ಮಂಜೇಶ್ವರ: ಕಳಿಯೂರು ದೇವಸ್ಯಗುತ್ತು ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೇವಸ್ಯಗುತ್ತು ಮನೆಯ ಗೃಹಪ್ರವೇಶ, ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವದ ಅಂಗವಾಗಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜರಗಿತು. ಸುಂಕದಕಟ್ಟೆ ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರದ ಪರಿಸರದಿಂದ ಹೊರಟ ಮೆರವಣಿಗೆಯನ್ನು ಸುಂಕದಕಟ್ಟೆ ಶ್ರೀದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಅಧ್ಯಕ್ಷ ಆನಂದ ತಚ್ಚಿರೆ ವಿಶೇಷ ಪ್ರಾರ್ಥನೆಗೈದು ಉದ್ಘಾಟಿಸಿದರು. ಮೆರವಣಿಗೆಯು ಕಳಿಯೂರು ರಕ್ತೇಶ್ವರೀ ಸನ್ನಿಧಿಯಾಗಿ ಧರ್ಮದೈವ, ಪರಿವಾರ ದೈವಗಳ ಮೊಗಮೂರ್ತಿ ಆಯುಧ ಹಾಗೂ ಹಸಿರುವಾಣಿ ಹೊರೆಕಾಣಿಕೆಯೊಂದಿಗೆ ದೇವಸ್ಯಗುತ್ತುವಿಗೆ ತಲುಪಿತು.
ಸತ್ಯನಾರಾಯಣ ಕುಣಿತ ಭಜನಾ ತಂಡ ಕೋಳ್ಯೂರುಪದವು, ದುರ್ಗಾಪರಮೇಶ್ವರಿ ಕುಣಿತ ಭಜನಾತಂಡ ಬೇಕರಿ ಇವರಿಂದ ಕುಣಿತ ಭಜನೆ ಹಾಗೂ ಶ್ರೀಶಾಸ್ತಾರ ಸಿಂಗಾರಿ ಮೇಳ ಮಣಿಯೂರು ದೇಲಂಪಾಡಿ ಇವರ ಚೆಂಡೆಮೇಳ ಜನ ರಂಜಿಸಿತು. ಪಿ.ಟಿ.ಸುಬ್ಬಣ್ಣ ರೈ ಬಾನಬೆಟ್ಟು, ಕಿಶೋರ್ ರೈ, ಶ್ವೇತಾ ಶೆಟ್ಟಿ, ವಿಶ್ವನಾಥ ಶೆಟ್ಟಿ ಮಿಯಪದವು, ಜಯಶಂಕರ ರೈ ಬೇಳ, ಸಾಯಿನಾಥ ರೈ ಮಣಿಯೂರು, ಹಸಿರುವಾಣಿ ಹೊರೆಕಾಣಿಕೆ ಸಮಿತಿಯ ಪ್ರಧಾನ ಸಂಚಾಲಕ ಶಶಿಧರ ನಾಯ್ಕ್, ನವೀನ್ ರೈ ಕುರ್ನಾಡು, ಸತೀಶ್ ಭಂಡಾರಿ ಬೊಂಡಾಲ, ಸ್ವಯಂ ಸೇವಕ, ಮಹಿಳಾ ಸಮಿತಿಯವರು ಮೆರವಣಿಗೆಗೆ ನೇತೃತ್ವ ನೀಡಿದರು.



.jpg)
