದ ದಾಸ ಸಂಕೀರ್ತನೆಗಳ ಗಾಯನದ "ಕಾಸರಗೋಡು ಸಂಕೀರ್ತನೋತ್ಸವದಲ್ಲಿ ನೂರಾರು ಜನ ಸಹಭಾಗಿಗಳಾ ಸಂಗೀತಾಸ್ವದಿಸಿದರು.
ಉದ್ಯಮಿ, ಸಾಂಸ್ಕೃತಿಕ,ಸಾಮಾಜಿಕ ಧಾರ್ಮಿಕ ಸಂಘಟನಾ ಮುಂದಾಳು ರಾಮ್ ಪ್ರಸಾದ ಕಾಸರಗೋಡು ಅವರ 60ನೇ ಜನ್ಮ ವರ್ಷಾಚರಣೆಯ ಅಂಗವಾಗಿ ನಡೆದ 6ನೇ ಸರಣಿ ಕಾರ್ಯಕ್ರಮವನ್ನು ಸಂಗೀತಾ ವಿದ್ಯಾನಿಧಿ ಡಾ.ವಿದ್ಯಾಭೂಷಣ್ ಬೆಂಗಳೂರು ಹಾಗೂ ಡಾ.ಕೃಷ್ಣ ಪ್ರಸಾದ್ ಬನ್ನಿಂತ್ತಾಯ ಜಂಟಿಯಾಗಿ ಉದ್ಘಾಟಿಸಿದರು. ರಾಮ ಪ್ರಸಾದ 60 ಅಭಿನಂದನಾ ಸಮಿತಿ ಅಧ್ಯಕ್ಷ,ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಸಭೆಯ ಅಧ್ಯಕ್ಷತೆವಹಿಸಿದ್ದರು.ಡಾ.ಬಿ.ಎಸ್ ರಾವ್ ಕಾಸರಗೋಡು, ವೇದಮೂರ್ತಿ ಗೋಪಾಲಕೃಷ್ಣ ಅಡಿಗ ಪೆರ್ಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಪದ್ಮಶ್ರೀ ಹಾಗೂ ರತ್ನಾವತಿ ಅಮ್ಮನವರು ಉಪಸ್ಥಿತರಿದ್ದರು. ಶಿವರಾಮ ಕಾಸರಗೋಡು ಪ್ರಾಸ್ತವನೆಗೈದರು.ಅನನ್ಯ ರಾಕೇಶ್ ಸ್ವಾಗತಿಸಿ ರಾಕೇಶ್ ಪೋಳಿನ್ನಾಯ ವಂದಿಸಿದರು. ವಿ.ಜಿ.ಕಾಸರಗೋಡು ನಿರೂಪಿಸಿದರು.ಈ ಸಂದರ್ಭದಲ್ಲಿ ಡಾ.ವಿದ್ಯಾಭೂಷಣ್ ಅವರನ್ನು ಸನ್ಮಾನಿಸಲಾಯಿತು.

.jpg)

