HEALTH TIPS

ಚಲನಚಿತ್ರ ನಿರ್ಮಾಣ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿವೆ; ಶಾಸಕ ಎಂ ರಾಜಗೋಪಾಲನ್ : ನನ್ನ ಕೇರಳ ಪ್ರದರ್ಶನ ಮತ್ತು ಮಾರಾಟ ಮೇಳದ ಸಾಂಸ್ಕೃತಿಕ ಸಂಜೆಯಲ್ಲಿ ಚಲಚಿತ್ರ ಪ್ರತಿಭಾ ಸಂಗಮ.

 


                 ಕಾಸರಗೋಡು:ಚಲನಚಿತ್ರ ನಿರ್ಮಾಣ ಕ್ಷೇತ್ರಕ್ಕೆ ಕಾಸರಗೋಡಿನಲ್ಲಿ ಅನಂತ ಸಾಧ್ಯತೆಗಳಿವೆ ಎಂದು ಶಾಸಕ ಎಂ ರಾಜಗೋಪಾಲನ್ ಹೇಳಿದರು. ಜಿಲ್ಲಾ ಮಾಹಿತಿ ಕಛೇರಿ ವತಿಯಿಂದ ಆಯೋಜಿಸಲಾದ ನನ್ನ ಕೇರಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಹಮ್ಮಿಕೊಂಡ ಚಲನಚಿತ್ರ ಪ್ರತಿಭಾ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾದುತಿದ್ದರು.
                  ಜನರ ಸಹಭಾಗಿತ್ವದಲ್ಲಿ ಸಿನಿಮಾ ನಿರ್ಮಾಣ ಮಾಡಿದ ಇತಿಹಾಸ ಕಾಸರಗೋಡಿಗೆ ಇದೆ.
ಶ್ರೇಷ್ಠ ಚಿತ್ರ ನಿರ್ಮಾಣ ಪರಂಪರೆಯನ್ನು ಜಿಲ್ಲೆಯು ಹೊಂದಿದ್ದು, ರಾಜ್ಯ ಸರಕಾರ ಚಲನಚಿತ್ರ ಕ್ಷೇತ್ರದಲ್ಲಿ ಮಹತ್ವದ ಹಸ್ತಕ್ಷೇಪ ಮಾಡುತ್ತಿದೆ ಎಂದರು.
 
           ಕಾಸರಗೋಡು ಜಿಲ್ಲೆಯ ಭಾಷೆ, ಸಂಸ್ಕೃತಿ, ಗ್ರಾಮೀಣತೆ ಮಲಯಾಳಂ ಸಿನಿಮಾ ಶೂಟಿಂಗ್ ನಲ್ಲಿ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ನನ್ನ ಕೇರಳ ಪ್ರದರ್ಶನ ಮಾರಾಟ ಮೇಳದಲ್ಲಿ ಆಯೋಜಿಸಿದ್ದ ಚಲನಚಿತ್ರ ಪ್ರತಿಭಾ ಸಂಗಮ ಅಪೂರ್ವ ಅನುಭವ ನೀಡಿತು. ಜಿಲ್ಲೆಯ ವಿವಿಧೆಡೆಗಳಿಂದ ಅಗ್ರ ಸಾಲಿಗೆ ಬಂದು ಜನಪ್ರಿಯ ಕಲೆಯಾದ ಸಿನಿಮಾದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೈಚಳಕವನ್ನು ಸಾಬೀತುಪಡಿಸಿದ ಹದಿನಾರು ಮಂದಿ ಪ್ರತಿಭಾ ಸಂಗಮಕ್ಕೆ ಬಂದಿದ್ದರು. ವಿವಿಧ ಕ್ಷೇತ್ರಗಳಿಗೆ ಅವರು ಬಂದು ತಲಪಿದ ತಮ್ಮ ಪಯಣ ಹಾಗೂ ಮುಂದೆ ಕಾಸರಗೋಡು ಸಿನಿಮಾದ ಬಗೆಗಿನ ತಮ್ಮ ಆಶಯಗಳನ್ನು ಹಂಚಿಕೊಂಡರು.
              .ಸಿನಿಮಾ ಪ್ರೀತಿಯಿಂದ ಪುಣೆ ಫಿಲ್ಮ್ ಇನ್ ಸ್ಟಿಟ್ಯೂಟ್ ಗೆ ಬಂದು ಅಲ್ಲಿಂದ ನಿರಾಸೆಗೊಂಡು ಪಟ್ಟು ಹೋಗಿ ಹಲವು ವರ್ಷಗಳ ನಂತರ ಸಿನೆಮಾ ರಂಗಕ್ಕೆ ಬಂದ ಅನುಭವವನ್ನು ಪೊಲೀಸ್ ಅಧಿಕಾರಿ .ಬಿ.ಥಾಮಸ್ ಹಂಚಿಕೊಂಡರು. ತಾನು ನಾಟಕಗಳಲ್ಲಿ ನಟಿಸಿ ಚಿತ್ರರಂಗದ ಮಾಂತ್ರಿಕ ಸ್ತರಗಳಲ್ಲಿ ಸ್ಥಾನ ಪಡೆದುಕೊಂಡು ಚಿತ್ರ ನಿರ್ಮಾಪಕರಾದ ಕಥೆಯನ್ನು ಯಾವುದೇ ಸಂಕೋಚವಿಲ್ಲದೆ ನಟರು ನೆನಪಿಸಿಕೊಂಡರು.

