HEALTH TIPS

ಅತಿಯಾದ ಯೋಚನೆ ಸಂಬಂಧಕ್ಕೆ ಕೊಳ್ಳಿ ಇಡಬಹದು!

 ಸಂಬಂಧದಲ್ಲಿ ನಂಬಿಕೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ನಂಬಿಕೆಯ ಹೊರತಾಗಿ ಒಂದು ಸಂಬಂಧ ಕೊನೆವರೆಗೆ ಉಳಿಯೋದಕ್ಕೆ ಸಾಧ್ಯವಾಗೋದಿಲ್ಲ. ಕೆಲವೊಂದು ಸಂಬಂಧಗಳಲ್ಲಿ ಏನಾಗುತ್ತೆ ಎಂದರೆ ಇಬ್ಬರಲ್ಲಿ ಯಾರಾದರೂ ಒಬ್ಬರು ಒಂದು ವಿಚಾರದ ಬಗ್ಗೆ ತುಂಬಾನೇ ಆಳವಾಗಿ ಯೋಚಿಸೋದಕ್ಕೆ ಶುರು ಮಾಡುತ್ತಾರೆ.

ಒಂದು ಜಗಳ, ಮನಸ್ಥಾಪ ಅಥವಾ ಬೇರ್ಯಾವುದೇ ವಿಚಾರದ ಬಗ್ಗೆ ತುಂಬಾನೇ ಆಲೋಚನೆ ಮಾಡುತ್ತಾರೆ. ಇದರಿಂದ ನಿಮ್ಮ ಸಂಬಂಧ ಹಾಳಾಗಿ ಹೋಗಬಹುದು. ಅಷ್ಟಕ್ಕು ಅತಿಯಾದ ಚಿಂತನೆ ಸಂಬಂಧವನ್ನು ಯಾವ ರೀತಿ ಹಾಳು ಮಾಡುತ್ತೆ ಅನ್ನೋದನ್ನು ತಿಳಿಯೋಣ.

1. ಅತಿಯಾಗಿ ಅನುಮಾನ ಪಡಬೇಡಿ
ಒಂದು ಕುಟುಂಬ ಹಾಳಾಗಾಲು ಮುಖ್ಯ ಕಾರಣ ಅನುಮಾನ. ಗಂಡ- ಹೆಂಡತಿಯ ಮೇಲೆ ಹಾಗೂ ಹೆಂಡತಿಯು ಗಂಡನ ಮೇಲೆ ಅನುಮಾನ ಪಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ. ಕೆಲವೊಂದು ಸಲ ನೀವು ನಿಮ್ಮ ಪತಿ ಅಥವಾ ಪತ್ನಿಯನ್ನು ಅತಿಯಾಗಿ ಅನುಮಾನ ಪಡೋದಕ್ಕೆ ಶುರು ಮಾಡುತ್ತೀರಿ. ಇದು ನಿಮ್ಮ ಸಂಗಾತಿಗೆ ಕಿರಿ ಕಿರಿ ಅನ್ನಿಸೋದಕ್ಕೆ ಶುರುವಾಗಿ ಅವರು ನಿಮ್ಮನ್ನು ಬಿಟ್ಟು ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಅತಿಯಾದ ಅನುಮಾನ ಒಳ್ಳೆಯದಲ್ಲ.

2. ನೀವು ನಿಮ್ಮತನವನ್ನು ಕಳೆದುಕೊಳ್ಳುತ್ತೀರಿ
ಮದುವೆಯಾದ ನಮಗೆ ನಮ್ಮ ಕುಟುಂಬ ಮುಖ್ಯವಾಗುತ್ತದೆ ಹೌದು. ನಮ್ಮ ಸಂಗಾತಿ ಹಾಗೂ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿಯನ್ನು ಮಾಡುತ್ತೇವೆ. ಹಾಗಂತ ನಾವು ನಮ್ಮ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಬಿಡುತ್ತೇವೆ ಅಂತಲ್ಲ. ನಾವು ನಮ್ಮ ಬಗ್ಗೆ ಚಿಂತಿಸುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಆದರೆ ಯಾವಾಗ ನಾವು ಒಂದು ವಿಚಾರದ ಬಗ್ಗೆ ಆಳವಾಗಿ ಚಿಂತಿಸೋದಕ್ಕೆ ಶುರು ಮಾಡುತ್ತೇವೆಯೋ ಆಗ ನಮ್ಮತನವನ್ನು ನಾವು ಕಳೆದುಕೊಂಡು ಬಿಡುತ್ತೇವೆ. ಹೀಗಾಗಿ ಚಿಂತನೆ ಇರಬೇಕು ಆದರೆ ಅದು ಅತಿಯಾದರೆ ಒಳ್ಳೆಯದಲ್ಲ.

3. ಸಮಸ್ಯೆಗಳು ಹೆಚ್ಚಾಗುತ್ತದೆ, ಪರಿಹಾರ ಸಿಗೋದಿಲ್ಲ
ಸಂಬಂಧದಲ್ಲಿ ಸಮಸ್ಯೆಗಳು ಹುಟ್ಟಿಕೊಳ್ಳೋದು ಸಹಜ. ಹಾಗಂತ ಆ ಸಮಸ್ಯೆಗಳನ್ನು ದೊಡ್ಡದು ಮಾಡುತ್ತಾ ಹೋಗಬಾರದು. ಅದರ ಬಗ್ಗೆ ಚಿಂತಿಸುವುದಕ್ಕೆ ಹೋಗಬೇಡಿ. ಆಳವಾಗಿ ಚಿಂತನೆ ಮಾಡುವುದಂತೂ ಬೇಡವೇ ಬೇಡ. ಬದಲಾಗಿ ಹುಟ್ಟಿಕೊಂಡ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಹೇಗೆ ಎಂಬುವುದನ್ನು ಕಂಡುಕೊಳ್ಳಿ. ದಂಪತಿಗಳಿಬ್ಬರು ಕೂತು ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

