ಕಾಸರಗೋಡು: ಕಾಲು ಶತಮಾನದಲ್ಲಿ ಕೇರಳದಲ್ಲಿ ಕುಟುಂಬಶ್ರೀ ಮಾಡಿರುವ ಬದಲಾವಣೆ ಮಹಿಳೆಯನ್ನು ಸಮಗ್ರವಾಗಿ ಸಬಲೀಕರಣಗೊಳಿಸುತ್ತಿದೆ ಎಂದು ಸ್ಥಳೀಯ ಸ್ವಯಂ ಆಡಳಿತ ಅಬಕಾರಿ ಇಲಾಖೆ ಸಚಿವ ಎಂ.ಬಿ.ರಾಜೇಶ್ ತಿಳಿಸಿದರು.
ಕನ್ನಡ ನಾಡಿನ ಮಹಿಳೆಯರ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಕುಟುಂಬಶ್ರೀ ಜಾರಿಗೆ ತಂದಿರುವ ಕನ್ನಡ ವಿಶೇಷ ಯೋಜನೆಗೆ ಚಾಲನೆ ನೀಡಿ ಸಚಿವರು ಮಾತನಾಡಿದರು.
ಕನ್ನಡ ಪ್ರದೇಶಕ್ಕಾಗಿ ಕುಟುಂಬಶ್ರೀ ಇಂತಹ ಹೆಜ್ಜೆ ಇಟ್ಟಿರುವುದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಕುಟುಂಬಶ್ರೀ ಮಹಿಳಾ ಸಬಲೀಕರಣದ ಒಂದು ಶ್ರೇಷ್ಠ ಪುಸ್ತಕ. ರಾಜ್ಯದಲ್ಲಿ ಸುಮಾರು ಅರ್ಧ ಕೋಟಿ ಮಹಿಳೆಯರು ಕುಟುಂಬಶ್ರೀ ಸದಸ್ಯರಾಗಿದ್ದಾರೆ. ಕಳೆದ ಕಾಲು ಶತಮಾನದಲ್ಲಿ ಬಡತನ ನಿರ್ಮೂಲನೆಗೆ ಕುಟುಂಬಶ್ರೀ ನಡೆಸಿದ ಪ್ರಯತ್ನ ವಿಶ್ವದ ಗಮನ ಸೆಳೆದಿದೆ.
ವಿಶ್ವವೇ ಗಮನಿಸಿರುವ ಕೇರಳದ ಯಶೋಗಾಥೆ ಕುಟುಂಬಶ್ರೀ. ಇಂದು ಕೇರಳವನ್ನು ಮುನ್ನಡೆಸುತ್ತಿರುವ ಅನೇಕ ಮಹಿಳೆಯರು ಕುಟುಂಬಶ್ರೀ ಮೂಲಕ ಹೊರಹೊಮ್ಮಿದ್ದಾರೆ. ಕುಟುಂಬಶ್ರೀ ಲಕ್ಷಾಂತರ ಮಹಿಳೆಯರಿಗೆ ಸ್ವಂತ ಆದಾಯ ಗಳಿಸಲು ಅನುವು ಮಾಡಿಕೊಟ್ಟಿದೆ. ಕುಟುಂಬಶ್ರೀಗಳು ಪಕ್ಷ ರಾಜಕೀಯದ ಬೇಧವಿಲ್ಲದೆ ಅನೇಕ ಜನಪ್ರತಿನಿಧಿಗಳನ್ನು, ನಾಯಕರನ್ನು ಸೃಷ್ಟಿಸಿದೆ. ಕನ್ನಡ ನಾಡಿನ ಸಾಹಿತ್ಯ ಮತ್ತು ಕಲಾ ಕ್ಷೇತ್ರಕ್ಕೆ ಕುಟುಂಬಶ್ರೀ ಎಲ್ಲ ರೀತಿಯ ಸಹಕಾರ ನೀಡಲಿದೆ. ಶೀ ಸ್ಟಾಟ್ರ್ಸ್ ಯೋಜನೆಗಳನ್ನು ಯುವತಿಯರಿಗಾಗಿ ವಿಸ್ತರಿಸಲಾಗುವುದು. ಭಾರತದ ಮೊದಲ ವಾಟರ್ ಮೆಟ್ರೋಗೆ ಟಿಕೆಟ್ ನೀಡುವುದು ಸೇರಿದಂತೆ ಕುಟುಂಬಶ್ರೀ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಯಾವುದೇ ವೃತ್ತಿಪರ ಕ್ಷೇತ್ರದಲ್ಲಿ ಕುಟುಂಬಶ್ರೀ ಸಾಧನೆ ಮಾಡುತ್ತದೆ ಎಂದು ಸಚಿವರು ಹೇಳಿದರು.
ಕನ್ನಡ ವಿಶೇಷ ಯೋಜನೆಯ ಸಿಡಿಎಸ್‍ಗಳ ಮೊದಲ ಹಂತದ ಚೆಕ್ ವಿತರಣೆಯನ್ನು ಶಾಸಕ ಸಿ.ಎಚ್.ಕುಂಞಂಬು ಹಾಗೂ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಕನ್ನಡ ಮಾರ್ಗದರ್ಶಕರ ಗುರುತಿನ ಚೀಟಿ ವಿತರಣೆ ಉದ್ಘಾಟಿಸಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಸಿ.ಎಚ್.ಇಕ್ಬಾಲ್ ಯೋಜನೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶೆಮಿಮಾ ಟೀಚರ್, ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸಿ.ಎ.ಸೈಮಾ, ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ, ಕುಟುಂಬಶ್ರೀ ರಾಜ್ಯ ಮಿಷನ್ ಕಾರ್ಯಕ್ರಮಾಧಿಕಾರಿ ರತೀಶ್ ಪಿಲಿಕೋಡ್ ಭಾಗವಹಿಸಿದ್ದರು. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಪೈವಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಯಂತಿ, ಎಣ್ಮ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್.ಸೋಮಶೇಖರ, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷೆ ಬಿ.ಶಾಂತ, ದೇಲಂಪಾಡಿ ಗ್ರಾ.ಪಂ.ಅಧ್ಯಕ್ಷೆ ಅಡ್ವ.ಎ.ಪಿ.ಉμÁ, ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲೆವಿನೋ ಮೊಂತೇರೊ, ವರ್ಕಾಡಿ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಭಾರತಿ, ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮತ್ ರುಬೀನಾ, ಮೀಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಹಮೀದ್ ಪೆÇಸಳಿಗೆ, ಕುಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಹಿರಾ ಯೂಸುಫ್, ಪುತ್ತಿಗೆ ಗ್ರಾ.ಪಂ.ಉಪಾಧ್ಯಕ್ಷೆ ಜಯಂತಿ, ಮಧೂರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಎಂ.ಚಂದ್ರಾವತಿ, ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯೆ ಬಿ.ಕೆ.ಕಾವ್ಯಶ್ರೀ, ತಾ.ಪಂ.ಸದಸ್ಯ ವಿ.ವಿ.ರಮೇಶನ್, ಎಸ್ ಎಪಿಎಂ ಕುಟುಂಬಶ್ರೀ ರಾಜ್ಯ ಮಿಷನ್ ನಿಶಾದ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ.ರಘುದೇವನ್, ಲಕ್ಷ್ಮಣ ಪ್ರಭು , ಅಜೀಜ್ ಮರಿಕೆ, ಜಯರಾಮ ಬಲ್ಲಂಗುಡೇಲು,, ಜಯಂತ ಪಾಟಾಳಿ ಮೊದಲಾದವರು ಮಾತನಾಡಿದರು. ಕುಟುಂಬಶ್ರೀ ಕಾರ್ಯನಿರ್ವಾಹಕ ನಿರ್ದೇಶಕ ಜಾಫರ್ ಮಲಿಕ್ ಸ್ವಾಗತಿಸಿ, ಪುತ್ತಿಗೆ ಸಿಡಿಎಸ್ ಅಧ್ಯಕ್ಷೆ ಹೇಮಾವತಿ ವಂದಿಸಿದರು.



