HEALTH TIPS

ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಉದ್ಯೋಗಿಗೆ ವೇತನ ಬಡ್ತಿ: ಸಿಕ್ಕಿಂ ಸರ್ಕಾರ ಯೋಜನೆ

                 ಗ್ಯಾಂಗ್ಟಕ್‌: ಎರಡು ಅಥವಾ ಮೂರು ಮಕ್ಕಳಿರುವ ಸರ್ಕಾರಿ ಉದ್ಯೋಗಿಗೆ ಮುಂಗಡ ಮತ್ತು ಹೆಚ್ಚುವರಿ ವೇತನ ಬಡ್ತಿ ನೀಡಲು ಸಿಕ್ಕಿಂ ಸರ್ಕಾರ ನಿರ್ಧರಿಸಿದೆ. ಇಲ್ಲಿನ ಸ್ಥಳೀಯ ಬುಡಕಟ್ಟು ಸಮುದಾಯದಗಳ ಜನಸಂಖ್ಯೆ ಹೆಚ್ಚಳವನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.

                'ಈ ಯೋಜನೆಯು ಇದೇ ಜನವರಿ 1ರಿಂದ ಪೂರ್ವಾನ್ವಯವಾಗಲಿದೆ. ಉದ್ಯೋಗಿಯ ಎರಡನೇ ಅಥವಾ ಮೂರನೇ ಮಗುವು 2023ರ ಜನವರಿ 1ರಂದು ಅಥವಾ ಇದರ ನಂತರ ಜನಿಸಿರಬೇಕು. ಜೊತೆಗೆ ಮಕ್ಕಳನ್ನು ದತ್ತು ಪಡೆದಿದ್ದರೆ ಅಂಥವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ' ಎಂದು ಸಿಬ್ಬಂದಿ ಖಾತೆ ಸಚಿವಾಲಯವು ಮೇ 10ರಂದು ಸುತ್ತೋಲೆ ಹೊರಡಿಸಿದೆ.

              ' ಸಿಕ್ಕಿಂ ನಿವಾಸಿ ಎಂದು ದೃಢಪಡಿಸುವ ಪ್ರಮಾಣಪತ್ರ ಹೊಂದಿರುವ ಉದ್ಯೋಗಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಮೂವರು ಮಕ್ಕಳಿರುವ ಉದ್ಯೋಗಿಗೆ ಒಂದು ವೇತನ ಬಡ್ತಿ ನೀಡಲಾಗುವುದು. ದಂಪತಿಯಲ್ಲಿ ಯಾರಾದರೂ ಒಬ್ಬರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು' ಎಂದು ಸಚಿವಾಲಯ ತಿಳಿಸಿದೆ.

               'ಸ್ಥಳೀಯ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಹೆಚ್ಚಿಸಲು ಸರ್ಕಾರವು ಕ್ರಮಕೈಗೊಳ್ಳಲಿದೆ' ಎಂದು ಇದೇ ವರ್ಷದ ಜನವರಿಯಲ್ಲಿ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಂಗ್‌ ಅವರು ಭರವಸೆ ನೀಡಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries