ಕೊಚ್ಚಿ: ಕರ್ತವ್ಯದ ವೇಳೆ ಬರ್ಬರವಾಗಿ ಹತ್ಯೆಗೀಡಾದ ಡಾ.ವಂದನಾ ಸಾವಿನ ಕುರಿತು ಹೈಕೋರ್ಟ್ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅಳಲು ತೋಡಿಕೊಂಡರು.
ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಮತ್ತು ನ್ಯಾಯಮೂರ್ತಿ ಡಾ.ಕೌಸರ್ ಎಡಪ್ಪಗತ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ವಿಷಯವನ್ನು ತುರ್ತಾಗಿ ಪರಿಗಣಿಸಿದಾಗ, ನ್ಯಾಯಾಧೀಶರ ಕಣ್ಣುಗಳು ವಂದನಾ ಅವರ ಸಾವಿನ ಮಾತುಗಳಿಂದ ತುಂಬಿದ್ದವು. ಆ ಹುಡುಗಿಯನ್ನು ನಮ್ಮ ಮಗಳಂತೆ ನೋಡುತ್ತೇವೆ. ಬಡಪಾಯಿಯಾದ ಆಕೆ ಕೊನೆ ಕ್ಷಣದಲ್ಲಿ ಆರೋಪಿ ಮುಂದೆ ಸಿಕ್ಕಿಬಿದ್ದಿದ್ದು ದುದ್ರ್ಯೆವ. ಎμÉ್ಟೂಂದು ಭಯ, ನೋವು ಅನುಭವಿಸಿರಬಹುದು’ ಎನ್ನುತ್ತಿರುವಂತೆ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರ ಮಾತುಗಳು ದುಃಖದಿಂದ ತೊದಲಿತು. ಕನ್ನಡಕ ಧರಿಸಿದ್ದ ಅವರು ಕಣ್ಣು ಒರೆಸಿಕೊಳ್ಳುತ್ತಾ ಮಾತು ಮುಂದುವರೆಸಿದರು. ನನಗಿನ್ನೂ ಯೋಚಿಸಲು ಸಾಧ್ಯವಾಗುತ್ತಿಲ್ಲ. ಆಕೆಯ ತ್ಯಾಗವನ್ನು ಎಂದಿಗೂ ಮರೆಯಲಾಗದು. ನ್ಯಾಯಾಲಯ ಗೌರವ ಸಲ್ಲಿಸುತ್ತದೆ ಎಂದೂ ನ್ಯಾಯಾಲಯ ಹೇಳಿದೆ.
ಇಂತಹ ಘಟನೆ ದೇಶದಲ್ಲಿ ಬೇರೆಲ್ಲಿಯಾದರೂ ನಡೆದಿದೆಯೇ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಪ್ರಶ್ನಿಸಿದ್ದರು. ಘಟನೆಯಲ್ಲಿ ಸರ್ಕಾರ ಮತ್ತು ಪೆÇಲೀಸರನ್ನು ಕೋರ್ಟ್ ಟೀಕಿಸಿದೆ. ಪೆÇಲೀಸರ ಬಳಿ ಬಂದೂಕು ಇಲ್ಲವೇ ಎಂಬುದು ನ್ಯಾಯಾಲಯದ ಪ್ರಶ್ನೆ. ವೈದ್ಯರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಆಸ್ಪತ್ರೆಗಳನ್ನು ಮುಚ್ಚಬೇಕು ಎಂದು ಅವರು ಹೇಳಿದರು. ಪೋಲೀಸರ ಸ್ಥಾನದಲ್ಲಿ ಸೈನಿಕರಾಗಿದ್ದರೆ ವೈದ್ಯೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ನೀಡುತ್ತಿದ್ದರು ಎಂಬ ಟೀಕೆ ನ್ಯಾಯಾಲಯ ಹೇಳಿದೆ.





