ಬದಿಯಡ್ಕ: ಯಕ್ಷದ್ರುವ ಪಟ್ಲ ಅಭಿಮಾನಿ ಬಳಗ ಇವರ ಪ್ರಯೋಜಕತ್ವದಲ್ಲಿ ಪೆರಡಾಲ ಶ್ರೀ ಉದನೇ ಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ, ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಶ್ರೀದೇವಿ ಮಹಾತ್ಮೆ ಬಯಲಾಟ ಜರಗಿತು. ಈ ಸಂದರ್ಭದಲ್ಲಿ ಯಕ್ಷದ್ರುವ ಪಟ್ಲ ಅಭಿಮಾನಿ ಬಳಗದ ವತಿಯಿಂದ ಯಕ್ಷಗಾನ ಕಲಾಕ್ಷೇತ್ರಕ್ಕೆ ಅನಘ್ರ್ಯ ಕೊಡುಗೆ ನೀಡಿದ ಪಟ್ಲ ಸತೀಶ್ ಶೆಟ್ಟಿ ಅವರನ್ನು ಶಾಲು ಫಲವಸ್ತು ಸ್ಮರಣೆಕೆ ನೀಡಿ ಈ ಸಂದರ್ಭದ ಸನ್ಮಾನಿಸಲಾಯಿತು. ಕ್ಷೇತ್ರದ ಮೊಕ್ತೇಸರ ಜಗನ್ನಾಥ ರೈ ಪೆರಡಾಲಗುತ್ತು, ಕ್ಷೇತ್ರದ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಟ್ಲ ಅಭಿಮಾನಿ ಬಳಗದ ಸಂಚಾಲಕ ನಿರಂಜನ ರೈ ಪೆರಡಾಲ, ತಿರುಪತಿ ಕುಮಾರ್ ಭಟ್, ಆಡಳಿತ ಮಂಡಳಿ ಸದಸ್ಯ ಜಗದೀಶ ಪೆರಡಾಲ, ಬದಿಯಡ್ಕ ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಶ್ರೀ ರಾಘವೇಂದ್ರ ನಾಯಕ್ ಬದಿಯಡ್ಕ, ಚಂದ್ರಹಾಸ ಕಿಳಿಂಗಾರ್, ಸದಾಶಿವ ಪೆರಡಾಲ, ಪುರುμÉೂೀತ್ತಮ ಆಚಾರ್ಯ,ಪಟ್ಲ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯಲ್ಲಿ ಕಲಾಭಿಮಾನಿಗಳು ಪಾಲ್ಗೊಂಡರು, ರಾತ್ರಿ ಅನ್ನದಾನ ನಡೆಯಿತು.




.jpg)
