ಮಂಜೇಶ್ವರ: ಕಳಿಯೂರು ದೇವಸ್ಯಗುತ್ತು ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೇವಸ್ಯಗುತ್ತು ಮನೆಯ ಗೃಹಪ್ರವೇಶ, ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಕೊಂಡೆವೂರು ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಆಶೀರ್ವಚನಗೈದ ಅವರು, ಮಾನವನ ಸತ್ಕರ್ಮ ಸಂಪತ್ತುಗಳಿಗೆ ದೇವರು ಅಥವ ದೈವಸ್ಥಾನ ಕೀಲಿ ಕೈ. ನಂಬಿದರೆ ಕಲ್ಲು ದೇವರಾಗುತ್ತಾರೆ, ನಂಬದಿದ್ದರೆ ದೇವರೇ ಕಲ್ಲಾಗಬಹುದು. ಇಂತಹ ಧರ್ಮ ಜಾಗೃತ ಪರಿಸ್ಥಿತಿ ನಮ್ಮೆಲ್ಲರದ್ದಾಗಿದೆ ಎಂದರು.
ಸುಂಕದಕಟ್ಟೆ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಅಧ್ಯಕ್ಷ ಅನಂದ ತಚ್ಚಿರೆ ಸಭೆಯ ಅಧ್ಯಕ್ಷತೆವಹಿಸಿದ್ದರು. ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನಕರ್ಮಿ, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು ಧಾರ್ಮಿಕ ಉಪನ್ಯಾಸಗೈದರು. ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ದೈವಜ್ಞ ಶಶಿಧರನ್ ಮಾಂಗಾಡ್, ಪ್ರಸಾದ್ ಜ್ಯೋತಿಷಿ ಗೌರಿಯಡ್ಕ, ಅನುವಾದಕ ಗೋಪಾಲಕೃಷ್ಣ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ದೇವಸ್ಯಗುತ್ತು ಸಮಿತಿ ಗೌರವಾಧ್ಯಕ್ಷ, ಕಳಿಯೂರು ರಕ್ತೇಶ್ವರಿಯ ಗಡಿ ಪ್ರಧಾನ ಪಿ.ಟಿ.ಸುಬ್ಬಣ್ಣ ಶೆಟ್ಟಿ, ಸಾಯಿನಾಥ್ ರೈ ಮಣಿಯೂರು, ವಿಶ್ವನಾಥ ಶೆಟ್ಟಿ ಮೀಯಪದವು, ಬಾಲಕೃಷ್ಣ ಶೆಟ್ಟಿ ಇಡಿಯ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಕಿಶೋರ್ ರೈ ಕಲ್ಲಡ್ಕ ಸ್ವಾಗತಿಸಿ, ಶ್ವೇತಾ ಪಾವಳ ವಂದಿಸಿದರು. ಕಿರಣ್ ರೈ ಕರ್ನೂರು ಹಾಗೂ ಸುಮಿತ ಚೌಟ ನಿರೂಪಿಸಿದರು.



.jpg)
