ಕುಂಬಳೆ: ಕೆ.ಪಿ.ಅಬ್ದುಲ್ ರಹಿಮಾನ್ ಅವರು ಮಂಜೇಶ್ವರದ ಶ್ರೀಮಂತ ರಾಜಕೀಯ ನೆಲೆಯಲ್ಲಿ ಮೌಲ್ಯಾಧಾರಿತ ಸ್ಥಾನಗಳನ್ನು ಎತ್ತಿ ಹಿಡಿದ ಧೀಮಂತ ನಾಯಕ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು.
ಅವರು ಅಬ್ದುಲ್ ರಹಿಮಾನ್ ಕಲ್ಚರಲ್ ಸೆಂಟರ್ ಮತ್ತು ಕುಂಬಳೆ ಪ್ರೆಸ್ ಪೋರಂ ಜಂಟಿ ಆಶ್ರಯದಲ್ಲಿ ಆರಿಕ್ಕಾಡಿ ಕೆ.ಪಿ ರೆಸಾರ್ಟ್‍ನಲ್ಲಿ ಸೋಮವಾರ ನಡೆದ ಸಂಸ್ಮರಣಾ ಸಭೆ ಹಾಗೂ ಮಂಜೇಶ್ವರ ತಾಲೂಕು ಭಾಷಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಕೆ.ಅಲಿ ಮಾಸ್ತರ್ ಅವರನ್ನು ಸನ್ಮಾನಿಸುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೆಪಿ.ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಅಬ್ಬಾಸ್ ಕೆ.ಎಂ.ವಾನಂದೆ ಅಧ್ಯಕ್ಷತೆ ವಹಿಸಿದ್ದರು. ಡಾ.ವಿ.ಪಿ.ಪಿ.ಮುಸ್ತಫಾ ಮಲೆಯಾಳ ಭಾಷೆಯ ಪ್ರಸ್ತುತತೆ ಮತ್ತು ಅನ್ವಯದ ಕುರಿತು ಉಪನ್ಯಾಸ ನೀಡಿದರು. ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಇಬ್ರಾಹಿಂ ಮುಂಡ್ಯತ್ತಡ್ಕ ಸಂಸ್ಮರಣಾ ಉಪನ್ಯಾಸ ನೀಡಿದರು. ಕಿಂಗ್ ಶೇಖ್ ಜಾಯೆದ್ ಫೌಂಡೇಶನ್ ಅಧ್ಯಕ್ಷ ಕೆ.ಎಫ್.ಇಕ್ಬಾಲ್ ವೈದ್ಯಕೀಯ ನೆರವನ್ನು ಹಸ್ತಾಂತರಿಸಿದರು. ಝಡ್.ಎ ಮೊಗ್ರಾಲ್ ಪ್ರಶಸ್ತಿ ಪುರಸ್ಕøತರನ್ನು ಪರಿಚಯಿಸಿದರು. ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲದ ಕಾರ್ಯದರ್ಶಿ ಎ.ಕೆ. ಆರಿಫ್, ಕುಂಬಳೆ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎ.ರಹ್ಮಾನ್, ಅಹ್ಮದಲಿ ಕುಂಬಳೆ, ಅಸ್ಲಂ ಸೂರಂಬೈಲು, ಎಂ.ಅಬ್ದುಲ್ಲ ಮುಗು, ಕೆ.ಪಿ.ಶಾಹುಲ್ ಹಮೀದ್ ಪಟ್ಲ, ಮೊಯ್ತೀನ್ ಅಬ್ಬಾ, ಕೆ.ಪಿ.ಮುನೀರ್, ಅಬ್ದುಲ್ಲ ಕುಂಬಳೆ, ಅಬ್ದುಲ್ ಲತೀಫ್ ಉಳುವಾರು, ಐ.ಮುಹಮ್ಮದ್ ರಫೀಕ್, ಕೆ.ಎಂ.ಎ ಸತ್ತಾರ್, ಧನರಾಜ್ ಐಲ, ಮುಹಮ್ಮದ್ ರಫೀಕ್ ಬಿ.ಐ., ಜುಬೈರ್, ಜೈನುದ್ದೀನ್ ಅಡ್ಕ ಮತ್ತಿತರರು ಮಾತನಾಡಿದರು.
ಎಂ.ಕೆ. ಅಲಿ ಮಾಸ್ತರ್ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕುಂಬಳೆ ಪ್ರೆಸ್ ಪೋರಂ ಅಧ್ಯಕ್ಷ ಸುರೇಂದ್ರನ್ ಚೀಮೇನಿ ಸ್ವಾಗತಿಸಿ, ಅಬ್ದುಲ್ ಲತೀಫ್ ಕುಂಬಳೆ ವಂದಿಸಿದರು.



.jpg)
.jpg)
