ಕೋಝಿಕ್ಕೋಡ್: ರಾಜ್ಯದಲ್ಲಿ ಮತ್ತೊಂದು ಪೋನ್ ಸ್ಫೋಟ ಸಂಭವಿಸಿದೆ. ಕೋಝಿಕ್ಕೋಡ್ ಮೊಬೈಲ್ ಪೋನ್ ಸ್ಫೋಟಗೊಂಡು ಸುಟ್ಟು ಕರಕಲಾಗಿದೆ
ಘಟನೆಯಲ್ಲಿ ರೈಲ್ವೇ ಗುತ್ತಿಗೆ ನೌಕರ ಹಾರಿಸ್ ರೆಹಮಾನ್ ಗಾಯಗೊಂಡಿದ್ದಾರೆ. ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿಗೆ ಕಚೇರಿಗೆ ಆಗಮಿಸಿದಾಗ ಅವಘಡ ಸಂಭವಿಸಿದೆ. ಪ್ಯಾಂಟ್ ಜೇಬಿನಲ್ಲಿದ್ದ ಪೋನ್ ಸ್ಫೋಟಗೊಂಡಿದೆ. ಅಪಘಾತದಲ್ಲಿ ಅವರು ತೀವ್ರವಾಗಿ ಸುಟ್ಟು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.





