ಕಾಸರಗೋಡು: ಮಧೂರು ಗ್ರಾಮ ಪಂಚಾಯಿತಿಯ ಆಶ್ರಯದಲ್ಲಿ 2022-23ರ ವಾರ್ಷಿಕ ಯೋಜನೆಯಲ್ಲಿ ಒಳಗೊಂಡಿರುವ ಅಜೈವಿಕ ತ್ಯಾಜ್ಯ ಸಂಗ್ರಹಕ್ಕಾಗಿ ಖರೀದಿಸಿದ ವಾಹನದ ಕೀಲಿಕೈ ಹಸ್ತಾಂತರ ಸಮಾರಂಭ ಮಧೂರು ಗ್ರಾಮ ಪಂಚಾಯಿತಿ ಕಚೇರಿ ವಠಾರದಲ್ಲಿ ಜರುಗಿತು. ಮಧೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸ್ಮಿಜಾ ವಿನೋದ್ ಅವರು ಹಸಿರು ಕ್ರಿಯಾ ಸೇನೆಯ ಒಕ್ಕೂಟ ಕಾರ್ಯದರ್ಶಿ ಸಿ.ಎಚ್.ರತಿ ಸುಧಾ ಅವರಿಗೆ ಹಸ್ತಾಂತರಿಸಿ ನೂತನ ವಾಹನ ಉದ್ಘಾಟಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು, ಉಮೇಶ್ ಗಟ್ಟಿ, ಯಶೋದಾ ಎಸ್.ನಾಯಕ್, ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಕಾರ್ಯದರ್ಶಿ ಪಿ.ಜ್ಯೋತೀಶ್, ಸಹಾಯಕ ಕಾರ್ಯದರ್ಶಿ ಪಿ.ಪೀತಾಂಬರನ್, ಹಸಿರು ಕ್ರಿಯಾ ಸೇನೆ ಕಾರ್ಯಕರ್ತರು ಉಪಸ್ಥಿತರಿದ್ದರು.