4. ನಂಬಿಕೆ ಕಳೆದುಕೊಂಡು ಬಿಡುತ್ತೇವೆ
ಸಂಬಂಧದಲ್ಲಿ ನಂಬಿಕೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಪತಿ ಹಾಗೂ ಪತ್ನಿಗೆ ಒಬ್ಬರ ಮೇಲೆ ಮತ್ತೊಬ್ಬರಿಗೆ ನಂಬಿಕೆ ಇರಲೇಬೇಕು. ಸಂಬಂಧದಲ್ಲಿ ಯಾರಾದರೂ ಒಬ್ಬರು ನಂಬಿಕೆ ಕಳೆದುಕೊಂಡಾಗ ಇಬ್ಬರು ಜೊತೆಯಾಗಿ ಕೂತು ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಆ ವಿಚಾರದ ಬಗ್ಗೆ ಯೋಚಿಸುತ್ತಾ ಕೂತರೆ ಏನು ಪ್ರಯೋಜನ ಆಗೋದಿಲ್ಲ. ಇದರಿಂದ ನಿಮ್ಮ ಸಮಯವು ವ್ಯರ್ಥವಾಗುತ್ತದೆ. ಹಾಗೂ ಸಂಬಂಧವು ಹಾಳಾಗುತ್ತದೆ.

5. ಆತಂಕ ಹೆಚ್ಚಾಗುತ್ತದೆ
ಒಂದು ವಿಚಾರದ ಬಗ್ಗೆ ಅತಿಯಾಗಿ ಯೋಚಿಸೋದ್ರಿಂದ ಆತಂಕ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿ ಅಥವಾ ಮಕ್ಕಳು ನಿಮ್ಮ ಮಾತನ್ನು ಕೇಳದಿದ್ದರೆ ಅಥವಾ ನಿಮ್ಮಲ್ಲಿ ಯಾವುದಾದರೂ ರಹಸ್ಯವನ್ನು ಮುಚ್ಚಿಟ್ಟರೆ ನೀವು ಅದೇ ವಿಚಾರದ ಬಗ್ಗೆ ಚಿಂತಿಸೋದಕ್ಕೆ ಶುರು ಮಾಡುತ್ತೀರಿ. ಇದರಿಂದ ನಿಮ್ಮಲ್ಲಿ ಆತಂಕ ಹೆಚ್ಚಾಗುತ್ತದೆ. ಮನೆಯಲ್ಲಿ ಜಗಳ, ಮನಸ್ಥಾಪಗಳು ಶುರುವಾಗುತ್ತದೆ. ಇನ್ನೂ ಹೆಚ್ಚಾದ ಆತಂಕ ನಿಮ್ಮಲ್ಲಿ ಒತ್ತಡ ಹೆಚ್ಚಾಗುವಂತೆ ಮಾಡುತ್ತದೆ.

6. ಕುಟುಂಬದಲ್ಲಿ ಸಂತೋಷವೇ ಕಳೆದು ಹೋಗುತ್ತದೆ
ಒಂದು ಕುಟುಂಬ ಎಂದ ಮೇಲೆ ಆ ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಿರಬೇಕು. ಆದರೆ ಗಂಡ- ಹೆಂಡತಿಯ ಸಂಬಂಧವೇ ಸರಿಯಾಗಿ ಇರದಿದ್ದರೆ ಒಂದೊಂದೇ ಸಮಸ್ಯೆಗಳು ಹುಟ್ಟಿಕೊಳ್ಳೋದಕ್ಕೆ ಆರಂಭವಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಅದರ ಬಗ್ಗೆ ಅತಿಯಾಗಿ ಚಿಂತಿಸುವುದಕ್ಕೆ ಹೋದರೆ ಇದೇ ರೀತಿ ಆಗುತ್ತದೆ. ಕುಟುಂಬದಲ್ಲಿ ಸಂತೋಷ ಎಂಬುವುದು ಮರಿಚಿಕೆಯಾಗುತ್ತದೆ.

7. ಸಂಗಾತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು
ಒಂದು ಸಂಸಾರ ಎಂದ ಮೇಲೆ ಅಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಕೆಲವೊಂದು ಸಲ ದಂಪತಿಗಳ ಮಧ್ಯೆ ಕೆಲವೊಂದು ತಪ್ಪು ಗ್ರಹಿಕೆಗಳು ಉಂಟಾಗೋದು ಸಹಜ. ಹಾಗಂತ ನೀವು ನಿಮ್ಮಸಂಗಾತಿಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಅದರ ಬಗ್ಗೆಯೇ ಚಿಂತಿಸುತ್ತಾ ಕೂರುವುದು ಸರಿಯಲ್ಲ. ಇದರಿಂದ ಸಂಬಂಧದಲ್ಲಿ ಬಿರುಕು ಮೂಡುತ್ತದೆ.

ಸಂಬಂಧದಲ್ಲಿ ಯಾವುದೇ ವಿಚಾರಗಳು ಬಂದರೂ ಸರಿ. ಒಂದು ವಿಚಾರದ ಬಗ್ಗೆ ಅತಿಯಾದ ಆಲೋಚನೆ ಯಾವುದೇ ಕಾರಣಕ್ಕೂ ಮಾಡೋದಕ್ಕೆ ಹೋಗಲೇಬಾರದು ಇದರಿಂದ ಒಂದಿಡೀ ಸಂಸಾರವೇ ನಾಶವಾಗಬಹುದು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries