ನಿದ್ದೆ ಮನುಷ್ಯನ ದೇಹಕ್ಕೆ ತುಂಬಾನೇ ಅವಶ್ಯಕವಾಗಿದೆ. ಒರ್ವ ವ್ಯಕ್ತಿ ಆರೋಗ್ಯವಾಗಿರಬೇಕಂದ್ರೆ ಆತನಿಗೆ ಇಂತಿಷ್ಟು ಗಂಟೆಗಳ ನಿದ್ದೆ ತುಂಬಾನೇ ಮುಖ್ಯವಾಗಿ ಬೇಕಾಗಿರುತ್ತದೆ. ಇತ್ತೀಚಿಗೆ ನಾವು ಪಾಲಿಸುತ್ತಿರುವ ಜೀವನ ಶೈಲಿಯಿಂದಾಗಿ ಸರಿಯಾಗಿ ನಿದ್ದೆಯಿಲ್ಲದೇ ನಮ್ಮ ದೇಹ ಒದ್ದಾಡುತ್ತಿದೆ. ಇನ್ನೊಂದು ಕಡೆಯಿಂದ ಅತಿಯಾಗಿ ನಿದ್ದೆ ಮಾಡುವವರನ್ನೂ ಕೂಡ ನಾವು ನೋಡಿರ್ತೀವಿ. ಹೀಗಾಗಿ ನಿದ್ದೆ ಅತಿಯಾದರೂ ಒಳ್ಳೆಯದಲ್ಲ, ನಿದ್ದೆ ಕಡಿಮೆಯಾದರೂ ಆರೋಗ್ಯದ ದೃಷ್ಟಿಯಿಂದ ಅಪಾಯಯವೇ ಸರಿ.
ನಮ್ಮಲ್ಲಿ ಅನೇಕರಿಗೆ ಮಧ್ಯಾಹ್ನದ ಹೊತ್ತು ಮಲಗುವ ಅಭ್ಯಾಸವಿದೆ. ಸಾಮಾನ್ಯವಾಗಿ ಮಧ್ಯಾಹ್ನದ ಊಟದ ನಂತರ ಮಲಗೋದನ್ನು ರೂಢಿ ಮಾಡಿಕೊಂಡಿರುತ್ತಾರೆ. ಗೃಹಿಣಿಯರು, ಮಕ್ಕಳು, ವಯಸ್ಸಾದವರು ಹೆಚ್ಚಾಗಿ ಮಧ್ಯಾಹ್ನವು ಮಲಗುತ್ತಾರೆ. ಇನ್ನೂ ರಜೆ ಇರುವ ಸಂದರ್ಭದಲ್ಲಿ ಸಾಮಾನ್ಯವಾಗಿ ಎಲ್ಲರೂ ಮಧ್ಯಾಹ್ನ ಮಲಗುತ್ತಾರೆ. ಅಷ್ಟಕ್ಕು ಮಧ್ಯಾಹ್ನ ಮಲಗಿದ್ರೆ ಒಳ್ಳೆಯದು ಎಂದು ಅಧ್ಯಯನಗಳು ಹೇಳಿದ್ರೆ, ಅದೇ ಅಧ್ಯಯನ ಮಧ್ಯಾಹ್ನನ ಸಮಯ ಮಲಗೋದು ಒಳ್ಳೆಯದಲ್ಲ ಅಂತಾನೂ ಹೇಳುತ್ತೆ. ಹಾಗಾದ್ರೆ ಈ ಬಗ್ಗೆ ಮಾಹಿತಿ ತಿಳಿಸಿ ಕೊಡ್ತೀವಿ.1. ನಿಮ್ಮ ದೇಹಕ್ಕೆ ನಿದ್ದೆ ಅವಶ್ಯಕತೆ ಇರೋದಿಲ್ಲ
ಮಧ್ಯಾಹ್ನದ ನಿದ್ದೆ ಮಾಡೋದು ಒಂದು ರೀತಿಯಲ್ಲಿ ಒಳ್ಳೆಯದೇ ಆದರೆ ಇದು ಎಲ್ಲರ ಆರೋಗ್ಯಕ್ಕೆ ಸರಿಹೊಂದುವುದಿಲ್ಲ. ಮುಖ್ಯವಾಗಿ ನೀವು ಇನ್‌ಸೋಮೇನಿಯಾ ಎಂಬ ರೋಗದಿಂದ ಬಳಲುತ್ತಿದ್ದರೆ ಇದು ನಿಮಗೆ ನಿಮ್ಮ ದೈನಂದಿನ ಚಟುವಟಿಕೆಗೆ ಅಡ್ಡಿಯುಂಟು ಮಾಡಬಹುದು. ಹೀಗಾಗಿ ನಿಮ್ಮ ದೇಹಕ್ಕೆ ನಿದ್ದೆಯ ಅವಶ್ಯಕತೆ ಇಲ್ಲ ಎಂದರೆ ನಿದ್ದೆ ಮಾಡೋದು ಬೇಡ.
2. ರಾತ್ರಿ ನಿದ್ದೆ ಬರೋದಿಲ್ಲ
ಅನೇಕ ಜನರಿಗೆ ರಾತ್ರಿ ತಡವಾಗಿ ನಿದ್ದೆ ಬರುತ್ತದೆ. ಬೇಗ ಮಲಗಿದರೂ ಕೂಡ ತುಂಬಾ ಹೊತ್ತು ಹೊರಳಾಡಿದ ನಂತರ ನಿದ್ದೆ ಬರುವುದು. ಇಂತವರು ಮಧ್ಯಾಹ್ನ ನಿದ್ದೆ ಮಾಡೋದಕ್ಕೆ ಹೋಗಲೇಬೇಡಿ. ಯಾಕಂದ್ರೆ ಮಧ್ಯಾಹ್ನ ನಿದ್ದೆ ಮಾಡಿರೋದ್ರಿಂದ ನಿಮಗೆ ರಾತ್ರಿ ನಿದ್ದೆ ಬರುವಾಗ ತಡವಾಗಬಹುದು. ಅಥವಾ ಮಧ್ಯರಾತ್ರಿಯವರೆಗೂ ನಿದ್ದೆ ಬಾರದೇ ಇರಬಹುದು. ಇದರಿಂದ ನಿಮಗೆ ಬೆಳಗ್ಗೆ ಸರಿಯಾದ ಸಮಯಕ್ಕೆ ಎದ್ದೇಳೋದಕ್ಕೆ ಆಗೋದಿಲ್ಲ.
3. ಖಿನ್ನತೆ ಮತ್ತಷ್ಟು ಹೆಚ್ಚಾಗಬಹುದು
ನೀವು ಆತಂಕ, ಒತ್ತಡ, ಖಿನ್ನತೆಯಂತಹ ಸಮಸ್ಯೆಯಿಂದ ಹೋರಾಡುತ್ತಿದ್ದರೆ ನಿದ್ರಿಸುವುದರಿಂದ ಇದಕ್ಕೆಲ್ಲಾ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ನೀವು ಅಂದುಕೊಳ್ಳಬಹುದು. ಆದರೆ ನಿಮ್ಮ ಈ ಕಲ್ಪನೆ ತಪ್ಪು. ಮಲಗೋದ್ರಿಂದ ನಿಮ್ಮ ಖಿನ್ನತೆ ಮತ್ತಷ್ಟು ಹೆಚ್ಚಾಗುತ್ತದೆ. ಇದಿಷ್ಟೇ ಅಲ್ಲ, ಸ್ಥೂಲಕಾಯತೆ ಅಥವಾ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳು ಮಧ್ಯಾಹ್ನದ ನಿದ್ರೆಯಿಂದ ದೂರವಿರಬೇಕು. ಏಕೆಂದರೆ ಈ ಸಮಸ್ಯೆ ನಿಮ್ಮನ್ನು ಮತ್ತಷ್ಟು ಹೆಚ್ಚಾಗಿ ಕಾಡಬಹುದು.
4. ನಿಮ್ಮ ಮೂಡ್ ಹಾಳಾಗುತ್ತದೆ
ಸಾಮಾನ್ಯವಾಗಿ ನಾವು ಮಲಗಿ ಎದ್ದ ನಂತರ ನಮ್ಮ ಮನಸ್ಥಿತಿ ಚೆನ್ನಾಗಿರೋದಿಲ್ಲ. ಯಾವ ಕೆಲಸ ಮಾಡೋದಕ್ಕೂ ನಮಗೆ ಮನಸ್ಸಾಗೋದಿಲ್ಲ. ಜಡವಾದಂತೆ ಭಾಸವಾಗುತ್ತದೆ. ಅದ್ರಲ್ಲೂ ನಾವು ಮಧ್ಯಾಹ್ನದಿಂದ ಸಂಜೆವರೆಗೂ ಮಲಗಿದರಂತೂ ಕೇಳೋದೇ ಬೇಡ. ಆ ದಿನದ ನಮ್ಮ ಕೆಲಸವೇ ಹಾಳಾಗಿ ಹೋಗುತ್ತದೆ. ನಿದ್ದೆಯಿಂದ ಎದ್ದ ಮೇಲೆ ಯಾವ ಕೆಲಸವನ್ನೂ ಮಾಡೋದಕ್ಕೆ ಮನಸ್ಸಿರೋದಿಲ್ಲ. ಹೀಗಾಗಿ ಮಧ್ಯಾಹ್ನ ನಿದ್ದೆ ಮಾಡಬೇಡಿ. ಒಂದು ವೇಳೆ ನಿದ್ದೆ ಮಾಡಿದರೂ 30 ನಿಮಿಷ ನಿದ್ರಿಸಿದರಷ್ಟೇ ಸಾಕು.
ನಿದ್ದೆ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ :
* ಮಧ್ಯಾಹ್ನ ಅಥವಾ ರಾತ್ರಿಯೇ ಆಗಲಿ ನಿದ್ದೆ ಮಾಡುವ ಮೊದಲು ಅಲರಾಂ ಇಟ್ಟುಕೊಳ್ಳಿ. ಯಾಕಂದ್ರೆ ಪ್ರತಿನಿತ್ಯ ನೀವು ಇಂತಿಷ್ಟು ಸಮಯ ಮಾತ್ರ ನಿದ್ದೆ ಮಾಡಬೇಕು. ಆ ಸಮಯವನ್ನೇ ಪ್ರತಿನಿತ್ಯ ನೀವು ಪಾಲನೆ ಮಾಡಬೇಕು. ಒಂದು ದಿನ ಹೆಚ್ಚು ಕಡಿಮೆಯಾದರೆ ಆರೋಗ್ಯಕ್ಕೆ ತೊಂದರೆ.
* ದಿನ ನಿತ್ಯ ಏಳರಿಂದ ಎಂಟು ಗಂಟೆ ನಿದ್ರೆ ಮಾಡಿದರೆ ಸಾಕು. ಇನ್ನೂ ಮಧ್ಯಾಹ್ನ ಮಲಗಲೇಬೇಕು ಅನ್ನುವವರು 30 ನಿಮಿಷ ನಿದ್ರಿಸಿದರೆ ಸಾಕು
* ಇನ್ನೂ ಮಲಗುವ ಸ್ವಲ್ಪ ಹೊತ್ತಿಗೂ ಮೊದಲು ಕಾಫಿ, ಟೀ ಕುಡಿಯೋದು ಒಳ್ಳೆಯದಲ್ಲ. ಇದು ನಿಮ್ಮ ಎಚ್ಚರವಾಗಿರುವಂತೆ ಪ್ರಚೋದಿಸುತ್ತದೆ.
* ಮಲಗುವ ಮೊದಲು ನಿಮ್ಮಲ್ಲಿರುವ ಎಲ್ಲಾ ಒತ್ತಡಗಳನ್ನು ದೂರವಿಡಿ. ನಿಮ್ಮಲ್ಲಿ ಒತ್ತಡ ಹೆಚ್ಚಾಗಿದ್ದರೆ ನಿಮಗೆ ನಿದ್ರಿಸೋದಕ್ಕೆ ಆಗೋದಿಲ್ಲ
* ವ್ಯಾಯಾಮ ಮಾಡುವವರಾದರೆ ಮಲಗುವ 45 ನಿಮಿಷದ ಮೊದಲು ವ್ಯಾಯಾಮ ಮಾಡಿ
* ಏನಾದರೂ ತಿಂದ ಮೇಲಷ್ಟೇ ಮಲಗಿ. ಬರೀ ಹೊಟ್ಟೆಯಲ್ಲಿ ಮಲಗೋದು ಒಳ್ಳೆಯದಲ್ಲ. ಇನ್ನೂ ತಿಂದ ತಕ್ಷಣ ಮಲಗಬೇಡಿ. ಹತ್ತರಿಂದ ಹದಿನೈದು ನಿಮಿಷ ಅಡ್ಡಾಡಿ ನಂತರ ಮಲಗಿ
* ನಿದ್ದೆ ಬರೋದಿಲ್ಲವೆಂದು ನಿದ್ದೆಗೂ ಮೊದಲು ಮಧ್ಯಪಾನ ಮಾಡುವ ಅಭ್ಯಾಸ ಮಾಡಿಕೊಳ್ಳಬೇಡಿ
ಆಹಾರ, ಗಾಳಿ, ನೀರು, ವಸತಿ ಹೇಗೆ ನಮ್ಮ ಜೀವನದಲ್ಲಿ ಮುಖ್ಯವಾಗುತ್ತದೆಯೋ ಅದೇ ರೀತಿ ನಿದ್ದೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ನಾವು ನಿದ್ರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು.





