ತಿರುವನಂತಪುರಂ: ಕೇರಳದಲ್ಲಿ ಪ್ರಪ್ರಥಮ ಬಾರಿಗೆ ಎಎಸ್‍ಎಪಿ ಕೇರಳಕ್ಕೆ ಡ್ರೋನ್ ತರಬೇತಿ ಮತ್ತು ಪ್ರಮಾಣೀಕರಣ ನೀಡಲು ಕೇಂದ್ರ ಸರ್ಕಾರದ ವಾಯು ಸಂಚಾರ ನಿಯಂತ್ರಣ ಸಂಸ್ಥೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅನುಮೋದನೆ ನೀಡಿದೆ.
ಎಎಸ್‍ಎಪಿ ಕೇರಳದ ಕಾಸರಗೋಡು ಸಮುದಾಯ ಕೌಶಲ್ಯ ಪಾರ್ಕ್‍ನಲ್ಲಿ ಡ್ರೋನ್ ಪೈಲಟಿಂಗ್ ತರಬೇತಿಯನ್ನು ನೀಡಲು ಸಿದ್ದತೆ ನಡೆಸಿದೆ. ಎರ್ನಾಕುಳಂನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಆಟೋನಮಸ್ ಅನ್ ಮ್ಯಾನ್ಡ್ ಏರಿಯಲ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎಸ್ಎಪಿ ಕೇರಳದ ತರಬೇತಿ ಪಾಲುದಾರ. ಸಣ್ಣ ವರ್ಗದ ಡ್ರೋನ್ ಪೈಲಟಿಂಗ್ ಕೋರ್ಸ್‍ನಲ್ಲಿ 96-ಗಂಟೆಗಳ ಕಾರ್ಯನಿರ್ವಾಹಕ ಕಾರ್ಯಕ್ರಮವನ್ನು 16 ದಿನಗಳಲ್ಲಿ ಪೂರ್ಣಗೊಳಿಸಲು ವಿನ್ಯಾಸಗೊಳಿಸಲಾಗಿದೆ.
ಇದು ಐದು ದಿನಗಳ ಡಿಜಿಸಿಎ ಪರವಾನಗಿ ಕಾರ್ಯಕ್ರಮವನ್ನೂ ಒಳಗೊಂಡಿರುತ್ತದೆ. 3ಡಿ ಮ್ಯಾಪಿಂಗ್, ಯುಎವಿ ಸಮೀಕ್ಷೆ, ಯುಎವಿ ಅಸೆಂಬ್ಲಿ ಮತ್ತು ಪೆÇ್ರೀಗ್ರಾಮಿಂಗ್ ಮತ್ತು ಏರಿಯಲ್ ಸಿನಿಮಾಟೋಗ್ರಫಿ ಕೂಡ ಕೋರ್ಸ್‍ನ ಭಾಗವಾಗಿದೆ. ಡ್ರೋನ್ ತಂತ್ರಜ್ಞಾನದ ಬೆಳವಣಿಗೆಯು ಮುಂಬರುವ ವರ್ಷಗಳಲ್ಲಿ 80,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರು ದೇಶ ಮತ್ತು ವಿದೇಶಗಳಲ್ಲಿ ಡ್ರೋನ್‍ಗಳನ್ನು ಹಾರಿಸಬಹುದು. ಡ್ರೋನ್‍ಗಳನ್ನು ಹಾರಿಸಲು ಡಿಜಿಸಿಎ ಪರವಾನಗಿ ಅಗತ್ಯವಿದೆ.
ಕಾನೂನುಬಾಹಿರ ಡ್ರೋನ್ ಹಾರಾಟದಿಂದ ಉಂಟಾಗುವ ಗಂಭೀರ ಅಪಾಯಗಳ ಬಗ್ಗೆಯೂ ಈ ಕೋರ್ಸ್ ಜಾಗೃತಿ ಮೂಡಿಸುತ್ತದೆ. 10ನೇ ತರಗತಿ ಉತ್ತೀರ್ಣರಾದ 18 ವರ್ಷ ಮೇಲ್ಪಟ್ಟವರು ಕೋರ್ಸ್ ಮಾಡಬಹುದು. ಅವರು ಪಾಸ್ ಪೋರ್ಟ್ ಹೊಂದಿರಬೇಕು ಎಂಬ ನಿಯಮವೂ ಇದೆ. ಕೋರ್ಸ್ ಶುಲ್ಕ 42,952 ರೂ. ಪ್ರವೇಶ ಪಡೆದವರಿಗೆ ಕೌಶಲ್ಯ ಸಾಲ ಸೌಲಭ್ಯವೂ ದೊರೆಯಲಿದೆ. ಹೆಚ್ಚಿನ ಮಾಹಿತಿಗೆ: 9495 999 623, 9495 999 709.





