HEALTH TIPS

ಬಿಪಿ ನಿಯಂತ್ರಣಕ್ಕೆ ಬೆಸ್ಟ್ ಬೀಟ್‌ರೂಟ್‌ ಜ್ಯೂಸ್, ಹೇಗೆ ಬಳಸಬೇಕು?

 ಅತ್ಯಧಿಕ ರಕ್ತದೊತ್ತಡ..... ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಅತ್ಯಧಿಕ ರಕ್ತದೊತ್ತಡ ನಿರ್ಲಕ್ಷ್ಯ ಮಾಡಿದರೆ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಅಪಾಯಗಳು ಉಂಟಾಗುವ ಸಾಧ್ಯತೆ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಬೇಕು.

ರಕ್ತದೊತ್ತಡ ಬಂದ ತಕ್ಷಣ ಭಯ ಪಡಬೇಕಾಗಿಲ್ಲ, ಅದನ್ನು ನಿಯಂತ್ರಣದಲ್ಲಿಟ್ಟರೆ ಆರೋಗ್ಯಕರವಾದ ಜೀವನ ನಡೆಸಬಹುದು. ಕೆಲವೊಂದು ಆಹಾರಗಳು ರಕ್ತದೊತ್ತಡ ನಿಯಂತ್ರಿಸಲು ತುಂಬಾನೇ ಸಹಕಾರಿ ಅಂಥ ಒಂದು ಆಹಾರ ಬೀಟ್‌ರೂಟ್‌.
 ಬಿಪಿ ನಿಯಂತ್ರಿಸಲು ಬೀಟ್‌ರಟ್‌ ಪರಿಣಾಮಕಾರಿಯೇ? ಬೀಟ್‌ರೂಟ್‌ ಬಿಪಿ ನಿಯಂತ್ರಣಕ್ಕೆ ಹೇಗೆ ಬಳಸಬೇಕು? ಎಂಬೆಲ್ಲಾ ಮಾಹಿತಿ ಈ ಲೇಖನದಲ್ಲಿದೆ ನೋಡೋಣ:

ಬಿಪಿ ನಿಯಂತ್ರಿಸಲು ಬೀಟ್‌ರಟ್‌ ಪರಿಣಾಮಕಾರಿಯೇ?
ಬೀಟ್‌ರೂಟ್‌ ಬಿಪಿ ನಿಯಂತ್ರಣಕ್ಕೆ ಹೇಗೆ ಬಳಸಬೇಕು? ಎಂಬೆಲ್ಲಾ ಮಾಹಿತಿ ಈ ಲೇಖನದಲ್ಲಿದೆ ನೋಡೋಣ:

ಬಿಪಿ ನಿಯಂತ್ರಣಕ್ಕೆ ಬೀಟ್‌ರೂಟ್‌ ಹೇಗೆ ಬಳಸಬೇಕು?
ಪ್ರತಿದಿನ ಒಂದು ಕಪ್‌ ಬೀಟ್‌ರೂಟ್ ಜ್ಯೂಸ್‌ ಕುಡಿಯುವುದರಿಂದ ಬಿಪಿ ಅಥವಾ ಅತ್ಯಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು ಎಂದು ಅಧ್ಯಯನದಿಂದ ಸಾಬೀತಾಗಿದೆ. ದಿನದಲ್ಲಿ 250mlನಷ್ಟು ಬೀಟ್‌ರೂಟ್‌ ಜ್ಯೂಸ್‌ ತೆಗೆದುಕೊಂಡರೆ ರಕ್ತದೊತ್ತಡ ಹೆಚ್ಚಾಗುವುದಿಲ್ಲ, ಇದರಿಂದ ಹೃದಯ ಸಂಬಂಧಿ ಸಮಸ್ಯೆ, ಹೃದಯಾಘಾತ, ಪಾರ್ಶ್ವವಾಯು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.

ಸಾಬೀತಾವಾಗಿರುವ ಸತ್ಯಾಂಶ
ಅಧ್ಯಯನದಲ್ಲಿ 64 ಜನರು ಸ್ವಇಚ್ಛೆಯಿಂದ ಭಾಗಿಯಾಗಿದ್ದರು. ಅವರಿಗೆಲ್ಲಾ ಅತ್ಯಧಿಕ ರಕ್ತದೊತ್ತಡ ಸಮಸ್ಯೆಯಿತ್ತು. ಅವರಿಗೆ ಬೀಟ್‌ರೂಟ್‌ ಜ್ಯೂಸ್‌ ನೀಡಲಾಗುತ್ತಿತ್ತು, ಅವರಲ್ಲಿ ಇತರ ಬಿಪಿ ನಿಯಂತ್ರಿಸುವ ಔಷಧ ಕುಡಿದಾಗ ಕಂಡು ಬರುವಂತೆ ಅತ್ಯಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿರುವುದು ಸಾಬೀತಾಯಿತು. ಹೀಗಾಗಿ ಬೀಟ್‌ರೂಟ್‌ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು ಎಂದು ಈ ಅಧ್ಯಯನ ವರದಿ ನೀಡಿತು. ಅತ್ಯಧಿಕ ರಕ್ತದೊತ್ತಡ ನಿಯಂತ್ರಿಸಲು ಬೀಟ್‌ರೂಟ್‌, ಸೊಪ್ಪು ಸಹಕಾರಿಯಾಗಿದೆ.

ಬೀಟ್‌ರೂಟ್‌ ಜ್ಯೂಸ್‌ ಹೇಗೆ ತಯಾರಿಸಬೇಕು?
1 ಬೀಟ್‌ರೂಟ್‌
1 ಸೇಬು
1/2 ನಿಂಬೆರಸ

ಬೀಟ್‌ರೂಟ್‌, ಸೇವಿನ ಸಿಪ್ಪೆ ಸುಲಿದು ಜ್ಯೂಸ್‌ ಮಾಡಿ, ಅದಕ್ಕೆ ನಿಂಬೆರಸ ಸೇರಿಸಿ ಕುಡಿಯಿರಿ.
ಬೀಟ್‌ರೂಟ್‌ ಜ್ಯೂಸ್ ಕುಡಿದ ಬಳಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರಲು ಎಷ್ಟು ಸಮಯಬೇಕು?
ನೀವು ಬೀಟ್‌ರೂಟ್‌ ಜ್ಯೂಸ್‌ ಕುಡಿದ ಬಳಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರಲು 3 ಗಂಟೆ ಬೇಕು. ನೀವು 3 ಗಂಟೆಯ ಬಳಿಕ ನಿಮ್ಮ ಬಿಪಿ ಚೆಕ್‌ ಮಾಡಿದರೆ ಬಿಪಿ ನಿಯಂತ್ರಣದಲ್ಲಿರುತ್ತದೆ. ಪ್ರತಿದಿನ ಬೀಟ್‌ರೂಟ್‌ ಜ್ಯೂಸ್‌ ತೆಗೆದುಕೊಂಡರೆ ಬಿಪಿ ನಿಯಂತ್ರಣದಲ್ಲಿರುತ್ತದೆ.

1. ಸ್ಟಾಮಿನಾ ಹೆಚ್ಚಾಗುವುದು
ಬೀಟ್‌ರೂಟ್‌ ಜ್ಯೂಸ್‌ ಕುಡಿಯುವುದರಿಂದ ಪ್ಲಾಸ್ಮಾ ನೈಟ್ರೇಟ್‌ ಪ್ರಮಾಣ ಹೆಚ್ಚಾಗುವುದರಿಂದ ನಿಮಗೆ ವರ್ಕೌಟ್‌ ಮಾಡಲು ಹೆಚ್ಚು ಶಕ್ತಿ ಸಿಗುವುದು.
* ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ತುಂಬಾನೇ ಒಳ್ಳೆಯದು
ಹೃದಯ ಸಂಬಂಧಿ ಸಮಸ್ಯೆ ಇರುವವರು ಬೀಟ್‌ರೂಟ್ ಜ್ಯೂಸ್‌ ಕುಡಿಯುವುದರಿಂದ ಸ್ನಾಯುಗಳಲ್ಲಿ ಶಕ್ತಿ ಹೆಚ್ಚಾಗುವುದು. ಇದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
* ಮರೆವಿನ ಸಮಸ್ಯೆ ಕಡಿಮೆಯಾಗುವುದು
ವಯಸ್ಸಾಗುತ್ತಿದ್ದಂತೆ ಕೆಲವರಿಗೆ ಮರೆವು ಉಂಟಾಗುವುದು. ಅದನ್ನು ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ.
* ಆರೋಗ್ಯಕರ ಮೈ ತೂಕ ಹೊಂದಲು ಸಹಕಾರಿ
ಯಾರು ಫಿಟ್ನೆಸ್ ಕಡೆ ಗಮನ ಕೊಡುತ್ತಾರೋ ಅವರು ಆರೋಗ್ಯಕರ ಮೈ ತೂಕ ಹೊಂದಲು ತುಂಬಾನೇ ಸಹಕಾರಿಯಾಗಿದೆ.
* ಕ್ಯಾನ್ಸರ್‌ ತಡೆಗಟ್ಟುತ್ತದೆ
ಬೀಟ್‌ರೂಟ್‌ನಲ್ಲಿ betalains ಅಂಶವಿದ್ದು ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.
* ಪೊಟಾಷ್ಯಿಯಂ ಇದೆ
ಇದರಲ್ಲಿ ಪೊಟಾಷ್ಯಿಯಂ ಅಧಿಕವಿರುವುದರಿಂದ ತಲೆಸುತ್ತು, ಸುಸ್ತು, ಮಸಲ್‌ ಕ್ಯಾಚ್‌ ಈ ಬಗೆಯ ಸಮಸ್ಯೆ ತಡೆಗಟ್ಟಬಹುದು.
* ಫೋಲೆಟ್ ಇದೆ
ಬೀಟ್‌ರೂಟ್‌ ಫೋಲೆಟ್‌ ಅಂಶವಿರುವುದರಿಂದ ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ಕುಡಿದರೆ ಇನ್ನೂ ಒಳ್ಳೆಯದು.
* ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು
ಬೀಟ್‌ರೂಟ್‌ನಲ್ಲಿರುವ antioxidant betaine ಲಿವರ್‌ನ ಆರೋಗ್ಯ ಕಾಪಾಡುತ್ತದೆ. ತುಂಬಾ ಹೊತ್ತು ಕೂತು ಕೆಲಸ ಮಾಡುವುದು, ದೈಹಿಕ ವ್ಯಾಯಾಮವಿಲ್ಲದಿರುವುದು, ಮದ್ಯಪಾನ, ಅನಾರೋಗ್ಯಕರ ಇವುಗಳಿಂದ ಲಿವರ್‌ಗೆ ಉಂಟಾಗುವ ಹಾನಿ ತಡೆಗಟ್ಟಲು ಸಹಕಾರಿ.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries