HEALTH TIPS

ಕಲೆ, ಸಾಹಿತ್ಯ, ಸಂಸ್ಕøತಿ ಉಳಿಸಿ ಬೆಳೆಸುತ್ತಿರುವ ರಂಗಚಿನ್ನಾರಿ ಅಭಿನಂದನಾರ್ಹ : ಎಡನೀರು ಶ್ರೀ

             ಬದಿಯಡ್ಕ: ಭಾಷೆ, ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಮೂಲಕ ಜನರಿಗೆ ದಯೆ, ಉದಾರತೆ ಮತ್ತು ಶಿಸ್ತು ಕಲಿಸುತ್ತದೆ. ಭಾರತವು ಶ್ರೀಮಂತ ಸಂಸ್ಕøತಿ  ಮತ್ತು ಸಂಪ್ರದಾಯ ಹೊಂದಿದ್ದು, ಇದನ್ನು ಉಳಿಸಿ ಬೆಳೆಸುವುದಕ್ಕೆ ಪ್ರತಿಯೊಬ್ಬ ಕಂಕಣ ಬದ್ಧರಾಗಿರಬೇಕು. ಆ ಮೂಲಕ ಮುಂದಿನ ತಲೆಮಾರಿಗೆ ಸಂಸ್ಕøತಿಯ ಮೌಲ್ಯವನ್ನು ದಾಟಿಸಲು ಸಾಧ್ಯವಾಗುತ್ತದೆ. ಇಂತಹ ಕೆಲಸವನ್ನು ಮಾಡುತ್ತಿರುವ ರಂಗಚಿನ್ನಾರಿ ಸಂಸ್ಥೆ ಅಭಿನಂದನಾರ್ಹ. ಕಲೆ, ಸಂಸ್ಕøತಿಗೆ ವಿಶೇಷ ಕೊಡುಗೆ ನೀಡುತ್ತಿರುವ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವುದರಿಂದ ಅವರಿಗೆ ಇನ್ನಷ್ಟು ಪೆÇ್ರೀತ್ಸಾಹ ಲಭಿಸಿದಂತಾಗುತ್ತದೆ ಎಂದು ಶ್ರೀಮದ್. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು. 

              ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆಯಾಗಿರುವ ರಂಗಚಿನ್ನಾರಿ ಕಾಸರಗೋಡು ಸಂಸ್ಥೆಯ 17 ನೇ ವಾರ್ಷಿಕೋತ್ಸವವನ್ನು ಎಡನೀರು ಮಠ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.  

           ಕಾರ್ಯಕ್ರಮದಲ್ಲಿ ಡಾ.ಅನಂತ ಕಾಮತ್ ಅಧ್ಯಕ್ಷತೆ ವಹಿಸಿದರು. ಶಾಸಕ ನ್ಯಾಯವಾದಿ ಪ್ರತಾಪ ಸಿಂಹ ನಾಯಕ್ ಅವರು ಮಾತನಾಡಿ ಭಾರತದ ಆತ್ಮವೇ ಆಧ್ಯಾತ್ಮ ಎಂದು ಪ್ರಶಸ್ತಿ ಪ್ರದಾನ ಮಾಡಿದರು. ನೃತ್ಯ ಕಲಾವಿದೆ, ಚಲನಚಿತ್ರ ನಟಿ ವಿದುಷಿ ಮಾನಸಿ ಸುಧೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನಿವೃತ್ತ ಅಧ್ಯಾಪಕ ಮಾಧವ ಹೇರಳ ಶುಭಾಶಂಸನೆಗೈದರು. ಡಾ.ರೋಹಿಣಿ ಅಯ್ಯರ್ ಅವರ ಸಾಕ್ಷಿ ಪುಸ್ತಕವನ್ನು ಎಡನೀರು ಶ್ರೀ ಬಿಡುಗಡೆಗೊಳಿಸಿದರು. ಗಿರಿಜಾ ಚಂದ್ರನ್ ಪ್ರಥಮ ಪ್ರತಿ ಸ್ವೀಕರಿಸಿದರು. 

       ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಖ್ಯಾತ ಡ್ರಮ್ ಕಲಾವಿದ ಗಣೇಶ್ ಕುಂಬಳೆ, ಖ್ಯಾತ ವೈದೈ ಡಾ.ರಮಾ ಐಯ್ಯರ್, ಖ್ಯಾತ ನೃತ್ಯ ಗುರು ವಿದ್ವಾನ್ ಸುಧೀರ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಡಾ.ನಾ.ದಾ.ಶೆಟ್ಟಿ ಅಭಿನಂದನ ಭಾಷಣ ಮಾಡಿದರು. 

           ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಾದ ಪೂಕಳ ಲಕ್ಷ್ಮೀನಾರಾಯಣ ಭಟ್ ಅವರಿಗೆ ರಂಗಚಿನ್ನಾರಿ-ಕೇಶವಾನಂದ ಭಾರತೀ ಪ್ರಶಸ್ತಿ, ಖ್ಯಾತ ಕಥೆಗಾರ ವಿಠಲ ಗಟ್ಟಿ ಉಳಿಯ ಮತ್ತು ಖ್ಯಾತ ವಾಗ್ಮಿ ಕೆ.ಜಯಲಕ್ಷ್ಮೀ ಕಾರಂತ ಅವರಿಗೆ ರಂಗಚಿನ್ನಾರಿ ಪ್ರಶಸ್ತಿ ಹಾಗು ಜಾನಪದ ಕ್ಷೇತ್ರದಲ್ಲಿ ಸುಜಿತ್ ಕುಮಾರ್, ಸಂಗೀತ ಕ್ಷೇತ್ರದ ಸಾಧನೆಗಾಗಿ ಬಿ.ಮೇಧಾ ಕಾಮತ್ ಅವರಿಗೆ ರಂಗಚಿನ್ನಾರಿ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. 

             ನೃತ್ಯ ನಿಕೇತನ ಕೊಡವೂರು ಉಡುಪಿ ಕಲಾವಿದರಿಂದ ನೃತ್ಯ ಸಿಂಚನ ಮತ್ತು ಖ್ಯಾತ ಗಾಯಕ ಕಿಶೋರ್ ಪೆರ್ಲ ಅವರಿಂದ ಭಾವÀ ಗಂಧ ಕಾರ್ಯಕ್ರಮ ಜರಗಿತು. ಸಂಸ್ಥೆಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries