ಕಾಸರಗೋಡು: ಕೋಟೆಕಣಿ ರಾಮನಗರದ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ ಮೂರು ದಿನಗಳ ಮಕ್ಕಳ ಕಲಾ ಶಿಬಿರ ಸಮಾರೋಪಗೊಂಡಿತು.
ಸಮಿತಿಯ ನಿರ್ದೇಶಕ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಯು. ಮಹೇಶ್ವರಿ ಸಮಾರೋಪ ಭಾಷಣ ಮಾಡಿದರು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಲು ಮತ್ತು ಬೆಳೆಸಲು ಕಲಾಶಿಬಿರಗಳು ಪ್ರಯೋಜನಕಾರಿಯಾಗಿದೆ ಎಂದು ಡಾ.ಯು.ಮಹೇಶ್ವರಿ ಅವರು ಹೇಳಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಅವರು ವಿತರಿಸಿದರು.
ನಗರಸಭಾ ಸದಸ್ಯ ವರಪ್ರಸಾದ್ ಕೋಟೆಕಣಿ ಶುಭಹಾರೈಸಿದರು. ಶಿಬಿರದ ಕುರಿತಾಗಿ ನಿರ್ದೇಶಕ, ರಂಗನಟ ಕಿರಣ್ ಕಲಾಂಜಲಿ ಮಾತನಾಡಿದರು. ಶಿಬಿರಾರ್ಥಿಗಳು ಅನುಭವಗಳನ್ನು ಹಂಚಿಕೊಂಡರು. ಅನಘ ಕೆ. ಸ್ವಾಗತಿಸಿದರು. ತ್ರಿಷಾ ಜಿ.ಕೆ. ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃತಿಕಾ ವಂದಿಸಿದರು. ಬಳಿಕ ಶಿಬಿರಾರ್ಥಿಗಳಿಂದ ಅಳಿಲು ಸೇವೆ ನಾಟಕ ಪ್ರದರ್ಶಿಸಲ್ಪಟ್ಟಿತು.


