HEALTH TIPS

ರಂಗಚಿನ್ನಾರಿಯಿಂದ ಸುಗಮ ಸಂಗೀತದ ಬೆಳವಣಿಗೆ, ಪ್ರಸಾರಕ್ಕಾಗಿ ಪ್ರತ್ಯೇಕ ಘಟಕ

 


          ಕಾಸರಗೋಡು: ಜಿಲ್ಲೆಯ ಸಾಂಸ್ಕøತಿಕ ಸಂಘಟನೆ ರಂಗಚಿನ್ನಾರಿಯ ಅಂಗಸಂಸ್ಥೆ ಯಾಗಿ ರೂಪುಗೊಂಡ ನಾರಿಚಿನ್ನಾರಿ ವೇದಿಕೆ ಮೂಲಕ ಸುಗಮ ಸಂಗೀತದ ಬೆಳವಣಿಗೆ ಮತ್ತು ಪ್ರಸಾರಕ್ಕಾಗಿ  ಪ್ರತ್ಯೇಕ ಘಟಕ ರಚನೆಯಾಗಲಿದೆ. 

           ಕಾಸರಗೋಡಿನ ಬಹಳಷ್ಟು ಮಂದಿ ಕವಿ -ಕವಯತ್ರಿಯರು ತಮ್ಮ ಪ್ರತಿಭೆ  ಹಾಗೂ ಕಾವ್ಯ ಕೌಶಲದಿಂದ ಸೈ ಎನಿಸಿ ಕೊಂಡಿದ್ದು, ಇದರಲ್ಲಿ ಸುಮಧುರ ಭಾವಗೀತೆಗಳ ರಚನಾಕಾರರು,   ಸುಗಮ ಸಂಗೀತದಲ್ಲಿ ತೊಡಗಿಸಿಕೊಂಡು ಜನಮನಸೂರೆಗೊಳ್ಳುತ್ತಿರುವ ಮಧುರ ಕಂಠದ ಗಾಯಕ -ಗಾಯಕಿಯರಿದ್ದಾರೆ.     

           ವಾದ್ಯಸಂಗೀತದಲ್ಲಿ ಪರಿಣತಿ ಸಾಧಿಸಿದವರು ಸೇರಿದಂತೆ ಭರವಸೆ ಮೂಡಿಸಿರುವ ಅದೆಷ್ಟೋ ಉದಯೋನ್ಮುಖ  ಪ್ರತಿಭೆಗಳಿಗೆ  ಸೂಕ್ತ ವೇದಿಕೆ  ಕಲ್ಪಿಸಿ ಪೋಷಿಸುವ ನಿಟ್ಟಿನಲ್ಲಿ ಹೊಸ ಘಟಕ ರಚನೆಯಾಗಲಿದೆ.  ಈ ನಿಟ್ಟಿನಲ್ಲಿ ಸಾಹಿತ್ಯ ಮತ್ತು  ಸಂಗೀತ ಕ್ಷೇತ್ರದ  ಸಮಾನ ಆಸಕ್ತರ  ಸಭೆ ಜೂ. 10ರಂದು ಸಂಜೆ 4ಕ್ಕೆ ಕರಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿರುವುದಾಗಿ ಪ್ರಕಟಣೆ ತಿಳಿಸಿದೆ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries