ಕಾಸರಗೋಡು: ಹೋಟೆಲ್ ಉದ್ಯಮಿ ರಾಮಪ್ರಸಾದ್ ಕಾಸರಗೋಡು 60ರ ಅಭಿನಂದನಾ ಸಮಿತಿ ವತಿಯಿಂದ ರಾಮಪ್ರಸಾದ್ ಕಾಸರಗೋಡು 60ನೇ ಜನ್ಮವರ್ಷಾಚರಣೆ ಅಂಗವಾಗಿ 6ನೇ ಸರಣಿ ಕಾಯಕ್ರಮದನ್ವಯ ಕಾಸರಗೋಡು ಸಂಕೀರ್ತನೋತ್ಸವ ಮಾ 5ರಂದು ಸಂಜೆ 5ಕ್ಕೆ ಕಾಸರಗೋಡು 'ಈಶಾವಾಸ್ಯಂ'ನಲ್ಲಿ ಜರುಗಲಿದೆ. ಕಾರ್ಯಕ್ರಮದನ್ವಯ ಸಂಗೀತಾ ವಿದ್ಯಾನಿಧಿ ಡಾ. ವಿದ್ಯಾಭೂಷಣ ಬೆಂಗಳೂರು ಅವರಿಂದ ದಾಸ ಸಂಕೀರ್ತನೆಗಳ ಗಾಯನ ಕಾರ್ಯಕ್ರಮ ಜರುಗಲಿರುವುದು. ಡಾ. ಕೃಷ್ಣ ಪ್ರಸಾದ ಬನ್ನಿಂತಾಯ ಉದ್ಯಾವರ ಸಮಾರಂಭ ದೀಪ ಪ್ರಜ್ವಲಿಸಿ ಉದ್ಘಾಟಿಸುವರು. ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಎನ್ ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸುವರು. ಖ್ಯಾತ ವೈದ್ಯ ಡ. ಬಿ.ಎಸ್ ರಾವ್ ಕಾಸರಗೋಡು ಮತ್ತು ವೇದಮೂರ್ತಿ ಗೋಪಾಲಕೃಷ್ಣ ಅಡಿಗ ಅಮೆಕ್ಕಳ ಪೆರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸುವರು.



