HEALTH TIPS

ಇತ್ತೀಚಿನ ಯುವ ಜನತೆ ಮಕ್ಕಳಿಲ್ಲದ ಜೀವನ ಬೇಕು ಅನ್ನೋದು ಇದೇ ಕಾರಣಕ್ಕೆ !

 ನಮ್ಮಲ್ಲಿ ಅನೇಕ ಜನ ಮಕ್ಕಳು ಬೇಕೆಂದು ಅನೇಕ ದೇವಸ್ಥಾನಗಳಲ್ಲಿ ಪೂಜೆ, ಹರಕೆ ಸಲ್ಲಿಸುತ್ತಾರೆ. ಮತ್ತೊಂದು ಕಡೆ ಜನ ಮದುವೆಯಾದ್ರೂ ಮಕ್ಕಳನ್ನು ಹೊಂದದೇ ಆರಾಮಾಗಿರಬೇಕೆಂದು ಬಯಸುತ್ತಾರೆ. ಮಕ್ಕಳು ಬೇಡವೆಂದು ಸ್ವ ಇಚ್ಛೆಯಿಂದ ದಂಪತಿಗಳಿಬ್ಬರು ನಿರ್ಧರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಲ್ಲದೇ ಬದುಕೋದು ಅಂದ್ರೆ "ಚೈಲ್ಡ್‌ ಫ್ರೀ ಲೈಫ್‌" ಒಂದು ರೀತಿಯಲ್ಲಿ ಕಾಮನ್‌ ಆಗ್ಬಿಟ್ಟಿದೆ. ಅಷ್ಟಕ್ಕು ಮಕ್ಕಳಿಲ್ಲದೇ ಬದುಕೋದ್ರಿಂದ ಏನೆಲ್ಲಾ ಲಾಭಗಳಿದೆ? ಅನ್ನೋದನ್ನು ತಿಳಿಯೋಣ.

1. ಹಣ ಉಳಿತಾಯ ಮಾಡಬಹುದು
ಒಂದು ಮಗು ಹುಟ್ಟಿದಾಗಿನಿಂದ ಹಿಡಿದು ಅದನ್ನು ಬೆಳೆಸಿ ತನ್ನ ಕಾಲ ಮೇಲೆ ನಿಲ್ಲುವ ಹಾಗೆ ಮಾಡೋವರೆಗೂ ದಂಪತಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುತ್ತಾರೆ. ಮಗುವಿನ ಶಾಲಾ, ಕಾಲೇಜು ಫೀಸು, ಬಟ್ಟೆ-ಬರೆ, ದಿನನಿತ್ಯದ ಖರ್ಚು-ವೆಚ್ಚಗಳು, ಇದರ ಮಧ್ಯೆ ಇತರ ವೆಚ್ಚಗಳು ಅಂತೆಲ್ಲಾ ಮಕ್ಕಳ ಮೇಲೆ ಲಕ್ಷಾಂತರ ರೂಪಾಯಿ ಸುರಿಯಬೇಕಾಗುತ್ತದೆ. ಕೆಲವೊಂದು ಸಲ ಪತಿ-ಪತ್ನಿ ಇಬ್ಬರೂ ಕೆಲಸಕ್ಕೆ ಹೋದರೂ ಕೂಡ ತಿಂಗಳ ಕೊನೆಯಲ್ಲಿ ಬಿಡಿಗಾಸು ಉಳಿಯೋದಿಲ್ಲ. ಆದರೆ ಮಕ್ಕಳೇ ಇಲ್ಲದಿದ್ದರೆ ಈ ಎಲ್ಲಾ ಹಣವನ್ನು ಪೋಷಕರು ಉಳಿತಾಯ ಮಾಡಬಹುದು. ಆರಾಮಾಗಿ ಇರಬಹುದು.

2. ಪರಿಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ
ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಈ ಭೂಗೋಳವು ಅನೇಕ ಸಮಸ್ಯೆಯನ್ನು ಎದುರಿಸ್ತಿದೆ. ಇತ್ತ ಮಕ್ಕಳನ್ನು ಹೊಂದದೇ ಇರುವ ದಂಪತಿಗಳ ನಿರ್ಧಾರ ಪರಿಸರಕ್ಕೆ ಕೊಡುಗೆ ನೀಡದಂತಾಗುತ್ತದೆ. ಒಂದು ಮಗು ಹುಟ್ಟಿದರೆ ಅದರ ಬಟ್ಟೆ ಬರೆ, ಪುಸ್ತಕ ಬ್ಯಾಗು, ದೊಡ್ಡದಾಗಿ ಬೆಳೆದ ಮೇಲೆ ಕಾರು, ಬೈಕು ಅಂತೆಲ್ಲಾ ಖರೀದಿ ಮಾಡುತ್ತೆ. ಒಬ್ಬ ಮನುಷ್ಯನಿಂದ ದೊಡ್ಡ ಪ್ರಮಾಣದಲ್ಲಿ ವಾಯು, ಜಲ, ಮಣ್ಣು ಮಾಲಿನ್ಯವಾಗುತ್ತೆ. ಮಗು ಹುಟ್ಟಿದಾಗಿನಿಂದ ಬೆಳೆದು ದೊಡ್ಡದಾಗುವವರೆಗೆ ಅನೇಕ ರೀತಿಯಲ್ಲಿ ಪರಿಸರಕ್ಕೆ ಹಾನಿಯೇ ಆಗುತ್ತೆ.

3. ಪ್ರಯಾಣ ಮಾಡುವಾಗ ಕಿರಿ ಕಿರಿ ಇರೋದಿಲ್ಲ
ಮಗುವನ್ನು ಕರೆದುಕೊಂಡು ಎಲ್ಲಿಗಾದರೂ ಹೋಗಬೇಕಾದರೆ ಎಷ್ಟು ಪ್ಯಾಕಿಂಗ್‌ ಮಾಡಿದ್ರು ಕೂಡ ಮುಗಿಯೋದೇ ಇಲ್ಲ. ಒಂದು ದಿನಕ್ಕಾಗಿ ಹೊರಗಡೆ ಹೋಗೋದಾದ್ರು ಕೂಡ ಒಂದು ಬ್ಯಾಗ್‌ ಬಟ್ಟೆಗಳನ್ನು ಪ್ಯಾಕ್‌ ಮಾಡಲೇಬೇಕು. ಅದೇ ಮಕ್ಕಳಿಲ್ಲದೇ ಇದ್ದರೆ ಬರೀ ಮನೆಯನ್ನು ಲಾಕ್‌ ಮಾಡಿ ಆರಾಮಾಗಿ ಹೋಗಬಹುದು. ಇನ್ನೂ ಅನೇಕರಿಗೆ ಟ್ರೆಕ್ಕಿಂಗ್‌ ಮಡ್ಬೇಕು, ಅಡ್ವೆಂಚರಸ್‌ ಜಾಗಕ್ಕೆ ಹೋಗ್ಬೇಕು ಅಂತ ಇಷ್ಟ ಇರುತ್ತೆ. ಆದ್ರೆ ಮಕ್ಕಳಿದ್ರೆ ಇದು ಸಾಧ್ಯವಾಗೋದಿಲ್ಲ. ಮಕ್ಕಳಿಲ್ಲದಿದ್ರೆ ಆರಾಮಾಗಿ ಹೋಗಿ ಬರಬಹುದು.

4. ಆರೋಗ್ಯವಾಗಿರುತ್ತೀರಿ
ಒಂದು ಅಧ್ಯಯನದ ಪ್ರಕಾರ ಮಕ್ಕಳಿರುವ ಜೋಡಿಗಳಿಗೆ ಹೋಲಿಕೆ ಮಾಡಿದ್ರೆ ಮಕ್ಕಳಿಲ್ಲದ ಜೋಡಿಗಳು ತುಂಬಾನೇ ಆರೋಗ್ಯವಾಗಿರುತ್ತಾರೆ. ಮನೆಯಲ್ಲಿ ಮಕ್ಕಳ ಕಿರುಚಾಟ, ಗಲಾಟೆ ಇಲ್ಲದೆ ಆರಾಮಾಗಿರಬಹುದು. ಇನ್ನೂ ಮಕ್ಕಳು ಓದದೇ ಇರುವ ಸಂದರ್ಭದಲ್ಲಿ ಮತ್ತೆ ಪೋಷಕರಿಗೆ ಒತ್ತಡ ಹೆಚ್ಚಾಗುತ್ತದೆ. ಇನ್ನೂ ಟೀನೇಜ್‌ಗೆ ಬಂದಾಗ ಪ್ರೀತಿ, ಪ್ರೇಮ ಅನ್ನೋ ಗುಂಗಿಗೆ ಸಿಲುಕಿದರೆ ಅದರಿಂದಲೂ ಪೋಷಕರು ದುಃಖ ಪಡಬೇಕಾಗುತ್ತದೆ. ಇನ್ನೂ ಅವರು ದುಸ್ಚಟಗಳುಗೆ ಸಿಲುಕಿದರೆ ತಂದೆ- ತಾಯಿ ದುಃಖಿತರಾಗುತ್ತಾರೆ. ಒಟ್ಟಿನಲ್ಲಿ ಜೀವನದುದ್ದಕ್ಕೂ ಅವರಿಗಾಗಿ ಒಂದಲ್ಲ ಒಂದು ಕಾರಣಕ್ಕೆ ಬೇಸರ ಪಟ್ಟುಕೊಳ್ಳಲೇಬೇಕು.

5. ಕಣ್ಣು ತುಂಬಾ ನಿದ್ದೆ ಮಾಡಬಹುದು
ಸಣ್ಣ ಮಕ್ಕಳನ್ನು ಎಷ್ಟು ಸೂಕ್ಷ್ಮವಾಗಿ ನೋಡಬೇಕು ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಆ ಮಗು ಅತ್ತಾಗಲೆಲ್ಲಾ ಪೋಷಕರು ಏಳಬೇಕು. ಮಧ್ಯರಾತ್ರಿ ಎದ್ದು ಡೈಪರ್‌ ಬದಲಾಯಿಸಬೇಕು. ಆಗಾಗ್ಗೆ ಮಗುವಿಗೆ ಎದೆಹಾಲು ಕೊಡುತ್ತಿರಬೇಕು. ಈ ರೀತಿ ಮಗುವನ್ನು ತುಂಬಾನೇ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತದೆ. ಒಂದು ಕಡೆ ಮಗುವನ್ನು ನೋಡಿಕೊಳ್ಳೋ ತರಾತುರಿಯಲ್ಲಿ ಸರಿಯಾಗಿ ನಿದ್ದೆ ಇಲ್ಲದೇ ಪೋಷಕರ ಆರೋಗ್ಯ ಕೆಡುತ್ತದೆ.

6. ಮನೆಯ ಸೌಂದರ್ಯ ಹಾಳಾಗುತ್ತದೆ
ನಾವು ಒಂದು ಮನೆಯನ್ನು ಕಟ್ಟಬೇಕಾದರೆ ಅದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಸುರಿದಿರ್ತೀವಿ. ಮನೆಯ ಇಂಟಿರಿಯರ್‌ ಬಗ್ಗೆ ತಲೆಕೆಡಿಸಿಕೊಂಡಿರ್ತೀವಿ. ಆದ್ರೆ ಮಕ್ಕಳಾದ ಮೇಲೆ ನಮ್ಮ ಮನೆಯ ಸೌಂದರ್ಯವೇ ಬದಲಾಗಿ ಹೋಗುತ್ತದೆ. ಗೋಡೆಯ ತುಂಬೆಲ್ಲಾ ಕಲೆಗಳು, ಸೋಫಾಗಳು ಕೂಡ ಹಾಳಾಗುತ್ತದೆ. ಒಡೆದು ಹೋಗುವ ಯಾವುದೇ ವಸ್ತುಗಳನ್ನು ಮಕ್ಕಳ ಕೈಗೆ ಸಿಗೋ ಹಾಗೇ ಇಡುವಂತಿಲ್ಲ. ಒಟ್ಟಿನಲ್ಲಿ ಮನೆಯಂತೂ ನಮಗೆ ಬೇಕಾದ ಹಾಗೇ ಇರೋದೇ ಇಲ್ಲ. ಆದರೆ ಮನೆಯಲ್ಲಿ ಗಂಡ-ಹೆಂಡತಿ ಇಬ್ಬರೇ ಇದ್ದರೆ ಈ ರೀತಿಯ ಯಾವುದೇ ಸಮಸ್ಯೆ ಬರೋದಿಲ್ಲ.

7. ದಂಪತಿಗಳ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ
ಗಂಡ-ಹೆಂಡತಿ ಮಧ್ಯೆ ಎಷ್ಟೇ ಪ್ರೀತಿಯಿದ್ದರೂ ಕೂಡ ಒಂದು ಮಗುವಾದ ಮೇಲೆ ಇಬ್ಬರ ಗಮನ ಕೂಡ ಆ ಮಗುವಿನ ಮೇಲೆ ಕೇಂದ್ರೀಕೃತವಾಗುತ್ತದೆ. ಮಗುವಿನ ಪಾಲನೆ, ಪೋಷಣೆಯಲ್ಲಿ ಇಬ್ಬರೂ ಕಳೆದು ಹೋಗುತ್ತಾರೆ. ಈ ಮಧ್ಯೆ ಅವರಿಬ್ಬರ ನಡುವಿನ ಪ್ರೀತಿ ಕಡಿಮೆಯಾಗಿರುತ್ತದೆ. ಆದರೆ ಮಗುವಿಲ್ಲದೇ ಗಂಡ-ಹೆಂಡತಿ ಇಬ್ಬರೇ ಇದ್ದಾಗ ಇಬ್ಬರ ನಡುವಿನ ಭಾಂದವ್ಯ ಮತ್ತಷ್ಟು ಹೆಚ್ಚಾಗುತ್ತಾ ಹೋಗುತ್ತದೆ.

8. ವಯಸ್ಸಾದ ಸಂದರ್ಭದಲ್ಲಿ ಮಕ್ಕಳ ಮೇಲೆ ಅವಲಂಬಿತವಾಗಬೇಕಾಗಿಲ್ಲ
ಮಕ್ಕಳು ಚಿಕ್ಕದಿರುವಾಗಿನಿಂದ ಹಿಡಿದು ಅವರು ಡೊಡ್ಡದಾಗುವವರೆಗೂ ಅವರ ಪಾಲನೆ ಪೋಷಣೆಯಲ್ಲೇ ಪೋಷಕರು ತಮ್ಮ ಜೀವ ಸವೆಸುತ್ತಾರೆ. ಇನ್ನೂ ಇರೋ ಬರೋ ದುಡ್ಡನ್ನೆಲ್ಲಾ ಅವರ ಶಿಕ್ಷಣ, ಮದುವೆ ಅಂತ ಖರ್ಚು ಮಾಡುತ್ತಾರೆ. ಇನ್ನೂ ಅವರ ಇಳಿ ವಯಸ್ಸಿನಲ್ಲಿ ಅವರನ್ನು ಯಾರು ನೋಡಿಕೊಳ್ಳುತ್ತಾರೆ ಅನ್ನೋದೇ ಪ್ರಶ್ನೆಯಾಗಿ ಬಿಡುತ್ತದೆ. ಅಪ್ಪ- ಅಮ್ಮನನ್ನು ನೋಡಿಕೊಳ್ಳೋದಕ್ಕೆ ಮಕ್ಕಳು ಹಿಂದೆ ಮುಂದೆ ನೋಡುತ್ತಾರೆ.

ಇದಕ್ಕಿಂತ ಮಕ್ಕಳಿಲ್ಲದ ಜೀವನ ಎಷ್ಟೋ ಪರವಾಗಿಲ್ಲ. ಯೌವನದಲ್ಲಿ ಪ್ರತಿವರ್ಷ ಇಂತಿಷ್ಟು ಹಣವನ್ನು ಬ್ಯಾಂಕ್‌ನಲ್ಲಿ ಕೂಡಿಟ್ರೆ, ಹಾಗೂ ಸ್ವಂತ ಮನೆ ಮಾಡಿಕೊಂಡ್ರೆ ಇಳಿವಯಸ್ಸಿನಲ್ಲಿ ಬದುಕೋದಕ್ಕೆ ಯಾವುದೇ ರೀತಿ ತೊಂದರೆಯಾಗೋದಿಲ್ಲ. ಯಾರ ಹಂಗಿಲ್ಲದೇ ತಮ್ಮ ಕಾಳಜಿಯನ್ನು ತಾವೇ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ನೋಡಿಕೊಳ್ಳೋದಕ್ಕೆ ಯಾರನ್ನಾದರೂ ನೇಮಿಸಬಹುದು.

ಜೀವನವೇ ಒಂದು ರೀತಿ ವಿಚಿತ್ರ. ನಾವು ಯಾವುದೇ ವಿಚಾರವನ್ನಾದರೂ ಮೊದಲೇ ನಿರ್ಧರಿಸೋದಕ್ಕೆ ಆಗೋದಿಲ್ಲ. ಮಕ್ಕಳಿದ್ದರೆ ಚೆನ್ನ, ಮಕ್ಕಳಿಲ್ಲದ ಜೀವನ ವ್ಯರ್ಥ ಅಂತ ಹೇಳೋದಿಕ್ಕಾಗೋದಿಲ್ಲ. ಅದು ಅವರವರ ಆಲೋಚನೆಗೆ ಬಿಟ್ಟಿದ್ದು, ನಮಗೆ ಬೇಕಾದ ಹಾಗೆ ನಮ್ಮ ಜೀವನವನ್ನು ಕಟ್ಟಿಕೊಳ್ಳುವ ಸ್ವಾತಂತ್ರ ನಮಗಿದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries