ಕಾಸರಗೋಡು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಸಭೆಯಲ್ಲಿ ಪಾಂಗೋಡು ಸಾಮೂಹಿಕ ಮಹಾ ಚಂಡಿಕಾ ಯಾಗ ಸಮಿತಿ ಸಂಯುಕ್ತ ಸಭೆ ನಡೆಯಿತು. ಯಾಗ ಸಮಿತಿ ಅಧ್ಯಕ್ಷ ಕೆ ಎನ್ ವೆಂಕಟ್ರಮಣ ಹೊಳ್ಳ ಅವರು ಯಾಗ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ ಕಾರ್ಯಕ್ರಮದ ಯಶಸ್ಸಿಗಾಗಿ ಪೂರ್ಣ ಸಹಕಾರ ಯಾಚಿಸಿದರು.
ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷ ವಾಮನ್ ರಾವ್ ಬೇಕಲ್ ಅವರು ಶ್ರೀ ಧರ್ಮಸ್ಥಳದ ರಾಜರ್ಷಿ, ಡಾ ವೀರೇಂದ್ರ ಹಗ್ಗಡೆ ಅವರು ಶುಭಾಶಂಸನೆಯನ್ನು ಸಭೆಯಲ್ಲಿ ಮಂಡಿಸಿದರು.
ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾಣದಲ್ಲಿ ಮೇ 19ರಂದು ಸಾಮೂಹಿಕ ಶ್ರೀ ಮಹಾಚಂಡಿಕಾ ಯಾಗ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಮೇ 18ರಂದು ಶ್ರೀ ಮಲ್ಲಿಕಾರ್ಜುನ ದೇವವಸ್ಥಾನದಿಂದ ಹೊರಡಲಿರುವ ಹಸಿರುವಾಣಿ ಮೆರವಣಿಗೆ ಹಾಗೂ 19ರಂದು ಬೆಳಗ್ಗೆ 10.30ಕ್ಕೆ ಓಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ನಡೆಯಲಿರುವ ಮೆರವಣಿಗೆಯನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಒಕ್ಕೂಟ ಅಧ್ಯಕ್ಷ ಜ್ಞಾನೇಶ್ ಆಚಾರ್ಯ ಹೊರೆಕಾಣಿಕೆ ಸಂಗ್ರಹಿಸುವ ಬಗ್ಗೆ ಸಲಹೆ ಸೂಚನೆ ನೀಡಿದರು.


