ಇಡುಕ್ಕಿ: ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಚಿವ ಎಂ.ಎಂ.ಮಣಿ ಟೀಕೆ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ದೇಶ ದ್ರೋಹಿಗಳಾಗಿದ್ದು, ಎಲ್ಲಿಂದ ಹಣ ಸಿಗುತ್ತದೆಯೋ ಅಲ್ಲೆಲ್ಲ ಖರೀದಿಸಲು ಮಾತ್ರ ಆಸಕ್ತಿ ತೋರುತ್ತಿದ್ದಾರೆ ಎಂದು ಎಂ.ಎಂ.ಮಣಿ ಆರೋಪಿಸಿದರು.
'ತೆರಿಗೆ ಹಣದಲ್ಲಿ ಲಭಿಸುವ ಸಂಬಳ ಸ್ವೀಕರಿಸಿ, ಚೆನ್ನಾಗಿ ತಿಂದು ಕೊಬ್ಬಿದ್ದಾರೆ. ಗಡಿಯಲ್ಲಿ ತಮಿಳುನಾಡಿನ ಅತಿಕ್ರಮಣ ತಡೆಯಲು ಅರಣ್ಯ ಇಲಾಖೆ ಏನೂ ಮಾಡುತ್ತಿಲ್ಲ. ಗಡಿಭಾಗದ ಎಲ್ಲ ಅಧಿಕಾರಿಗಳನ್ನು ಬದಲಾಯಿಸಬೇಕು' ಎಂದು ಎಂ.ಎಂ.ಮಣಿ ಹೇಳಿದರು. ಇಡುಕ್ಕಿಯ ಕಂಬಮ್ಮೆಟ್ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಈ ಟೀಕೆ ಮಾಡಿದ್ದಾರೆ.





