HEALTH TIPS

ವಿವಾಹದ ಬಳಿಕ ವರನ ಮನೆ ಪ್ರವೇಶೀಸಲು ನಿರಾಕರಿಸಿ ಓಡಿಹೋದ ವಧು: ಮನೆಯಲ್ಲಿ ಯಾವುದೇ ಸೌಕರ್ಯವಿಲ್ಲ ಎಂದು ಹೇಳಿಕೆ: ಇಂದು ಸಮಾಲೋಚನೆ

                ತ್ರಿಶೂರ್: ತಾಳಿ ಕಟ್ಟಿಕೊಂಡ ವಧು ವರನ ಮನೆಗೆ ಬಂದು ಸ್ವಲ್ಪಹೊತ್ತಲ್ಲೇ ಮದುವೆಯಿಂದ ಹಿಂದೆ ಸರಿದ ಘಟನೆ ನಡೆದಿದೆ. ವರನ ಮನೆ ನೋಡಿ ಯುವತಿ ಮದುವೆಯಿಂದ ಹಿಂದೆ ಸರಿದಿದ್ದಾಳೆ.

                ತ್ರಿಶೂರಿನ ಕುನ್ನಂಕುಳಂನಲ್ಲಿ ಈ ಘಟನೆ ನಡೆದಿದೆ. ಕುನ್ನಂಕುಳಂನ ಸೌತ್ ಭಾಗದಲ್ಲಿರುವ ವರನ ಮನೆಯ ಮುಂದೆ ಮದುವೆ ನಡೆದಿದೆ.

             ಮದುವೆ ಮತ್ತು ಇತರ ಸಮಾರಂಭಗಳ ನಂತರ, ವಧು ವರನ ಮನೆಯೊಳಗೆ ಪ್ರವೇಶಿಸುವ ಸಮಾರಂಭಕ್ಕೆ ತೆರಳಿದಳು. ಮದುಮಗಳು ಬಲಗಾಲಿನಿಂದ ಮನೆಗೆ ಪ್ರವೇಶಿಸಿದಾಗ ಮನೆ ಗಮನಕ್ಕೆ ಬಂದಿದೆ. ಇದರೊಂದಿಗೆ ವಧು ಮನೆ ಪ್ರವೇಶಿಸುವ ಮೊದಲು ಅಕ್ಕಿ ಮತ್ತು ಹೂವುಗಳನ್ನು ಎಸೆದು ಆರತಕ್ಷತೆ ಕಾರ್ಯಕ್ರಮಕ್ಕೂ ಮುನ್ನ ಹಿಂದೆ ಸರಿದಳು. ವಧು ಈ ಮನೆಗೆ ಬರುವುದಿಲ್ಲ ಎಂದು ಜೋರಾಗಿ ಕೂಗುತ್ತಾ ಓಡಿದಳು. ವಧು ಓಡುತ್ತಿರುವುದನ್ನು ಕಂಡು ಗಾಬರಿಗೊಂಡ ಸಂಬಂಧಿಕರು ಹಿಂಬಾಲಿಸಿ ಬಲವಂತವಾಗಿ ವಧುವನ್ನು ಕರೆದೊಯ್ದಿದ್ದಾರೆ.

             ವಧುವನ್ನು ತನ್ನ ಸಂಬಂಧಿಕರು ಮತ್ತು ಇತರರೊಂದಿಗೆ ವಿವಿಧ ರೀತಿಯಲ್ಲಿ ಸಮಾರಂಭದಲ್ಲಿ ಭಾಗವಹಿಸಲು ಕೇಳಲಾಯಿತು, ಆದರೆ ಯುವತಿ ನಿರಾಕರಿಸಿದಳು. ಸಮಾರಂಭದ ನಂತರ ವಿಷಯಗಳನ್ನು ಚರ್ಚಿಸುವುದಾಗಿ ಅನೇಕ ಜನರು ವಧುವಿಗೆ ಹೇಳಿದರು, ಆದರೆ ವಧು ತನ್ನ ನಿರ್ಧಾರದಲ್ಲಿ ದೃಢವಾಗಿದ್ದಳು.  ದಿನಗೂಲಿ ಮಾಡುವ ವರನ ಮನೆ ಐದು ಸೆಂಟ್ಸ್ ಜಮೀನಿನಲ್ಲಿದೆ. ವಧುವಿನ ಮನೆಯಲ್ಲಿ ಹುಡುಗಿಗೆ ಬೇಕಾಗುವ ಕನಿಷ್ಠ ಖಾಸಗಿತನವೂ ಸಿಗುತ್ತಿಲ್ಲ ಎಂದು ವಧುವಿನ ದೂರು ಹಿನ್ನೆಲೆಯಲ್ಲಿ ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

             ವಧು ತನ್ನ ನಿರ್ಧಾರದಲ್ಲಿ ದೃಢವಾದಾಗ, ಮದುವೆ ಮಂಟಪದಿಂದ ಹುಡುಗಿಯ ತಂದೆ ಮತ್ತು ತಾಯಿಯನ್ನು ಕರೆಯಲಾಯಿತು. ಅವರು ತಮ್ಮ ಮಗಳನ್ನು ಸಮಾರಂಭದಲ್ಲಿ ಭಾಗವಹಿಸುವಂತೆ ಕೇಳಿಕೊಂಡರು, ಆದರೆ ವಧು ಒಪ್ಪಲಿಲ್ಲ. ಇದರೊಂದಿಗೆ ಸಮಸ್ಯೆ ಸಂಘರ್ಷಕ್ಕೆ ಕಾರಣವಾಯಿತು. ಸಮಸ್ಯೆ ಕೈ ಮೀರುತ್ತಿರುವುದನ್ನು ಮನಗಂಡ ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ಪೆÇಲೀಸರು ಸ್ಥಳಕ್ಕಾಗಮಿಸಿ ವಧುವಿಗೆ ವರನೊಡನೆ ಮನೆ ಪ್ರವೇಶಿಸಲು ಸೂಚಿಸಿದರೂ ವಧು ಜಪ್ಪೆನ್ನಲಿಲ್ಲ. 

         ಪೆÇಲೀಸರು ಮಧ್ಯ ಪ್ರವೇಶಿಸಿ ವಧುವನ್ನು ವಧುವಿನ ಮನೆಗೆ ಮತ್ತು ವರನನ್ನು ವರನ ಮನೆಗೆ ಕಳುಹಿಸಿದರು. ಬುಧವಾರ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಈ ಮನೆಯಲ್ಲಿ ಏಳು ಜನ ಸಹೋದರರ ಮದುವೆಯೂ ನಡೆದಿದ್ದು, ವಧುವಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ವರನ ಸಂಬಂಧಿಕರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries