HEALTH TIPS

ಬದಿಯಡ್ಕದಲ್ಲಿ "ಅನಂತ ಉತ್ಸಾಹ" ಏಕದಿನ ಮಕ್ಕಳ ಶಿಬಿರ

         ಬದಿಯಡ್ಕ : ಪರಂ ಕಂಪ್ಯೂಟರ್ ಸಂಸ್ಥೆ ಹಾಗೂ  ಮಾತೃಶ್ರೀ ಟ್ರಸ್ಟ್ ಇದರ ಸಂಯೋಜನೆಯಲ್ಲಿ "ಅನಂತ ಉತ್ಸಾಹ" ಎಂಬ ಮಕ್ಕಳ ಏಕದಿನ ಶಿಬಿರ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಜರಗಿತು.

            ಡಾ.ಶ್ರೀನಿಧಿ ಸರಳಾಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಂ ಕಂಪ್ಯೂಟರ್ ಸಂಸ್ಥೆಯ ಪ್ರಾಂಶುಪಾಲ ಕಿಶೋರ್ ಕುಮಾರ್ ಕೆ. ಸಭೆಯ ಅಧ್ಯಕ್ಷತೆವಹಿಸಿದ್ದರು. ಮಕ್ಕಳ ರಂಗ ತಜ್ಞ, ಶಿಕ್ಷಕ ಉದಯ ಸಾರಂಗ್, ಪ್ರಗತಿ ಸ್ಪೇಶಲ್ ಸ್ಕೂಲ್ ನ ನಿರ್ದೇಶಕ ಉದಯ ಕುಮಾರ್ ಎಂ., ಪತ್ರಕರ್ತ ಜಯ ಮಣಿಯಂಪಾರೆ, ಜಾನಪದ ಗಾಯಕ ಮನೀಷ್ ವಿದ್ಯಾಗಿರಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. 

           ಸುಮಾರು ನೂರರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಶಿಬಿರದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ, ರಂಗ ತರಬೇತು, ಜಾನಪದ ಹಾಡು, ವಿನೋದ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಧಾರ್ಮಿಕ ಮುಂದಾಳು, ಉಪ್ಲೇರಿ ಶ್ರೀಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಮುಖ್ಯ ಉಪನ್ಯಾಸಗೈದರು. ಈ ಸಂದರ್ಭದಲ್ಲಿ ಈ ಬಾರಿಯ ಎಸ್ಸಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅನೀಶ ಕೃಷ್ಣ, ನವನೀತ್ ನಾಯ್ಕ್ ಅವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ಕವಯಿತ್ರಿ ಆಯಿಷತ್ ತಸ್ಮೀರಾ ಅವರ "ಕಾತಿರಿಪ್ಪು" ಎಂಬ ಮಲೆಯಾಳಂ ಕವನ ಸಂಕಲನ ಅನಾವರಣಗೊಳಿಸಲಾಯಿತು. ಅದೃಷ್ಟ ಚೀಟಿ ವಿಜೇತೆಯಾದ ಪ್ರಸನ್ನ ಕುಮಾರಿ ಅವರಿಗೆ ಸ್ಮಾರ್ಟ್ ಪೋನ್ ಹಸ್ತಾಂತರಿಸಲಾಯಿತು. ವಿಭಿನ್ನ ಸಾಮಾಥ್ರ್ಯದ ಪ್ರತಿಭೆ ತೃಷಾಲಕ್ಷ್ಮಿ, ಸ್ವಾತಿ, ಪ್ರಸನ್ನ, ಸೌಮ್ಯ, ರಚನಾ ವ್ಯಕ್ತಿಗತ ಪ್ರತಿಭೆ ಪ್ರದರ್ಶಿಸಿದರು. ಬ್ಲಾಕ್ ಪಂ.ಮಾಜಿ ಸದಸ್ಯ ಪ್ರದೀಪ್ ಎಂ ಮುಂಡಿತ್ತಡ್ಕ, ಗೀತಾ ಎಂ.ಭಟ್ ಉಪಸ್ಥಿತರಿದ್ದರು. ಮಮತಾ ಟೀಚರ್ ಸ್ವಾಗತಿಸಿ, ಚೈತ್ರಾ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries