HEALTH TIPS

ನೀಲೇಶ್ವರದಲ್ಲಿ ಸ್ವಚ್ಛತಾ ಹರತಾಳ: ಮಳೆಗಾಲಪೂರ್ವ ಶುಚೀಕರಣಕಾರ್ಯಕ್ಕೆ ಚಾಲನೆ

          ಕಾಸರಗೋಡು: ನೀಲೇಶ್ವರ ನಗರಸಭೆ ಆಶ್ರಯದಲ್ಲಿ ಕಸಮುಕ್ತ ನವಕೇರಳ ಶಿಬಿರದ ಅಂಗವಾಗಿ ಎಲ್ಲ ವಾರ್ಡ್ ಗಳಲ್ಲಿ ನಡೆಯಲಿರುವ ಸ್ವಚ್ಛತಾ ಕಾರ್ಯಕ್ಕೆ ನಗರಸಭಾ ಅಧ್ಯಕ್ಷೆ ಟಿ.ವಿಶಾಂತಾ ಚಾಲನೆ ನೀಡಿದರು. ಈ ಮೂಲಕ ಮಳೆಗಾಲಪೂರ್ವ ಶುಚೀಕರಣ ಕಾರ್ಯವನ್ನೂ ಆರಂಭೀಸಲಾಯಿತು.  ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಪಿ ರವೀಂದ್ರನ್, ಸಿಡಿಎಸ್ ಉಪಾಧ್ಯಕ್ಷೆ ಎಂ.ಶಾಂತಾ, ¥ನಗರಸಭೆ ಆರೋಗ್ಯ ಮೇಲ್ವಿಚಾರಕ ಟಿ.ಅಜಿತ್ ಉಪಸ್ಥಿತರಿದ್ದರು. 

          ಪ್ರತಿ ವಾರ್ಡ್‍ನಲ್ಲಿ ಕೌನ್ಸಿಲರ್‍ಗಳು, ವ್ಯಾಪಾರಿಗಳು,  ಕೈಗಾರಿಕೋದ್ಯಮಿಗಳು, ವಸತಿ ಸಂಘಗಳ ಸದಸ್ಯರು, ಕುಟುಂಬಶ್ರೀ-ಹಸಿರು ಕ್ರಿಯಾ ಸೇನೆ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಯುವ ಸ್ವಯಂಸೇವಾ ಸಂಸ್ಥೆಗಳು ಮತ್ತು ಕ್ಲಬ್‍ಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಕ್ರಮದ ಮೂಲಕ ಶಾಲಾ ವಿದ್ಯರ್ಥಿಗಳನ್ನೂ ಒಳಪಡಿಸಿ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳು ಮತ್ತು ಜಲಾನಯನ ಪ್ರದೇಶಗಳಿಂದ ಕಸ ತೆಗೆದು ಶುಚೀಕರಣ ಕಾರ್ಯ ನಡೆಸಲಾಯಿತು. ಈ ಮೂಲಕ ಪ್ರತಿ ವಾರ್ಡ್‍ಗಳನ್ನು ಕಸ ಮುಕ್ತ ವಾರ್ಡ್ ಎಂದು ಘೋಷಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries