HEALTH TIPS

ಜ್ಞಾನವಾಪಿ: ಏಳೂ ಪ್ರಕರಣಗಳ ಒಟ್ಟಿಗೆ ವಿಚಾರಣೆ ನಡೆಸಲು ಆದೇಶ

                    ವಾರಾಣಸಿ : ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದ ಏಳೂ ಪ್ರಕರಣಗಳನ್ನು ಒಟ್ಟಿಗೇ ವಿಚಾರಣೆ ನಡೆಸಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

               ಶೃಂಗಾರ್ ಗೌರಿ- ಜ್ಞಾನವಾಪಿ ಪ್ರಕರಣದ ಅರ್ಜಿದಾರರಾದ ಲಕ್ಷ್ಮಿ ದೇವಿ, ರೇಖಾ ಪಾಠಕ್, ಸೀತಾ ಸಾಹು ಮತ್ತು ಮಂಜು ವ್ಯಾಸ್ ಅವರು ಏಳು ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

              ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ್ ಅವರು ಪ್ರತಿವಾದಿಗಳ ಆಕ್ಷೇಪದ ನಡುವೆಯೂ ತಮ್ಮ ವಿಶೇಷ ಅಧಿಕಾರ ಚಲಾಯಿಸಿ, ಪ್ರಕರಣಗಳನ್ನು ಕ್ರೋಢೀಕರಿಸಿ ವಿಚಾರಣೆ ನಡೆಸಲು ಆದೇಶ ನೀಡಿದರು ಎಂದು ಜ್ಞಾನವಾಪಿ ಮತ್ತು ಆದಿ ವಿಶ್ವೇಶ್ವರ್ ಪ್ರಕರಣಗಳ ಪರ ವಿಶೇಷ ವಕೀಲ ರಾಜೇಶ್ ಮಿಶ್ರಾ ಹೇಳಿದರು.

             'ಜ್ಞಾನವಾಪಿ ಮಾದರಿಯ ಪ್ರಕರಣಗಳು ಬೇರೆ ಬೇರೆ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದಲ್ಲಿ ವ್ಯತಿರಕ್ತ ಆದೇಶಗಳು ಬರುವ ಸಾಧ್ಯತೆ ಇದೆ. ಹಾಗಾಗಿ, ಈ ಎಲ್ಲ ಪ್ರಕರಣಗಳು ಒಂದೇ ನ್ಯಾಯಾಲಯದಲ್ಲಿದ್ದರೆ ಈ ಪ್ರಕರಣಗಳಲ್ಲಿ ಯಾವುದೇ ವ್ಯತಿರಿಕ್ತ ಆದೇಶ ಬರುವ ಸಾಧ್ಯತೆ ಇರುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು' ಎಂದೂ ಮಿಶ್ರಾ ಮಾಹಿತಿ ನೀಡಿದ್ದಾರೆ.

             'ಒಂದೇ ನ್ಯಾಯಾಲಯದಲ್ಲಿ ಎರಡು ಅಥವಾ ಹೆಚ್ಚಿನ ಪ್ರಕರಣಗಳು ಬಾಕಿ ಇರುವಾಗ ಮತ್ತು ನ್ಯಾಯದ ಹಿತಾಸಕ್ತಿಯಿಂದ ನ್ಯಾಯಾಲಯವು ಅಭಿಪ್ರಾಯಪಟ್ಟರೆ, ಅವುಗಳ ಜಂಟಿ ವಿಚಾರಣೆಗೆ ಆದೇಶಿಸಬಹುದು' ಎಂದು ಸಿಪಿಸಿಯ 4ಎ ಆದೇಶವನ್ನು ಉಲ್ಲೇಖಿಸಿ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

               ಮುಸ್ಲಿಮರ ಪರ ವಾದ ಮಂಡಿಸಿದ್ದ ವಕೀಲ ಮೊಹಮ್ಮದ್ ತೊಹಿದ್ ಖಾನ್ ಅವರು, ಎಲ್ಲಾ ಏಳು ಪ್ರಕರಣಗಳ ವಿಚಾರಣೆಯನ್ನು ವಿರೋಧಿಸಿದರು. 'ಜ್ಞಾನವಾಪಿಗೆ ಸಂಬಂಧಿಸಿದ ವಿಷಯಗಳು ಇನ್ನೂ ಒಂದು ಹಂತಕ್ಕೆ ಬಂದಿಲ್ಲ, ಅವುಗಳನ್ನು ಒಟ್ಟಿಗೆ ಆಲಿಸುವ ನಿರ್ಧಾರ ಹಿಂತೆಗೆದುಕೊಳ್ಳಬೇಕು' ಎಂದು ಪ್ರತಿಪಾದಿಸಿದರು.

               'ಈಗಿನಂತೆ ಎಲ್ಲಾ ಪ್ರಕರಣಗಳ ಸಾಕ್ಷ್ಯವನ್ನು ನ್ಯಾಯಾಲಯವು ನೋಡಬೇಕಿತ್ತು. ಸಾಕ್ಷಿ ಒಂದೇ ಆಗಿದ್ದರೆ, ಅಂತಹ ತೀರ್ಪು ನೀಡಬಹುದು' ಎಂದು ಖಾನ್ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries