ತ್ರಿಶೂರ್: ಗುರುವಾಯೂರ್ ದೇವಸ್ಥಾನದಲ್ಲಿ ದರ್ಶನ ಮತ್ತು ಸೇವಾ ಸಮರ್ಪಣೆಗಳಿಗೆ ನಿಯಂತ್ರಣ ಹೇರಲಾಗಿದೆ. ಗುರುವಾರದಿಂದ ಎರಡು ವಾರಗಳ ಕಾಲ ನಿರ್ಬಂಧ ಇರಲಿದೆ.
ಅಭಿಷೇಕ ಮತ್ತು ನೈವೇದ್ಯಕ್ಕೆ ನೀರು ಹರಿಸುವ ಬೆಲ್‍ವೆಲ್‍ಗಳ ನವೀಕರಣದಿಂದಾಗಿ ನಿರ್ಬಂಧ ವಿಧಿಸಲಾಗಿದೆ. ನಿರ್ಬಂಧದ ಸಮಯದಲ್ಲಿ ಸೇವೆಗಳನ್ನು ನಡೆಸಲು ತೊಡಕಾಗಿದೆ. ಬೆಲ್ಲ ನೈವೇದ್ಯ, ತುಪ್ಪದ ಪಾಯಸ ಮತ್ತು ಹಾಲು ಪಾಯಸಂ ತಯಾರಿಸಲು ನೀರನ್ನು ಬಳಸುವ ಪಂಪ್ ಹಾಗೂ ಬಾವಿಯ ದೋಷದ ನಿವಾರಣೆಗೆ ದುರಸ್ಥಿ ನಡೆಯಲಿದೆ.
ಇತ್ತೀಚೆಗೆ ನೀರಿನ ಬಣ್ಣದಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆಯಲ್ಲಿ ನವೀಕರಣ ಮಾಡಲಾಗುತ್ತಿದೆ. ಈ ಹಿಂದೆ 2014ರಲ್ಲಿ ಬಾವಿ ಸ್ವಚ್ಛಗೊಳಿಸಲಾಗಿತ್ತು. ಈ ಬಾರಿಯೂ ಮಣ್ಣು ಅಗೆದು ನವೀಕರಿಸಲಾಗುವುದು. ಗ್ರಾನೈಟ್‍ನಿಂದ ಕೂಡಿದ ಬಾವಿಗಳನ್ನು ಮಣ್ಣಿನ ರಿಂಗ್ ನಿಂದ ಸ್ಥಾಪಿಸಲಾಗುವುದು. ಇದರ ನಡುವೆ ನದಿ ಮರಳು, ಸಣ್ಣ ಲೋಹ, ಇದ್ದಿಲು ಮುಂತಾದ ನೈಸರ್ಗಿಕ ಶುಚಿಗೊಳಿಸುವ ಸಾಮಗ್ರಿಗಳನ್ನು ತುಂಬಿಸಲಾಗುತ್ತದೆ.
ಮಳೆ ನೀರನ್ನು ಶುದ್ಧೀಕರಿಸಿ ಬಾವಿಗೆ ಹರಿಸಲಾಗುವುದು. ನಾಲಂಬಲದಲ್ಲಿ ಪೈಪ್ ಕೂಡ ಅಳವಡಿಸಲಾಗುವುದು. ಚೆನ್ನೈನಲ್ಲಿ ವ್ಯಾಪಾರ ನಡೆಸುತ್ತಿರುವ ಮಲಯಾಳಿ ಪ್ರದೀಪ್ ಅವರು 30 ಲಕ್ಷ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯ ನೇತೃತ್ವ ವಹಿಸಿದ್ದಾರೆ. ನವೀಕರಣ ಎರ್ನಾಕುಳಂ ಮೂಲದ ಎಂಜಿನಿಯರ್ ಶ್ರೀನಿವಾಸನ್ ಅವರ ಮೇಲ್ವಿಚಾರಣೆಯಲ್ಲಿ ನಡೆಯಲಿದೆ.