              ಕಾಸರಗೋಡಿನ ಸಾಮಥ್ಯ೯ವನ್ನು ಹಿಡಿದಿಟ್ಟುಕೊಂದು ಕಾಸರಗೋಡಿನ ತಾಜಾ ಸಿನಿಮಾ ನಿರ್ಮಾಣದ ಕನಸು ಚಿತ್ರ ನಿರ್ಮಾಪಕರದ್ದು.   ಕಾಸರಗೋಡಿನ ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆಯೂ ಚರ್ಚಿಸಲಾಯಿತು. ಜನರಿಂದ ಇದು ಗುರುತಿಸಲ್ಪಡಬೇಕು. ನನ್ನ ಕೇರಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ತನಗೆ ದೊರೆತ ಗೌರವದ ಬಗ್ಗೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಹಿಂದುಳಿದಿರುವ ಜಿಲ್ಲೆ ಎಂದು ಹಲವು ಕಾಲದಿಂದ ಕಂಡ ನಮ್ಮ ಜಿಲ್ಲೆಯ ಉನ್ನತಿ, ಬೆಳವಣಿಗೆ ಸಿನಿಮಾ ವಲಯದಲ್ಲಿ ಕಾಣುತ್ತಿದೆ ಎಂದು ಅಂದಾಜಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಚಲನಚಿತ್ರ ನಿರ್ಮಾಪಕರು ಕಾಸರಗೋಡು ಪ್ಯಾನ್-ಇಂಡಿಯನ್ ಚಿತ್ರರಂಗಕ್ಕೆ ಸಂಬಂಧಿಸಿದ ನಾಡು ಎಂದು ಪ್ರತಿಕ್ರಿಯಿಸಿದರು.
ಸಿಬಿ ಥಾಮಸ್, ಅಡ್ವ. ಶುಕೂರ್, ರಾಘವನ್ ಕೂಕ್ಕಲ್, ರಾಜೇಶ್ ಅಝಿಕೋಡನ್, ಕುಂಞಿಕೃಷ್ಣನ್ ಪಣಿಕ್ಕರ್, ಸುರೇಶ್ ಮೋಹನ್, ಚಂದ್ರಿಕಾ ಮಡಿಕೈ, ಸಿ.ಪಿ.ಶುಭಾ, ದಿವಾಕರನ್ ವಿಷ್ಣುಮಂಗಲಂ, ಶ್ರೀಜಿತ್ ಪಾಲೇರಿ, ಅಮೀರ್ ಪಳ್ಳಿಕಲ್, ಸುಧೀಶ್ ಗೋಪಿನಾಥ್, ವಿನು ಕೋಳಿಚ್ಚಲ್, ಗೋಪಿ ಕುತ್ತಿಕೋಲ್, ರವಿ ಪಟ್ಟೇನ ಎಂಬುವರು ಚಲನಚಿತ್ರ ಪ್ರತಿಭಾ ಸಂಗಮದ ಭಾಗವಾದರು.
                 ಚಲನಚಿತ್ರ ಪ್ರತಿಭಾ ಸಂಗಮವನ್ನು ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿ ಪ್ರತಿಭಾನ್ವಿತರನ್ನು ಸನ್ಮಾನಿಸಿದರು. ಕಾಞಂಗಾಡು ನಗಾಯ ಅಧ್ಯಕ್ಷೆ ಶಿಕ್ಷಕಿ ಕೆ. ವಿ ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಕೌನ್ಸಿಲರ್ ವಿ.ವಿ.ರಮೇಶ ವಿಶೇಷ ಅತಿಥಿಯಾಗಿದ್ದರು. ಸಿನಿಮಾ-ಸಾಂಸ್ಕೃತಿಕ ಕಾರ್ಯಕರ್ತ ಜಯನ್ ಮಾಂಗಾಟ್ ಸಂಚಾಲಕರಾಗಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಸ್ವಾಗತಿಸಿ, ಸಹಾಯಕ ಮಾಹಿತಿ ಅಧಿಕಾರಿ ಎ.ಪಿ.ದಿಲ್ನಾ ವಂದಿಸಿದರು.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries