ಕಾಸರಗೋಡು: ಓದುವಿಕೆ ಬೌದ್ಧಿಕ ವಿಕಾಸಕ್ಕೆ ಹಾದಿಮಾಡಿಕೊಡುವುದಾಗಿ ಬರಹಗಾರ ಟಿ.ಪದ್ಮನಾಭನ್ ತಿಳಿಸಿದ್ದಾರೆ. ಅವರು ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಭಿವೃದ್ಧಿ ಸಮಿತಿಯ ಪುಸ್ತಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಓದುಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಮೊಬೈಲ್ ಸಂಸ್ಕøತಿ ಹೆಚ್ಚಾಗಿದೆ. ಭಾಷಾ ಸಾಹಿತ್ಯದಲ್ಲಿ ಏನಾದರೂ ಬೆಳವಣಿಗೆ ಆಗಿದ್ದರೆ ಅದಕ್ಕೆ ಓದಿನಿಂದ ಪಡೆದ ಜ್ಞಾನ ಕಾರಣವಾಗಿದೆ ಎಂದು ತಿಳಿಸಿದರು.
ಕಾಞಂಗಾಡ್ ಅಲಾಮಿಪ್ಪಳ್ಳಿ ಹೊಸ ಬಸ್ ನಿಲ್ದಾಣ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ವಹಿಸಿದ್ದರು.
ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಿ.ಕುಞÂರಾಮನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಲೇಖಕರಾದ ಟಿ.ಡಿ.ರಾಮಕೃಷ್ಣನ್ ಬರಹ ಮತ್ತು ಅನುಭವ ಎಂಬ ವಿಷಯದ ಕುರಿತು ಹಾಗೂ ಡಾ.ಕೆ.ಎಸ್.ರವಿಕುಮಾರ್ "ಮನಸ್ಸಿಗೆ ಬದ್ಧವಾದುದು ಕಾಣಿಸಿಕೊಂಡಾಗ" ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಡಾ.ಕೆ.ಎಸ್.ರವಿಕುಮಾರ್ ಬರೆದ ಪುಸ್ತಕ ಬಿಡುಗಡೆ ಮಾಡಲಾಯಿತು. ರಾಜ್ಯ ಗ್ರಂಥಾಲಯ ಪರಿಷತ್ ಮಾಜಿ ಕಾರ್ಯದರ್ಶಿ ವಕೀಲ ಪಿ.ಅಪ್ಪುಕುಟ್ಟನ್, ಪಿ.ದಿಲೀಪ್ ಕುಮಾರ್, ಕೆ.ರವೀಂದ್ರನ್, ಡಾ.ಬಿ.ಮಹಮ್ಮದ್ ಅಹಮದ್, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ಜಿಲ್ಲಾ ಜಂಟಿ ಕಾರ್ಯದರ್ಶಿ ಟಿ.ರಾಜನ್ ಉಪಸ್ಥೀತರಿದ್ದರು. ಸಂಘಟನಾ ಸಮಿತಿ ಪ್ರಧಾನ ಸಂಚಾಲಕ ಹಾಗೂ ಜಿಲ್ಲಾ ಗ್ರಂಥಾಲಯ ಪರಿಷತ್ ಕಾರ್ಯದರ್ಶಿ ಡಾ.ಪಿ.ಪ್ರಭಾಕರನ್ ಸ್ವಾಗತಿಸಿದರು. ರಾಜ್ಯ ಗ್ರಂಥಾಲಯ ಲೈಬ್ರರಿ ಕೌನ್ಸಿಲ್ ಎಕ್ಸಿಕ್ಯೂಟಿವ್ ಪಿ.ವಿ.ಕೆ.ಪನಾಯಾಲ್ ವಂದಿಸಿದರು.
ಪುಸ್ತಕೋತ್ಸವದ ಅಂಗವಾಗಿ ನಡೆದ ಬರಹಗಾರರ ಕೂಟದಲ್ಲಿ ಜಿಲ್ಲೆಯಲ್ಲಿ ನೂತನವಾಗಿ ಪ್ರಕಟಗೊಂಡ ಪುಸ್ತಕಗಳನ್ನು ರಾಜ್ ಮೋಹನ್ ನೀಲೇಶ್ವರ ಬಿಡುಗಡೆ ಮಾಡಿದರು.





